Advertisement

ಬಹುಮಾನಕ್ಕೆಆಸೆ ಪಟ್ಟರೆ ಬಹುನಾಮ!

08:15 PM Oct 05, 2020 | Suhan S |

ನೀವು ಯಾವುದೋ ಮಾಲ್‌ಗೆ ಕುಟುಂಬದೊಂದಿಗೋ ಗೆಳೆಯರೊಂದಿಗೋ ಹೋಗಿರುತ್ತೀರ ಅಂದಿಟ್ಟುಕೊಳ್ಳಿ. ಏನೂ ಕೊಳ್ಳಬೇಕೆಂಬ ಉದ್ದೇಶವಿಲ್ಲದಿದ್ದರೂ ಸುಮ್ಮನೇ ಟೈಂ ಪಾಸಿಗೆ ಹೋಗಿರುತ್ತೀರಿ ಎಂದೇ ಇಟ್ಟುಕೊಳ್ಳೋಣ. ಅಲ್ಲಿನ ದ್ವಾರದಲ್ಲೇ ಒಂದು ಹೊಚ್ಚ ಹೊಸಕಾರ್‌ ನಿಂತಿರುತ್ತೆ. ಅಲ್ಲಿ ನಿಂತವನೊಬ್ಬ- “ಇದು ಹೊಸ ಹಬ್ಬದ ಲಕ್ಕಿ ಡ್ರಾಗೆ ಕೊಡೋಕಾರ್‌ ಸಾರ್‌. ನೀವೂ ಪಾಲ್ಗೊಳ್ಳಿ ಬನ್ನಿ..’ ಅಂತಕರೆಯುತ್ತಿರುತ್ತಾನೆ. ಅದರ ಪಕ್ಕದಲ್ಲೇ ಒಂದಿಷ್ಟು ವಾಷಿಂಗ್‌ ಮೆಷಿನು, ಫ್ರಿಡುj ಮುಂತಾದವುಗಳನ್ನೂ ಇಟ್ಟು ಇವನ್ನೂ

Advertisement

ಪಡೆಯಬಹುದು ಅಂತಿರುತ್ತೆ. ಇಷ್ಟನ್ನೆಲ್ಲಾ ಲಕ್ಕಿ ಡ್ರಾದಲ್ಲಿ ಫ್ರೀಯಾಗಿ ಕೊಟ್ಟಿಡ್ತಾರಾ, ಇಲ್ಲೇನೋ ಮೋಸ ಇದೆ ಅಂತ ನೀವು ಎಚ್ಚೆತ್ತುಕೊಳ್ಳಬೇಕು ಇಷ್ಟೊತ್ತಿಗೆ. ಆದರೆ ಫ್ರೀಯಾಗಿ ತಾನೇ, ಭಾಗವಹಿಸೋದ್ರಿಂದ ಕಳಕೊಳ್ಳೋದೇನು ಅಂತ ಮುಂದೆ ಹೋಗ್ತೀರಾ “ಇದ್ರಲ್ಲಿ ಭಾಗವಹಿಸೋದಕ್ಕೆ ಏನ್ಮಾಡಬೇಕಪ್ಪ?’ ಅಂತೀರ. “ಏನಿಲ್ಲ ಸಾರ್‌, ಇಲ್ಲಿರೋ ಚೀಟಿಯಲ್ಲಿ ನಿಮ್ಮ ಹೆಸರು, ಉದ್ಯೋಗ, ವಿಳಾಸ ಮತ್ತೆ ಮೊಬೈಲ್‌ ನಂಬರ್‌ ಬರೆದುಕೊಡಬೇಕು, ಅಷ್ಟೇ’ ಅಂತ ಹೇಳ್ತಾನೆ. ನಿಮ್ಮ ಹೆಸರು, ವಿಳಾಸ ಮತ್ತೆ ಮೊಬೈಲ್‌ ಸರಿಯಾಗೇ ಇರಬೇಕು. ಇಲ್ಲಾಂದ್ರೆ ನಿಮಗೆ ಗಿಫ್ಟ್ ಬಂದರೂ ಅದನ್ನ ನಿಮಗೆ ತಲುಪಿಸಲಾಗೋಲ್ಲ ನೋಡಿ ಅಂತ ಎರಡೆರಡು ಸಲ ಹೇಳ್ತಾನೆ ಆತ!

ನೀವು ಆ ಮಾಹಿತಿಗಳನ್ನೆಲ್ಲಾ ಚೀಟಿಯಲ್ಲಿ ಬರೆದು ಅವರುಕೊಡೋ ಡಬ್ಬಿಗೆ ಹಾಕಿದಿರೆಂದರೆ, ಈ ಟೆಲಿ ಕಾಲರ್‌ ಕಂಪನಿಗಳ ಬಲೆಗೆ ಬಿದ್ದಿರೆಂದೇ ಅರ್ಥ! ಅವರು ನಿಮ್ಮ ಮನೆಯವರ, ಗೆಳೆಯರ ಮಾಹಿತಿಗಳನ್ನೂ ತುಂಬಬಹುದು ಸಾರ್‌, ಅವರಿಗೂ ಗಿಫ್ಟ್ ಬರಬಹುದು ಅಂತಾ ಪುಕ್ಕಟೆ ಸಲಹೆಕೊಡ ಬಹುದು. ಅದನ್ನು ಕೇಳಿದರೆ ನೀವೊಬ್ಬರೇ ಬೀಳ್ಳೋದಲ್ಲದೇ ನಿಮ್ಮ ಪ್ರೀತಿಪಾತ್ರರನ್ನೂ ಈ ಮೋಸದ ಖೆಡ್ಡಾಕ್ಕೆ ನೀವೇ ತಳ್ಳಿದಂತೆ!

ಎಲ್ಲೆಲ್ಲಿಂದಲೋ ಬರೋಕಾಲ್‌ಗ‌ಳು : ಯಾವುದೋ ಸಾಲ ಕೊಡೋ ಸಂಘವೋ, ಬ್ಯಾಂಕೊಂದರ ಆಗಿರಬಹುದು, ಹೊಸ ಇಂಟರ್ನೆಟ್‌ ಸೇವೆ ಪ್ರಾರಂಭಿಸ್ತಿರೋರಾಗಿರಬಹುದು, ಯಾವುದೋ ಲಾಟರಿಯಲ್ಲಿ ನಿಮಗೆ ದುಡ್ಡು ಬಂದಿದೆ. ಅದನ್ನು ಪಡೆಯೋಕೆ ಇಷ್ಟುಕಟ್ಟಿ ಅಂತ ಜನರನ್ನು ವಂಚಿಸೋ ಖದೀಮರಿರಬಹುದು. ಅವರಿಗೆ ಹೊಸ ಸ್ಥಳದಲ್ಲಿನ ಜನರನ್ನು ಸಂಪರ್ಕಿಸಬೇಕು ಅಂದ್ರೆ, ಆ ಜಾಗದಲ್ಲಿರೋ ಗ್ರಾಹಕರ ಮಾಹಿತಿ ಬೇಕಾಗುತ್ತೆ. ಮುಂಚೆಯೆಲ್ಲಾ ಟೆಲಿಫೋನ್‌ ಡೈರೆಕ್ಟರಿಗಳಲ್ಲಿ ಆಯಾ ಪ್ರದೇಶದಲ್ಲಿ ವಾಸವಿರೋ ಜನರ ಹೆಸರು, ಸಂಖ್ಯೆ ಸಿಗ್ತಾ ಇತ್ತು. ಈಗ ಎಲ್ಲೆಡೆ ಮೊಬೈಲ್‌ವುಯವಾಗಿ ಆ ತರದ ಮಾಹಿತಿ ಸಿಗೋಲ್ಲ. ಅಂಥವರಿಗೆ ಯಾವುದೋ ಪ್ರದೇಶದಲ್ಲಿನ ಜನರ ಹೆಸರು, ವಿಳಾಸ, ಫೋನ್‌ ನಂಬರ್‌, ಉದ್ಯೋಗ ಕುರಿತ ಮಾಹಿತಿ ಕೂಡ ಹೇಗೆ ಸಿಗತ್ತೆ ಅಂತೀರಾ? ಎಲ್ಲಾ ಮೇಲೆ ತಿಳಿಸಿದ ಲಕ್ಕಿ ಡ್ರಾ ಪ್ರಭಾವ! ಒಂದ್ಸಲ ಇದು ಮೋಸದಕರೆ ಅಂತ ಗೊತ್ತಾದ್ರೆ, ಈ ತರದಕಾಲ್‌ಗ‌ಳನ್ನ ಬ್ಲಾಕ್‌ ಮಾಡೋದಲ್ಲ ಅಂತೀರಾ? ಎಷ್ಟು ಅಂತ ಬ್ಲಾಕ್‌ ಮಾಡ್ತೀರಾ? ಇವತ್ತು ಬೆಂಗಳೂರಿಂದ ಬಂದ್ರೆ ನಾಳೆ ಹೈದರಾಬಾದ್‌, ನಾಡಿದ್ದು ಪುಣೆ, ಆಚೆ ನಾಡಿದ್ದು ಸಿಕ್ಕಿಂ ಹೀಗೆ. ಫೋನ್‌ ಎತ್ತಿದರೆ ಲೋನ್‌ ಬೇಕಾ ಅನ್ನೋ ಕಾಟ! ಬೇಡವೆಂದ್ರೆ ಇಂದೇ ಈ ಆಫ‌ರ್‌ನ ಕೊನೇ ದಿನ ಸರ್‌, ನಿಮಗೇ ಅಂತ್ಲೆ ಮತ್ತೂಂದಿಷ್ಟುಕೊಡ್ತೀವಿ. ಇದಕ್ಕೆ ಇಷ್ಟು ದುಡ್ಡುಕಟ್ಟಬೇಕು, ಇವತ್ತೇ ಈ ಆಫ‌ರಿನಕೊನೇ ದಿನ ಅಂತ ಪೀಡಿಸೋಕೆ ಶುರು!  DOND  ಅಂತ ಮೊಬೈಲ್‌ಕಂಪನಿಗಳಿಗೆ ಮೆಸೇಜ್‌ಕಳಿಸಿ ಈ ತರದಕರೆಗಳನ್ನ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದಾದರೂ  ದಿನಕ್ಕೊಂದು ಹೊಸ ಸಿಮ್‌ ತಗೊಂಡು ಅದರಿಂದ ನೂರಾರು ಜನರಿಗೆಕಾಲ್‌ ಮಾಡೋ ಈ ಭೂಪರನ್ನ ನಿಯಂತ್ರಿಸುವುದು ಹೇಗೆ? ಅಷ್ಟಕ್ಕೂ ನನ್ನ ನಂಬರ್‌ ಹೇಗೆ ಸಿಗ್ತು ನಿಮಗೆ ಅಂತ ಕೇಳಿ, ತಕ್ಷಣವೇ ಕಾಲ್‌ ಕಟ್ಟಾಗುತ್ತೆ!

ಕಾಡೋ ಕಾರ್ಡುಗಳು : ಉಚಿತವಾಗಿ ಕ್ರೆಡಿಟ್‌ಕಾರ್ಡ್‌ ಕೊಡ್ತೀವಿ, ಯಾವುದೋ ಮಾಲಿನ ಮೆಂಬರ್‌ಶಿಪ್‌ಕೊಡ್ತೀವಿ ಅಂತ ಸುಮಾರು ಎಸ್‌ಎಂಎಸ್‌ಗಳು,ಕರೆಗಳು ಬರ್ತಿರುತ್ತೆ. ನಮಗೆ ನಿಜವಾಗ್ಲೂ ಈ ಕಾರ್ಡುಗಳ ಅಗತ್ಯ ಇದೆಯಾ? ಈ ಕಾರ್ಡುಗಳನ್ನ ತಗೊಂಡು ಬಳಸದೇ ಇದ್ದರೂ ನಾವು ಬಾಡಿಗೆಕಟ್ಟಬೇಕಾಗುತ್ತಾ? ಈ ಕಾರ್ಡುಗಳನ್ನ ಒಮ್ಮೆ ತಗೊಂಡ ಮೇಲಿನ ಪ್ರತಿ ಬಳಕೆಗೆ ಅಥವಾ ತಿಂಗಳಿಗೆಕಟ್ಟಬೇಕಾದ ಬಾಡಿಗೆ ಎಷ್ಟು, ನಾವು ಪಡೆದ ದುಡ್ಡಿಗಿಂತ ಎಷ್ಟು ಹೆಚ್ಚಿಗೆ ಕಟ್ಟಬೇಕಾಗುತ್ತೆ… ಹೀಗೆಲ್ಲಾ ಜನ ಯೋಚಿಸೋದೇ ಇಲ್ಲ. ಯಾಕೆಂದರೆ, ಸ್ಪೆಷಲ್‌ ಆಫ‌ರ್‌ ಅನ್ನುವ ಆಕರ್ಷಣೆಗೆ ಆ ವೇಳೆಗಾಗಲೇ ನಮ್ಮ ಮನಸ್ಸು ಬಲಿಯಾಗಿರುತ್ತೆ. ಇವತ್ತೇ ತಗಂಡ್ರೆ ಇನ್‌ಸ್ಟೆಂಟ್‌ ಆಫ‌ರ್‌ ಇದೆ ಎಂಬ ಮಾತುಕೇಳಿಯೇ ಸುಮಾರು ಜನ ಹಳ್ಳಕ್ಕೆ ಬೀಳ್ಳೋದು. ಈಗ ಒಂದುಕಾರ್ಡು ತಗೊಂಡ್ರಿ ಅಂದ್ರೆ ಅದೇ ಮಾಲಿಗೆ, ಅದೇ ಬ್ಯಾಂಕಿಂದಲೇ ಮುಂದಿನ ವ್ಯವಹಾರಗಳನ್ನು ಮಾಡಬೇಕಾದ ಅಘೋಷಿತ ದಾಸ್ಯಕ್ಕೂ ಸಿಕ್ಕಂತಾಗಿರುತ್ತೆ. ಬೇರೆಕಡೆ ಅದಕ್ಕಿಂತಕಮ್ಮಿ ಬೆಲೆಗೆ ಸಿಗಬಹುದಾ ಅನ್ನೋ ಆಲೋಚನೆಯನ್ನೂ ಈ ಆಫ‌ರ್‌ಗಳಿಗೆ ಬಲಿಯಾದ ಬುದ್ದಿಕೊಂದು ಬಿಟ್ಟಿರುತ್ತೆ ! ಹಾಗಾಗಿ ಇಂತಹ ಪರಿಸ್ಥಿತಿಗಳಲ್ಲೆಲ್ಲಾ ಅವಸರವೇ ಮುಂದಿನ ಅಪಘಾತಗಳಿಗೆಕಾರಣ! ಮುಗಿಸೋ ಮೊದಲು: ಈ ತರಹೇವಾರಿ ಮೋಸದ ಜಗತ್ತಿನಲ್ಲಿ ಯಾವುದೂ ಉಚಿತವಲ್ಲ ಎಂಬ ಎಚ್ಚರಿಕೆ ಈಗ ಉಚಿತ! ­

Advertisement

 

-ಪ್ರಶಸ್ತಿ ಪಿ. ಸಾಗರ

Advertisement

Udayavani is now on Telegram. Click here to join our channel and stay updated with the latest news.

Next