ಪರಿವರ್ತನೆಯಾಗುತ್ತಿದ್ದು, ಇದರ ಕಾಮಗಾರಿಯು ಭರದಿಂದ ಸಾಗಿದ್ದು, ಜನವರಿ ಇಲ್ಲವೆ ಫೆಬ್ರವರಿಯಲ್ಲಿ
ಕಾರ್ಯಾರಂಭಗೊಳ್ಳುವ ನಿರೀಕ್ಷೆಗಳಿವೆ.
Advertisement
ನಗರದ ವಿಮಾನ ನಿಲ್ದಾಣದಿಂದ ದೇಶದ ವಿವಿಧೆಡೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೊತೆಗೆ ಸರಕು ಸಾಗಾಟವೂ ಹೆಚ್ಚಳವಾಗುತ್ತಿದೆ. ಹೀಗಾಗಿ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಡೊಮೆಸ್ಟಿಕ್ ಏರ್ ಕಾರ್ಗೋ ವಿಮಾನ (ಸರಕು ಸಾಗಣೆ)ಗಳ ಬಳಕೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದ್ದು, ಇದರ ಕಾಮಗಾರಿಭರದಿಂದ ನಡೆದಿದೆ. ನಗರದಲ್ಲಿ ನಿರ್ಮಿಸಲಾಗುತ್ತಿರುವ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್‌ಗೆ ಎರಡು ದಿನಗಳ ಹಿಂದೆ
ಬ್ಯೂರೋ ಆಫ್ ಸಿವಿಲ್ ಎವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಅಧಿಕಾರಿಗಳು ಬಂದು ಭೇಟಿಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾರ್ಗೋ ನಿಲ್ದಾಣಕ್ಕೆ ಅವಶ್ಯವಾದ ಮೂಲಸೌಕರ್ಯಗಳು ಹಾಗೂ ಭದ್ರತಾ ಕ್ರಮಗಳ ಕುರಿತು ಕೆಲವು ಸಲಹೆ-ಸೂಚನೆ ನೀಡಿದ್ದು, ಅದರಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
Related Articles
ನಗರದಿಂದ ದೇಶದ ವಿವಿಧ ಪ್ರದೇಶಗಳಿಗೆ ಸರಕು ಸಾಗಾಣಿಕೆ ಹಾಗೂ ಆಮದಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಈಗ ನಗರದಿಂದ ಹಿಂಡನ್ (ದೆಹಲಿ), ಮುಂಬಯಿ, ಬೆಂಗಳೂರು, ಅಹ್ಮದಾಬಾದ್, ತಿರುಪತಿ, ಚೆನ್ನೈ, ಕೊಚ್ಚಿ, ಕನ್ನೂರ,
ಗೋವಾಗೆ ವಿಮಾನಸೇವೆ ಒದಗಿಸುತ್ತಿರುವ ಕಂಪನಿಗಳು ತಮ್ಮ ವಿಮಾನಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಸರಕು ಸಾಗಾಟ ಮಾಡುತ್ತಿವೆ. ಇದರಿಂದ ಸರಕು, ಸಾಮಗ್ರಿ, ಉತ್ಪನ್ನ ಸಾಗಾಟಗಾರರು ಹಾಗೂ ಖರೀದಿದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಾಟಕ್ಕೆ ಸಮಸ್ಯೆ ಆಗುತ್ತಿದೆ. ನಗರದಲ್ಲಿ ಏರ್ ಕಾರ್ಗೋ ಟರ್ಮಿನಲ್ ಕಾರ್ಯಾರಂಭಗೊಂಡರೆ ಉತ್ತರ ಕರ್ನಾಟಕ ಭಾಗದ ಕೈಗಾರಿಕೋದ್ಯಮಿಗಳು, ಸರಕುಗಳ ಉತ್ಪಾದಕರಿಗೆ ಹಾಗೂ ವ್ಯಾಪಾರಸ್ಥರಿಗೆ ತಮ್ಮ ಉತ್ಪನ್ನಗಳು, ಸರಕುಗಳನ್ನು ಸರಬರಾಜು
ಮಾಡಲು ಹಾಗೂ ಬೇಡಿಕೆಯಿರುವ ಸರಕು, ಉತ್ಪನ್ನಗಳನ್ನು ಹೊರ ಪ್ರದೇಶಗಳಿಂದ ತರಿಸಿಕೊಳ್ಳಲು ಅನುಕೂಲವಾಗಲಿದೆ.
Advertisement
ಹಳೆಯ ವಿಮಾನ ನಿಲ್ದಾಣದಟರ್ಮಿನಲ್ ಅನ್ನು ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರ ಕಾಮಗಾರಿ
ಭರದಿಂದ ಸಾಗಿದ್ದು, ಜನವರಿ ಅಂತ್ಯಕ್ಕೆ ಇಲ್ಲವೆ ಫೆಬ್ರವರಿ ಮೊದಲಾರ್ಧದಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ.
– ಪ್ರಮೋದ ಕುಮಾರ ಠಾಕೂರ, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ – ಶಿವಶಂಕರ ಕಂಠಿ