Advertisement

ಗಾರ್ಮೆಂಟ್ಸ್‌ ಉದ್ಯಮದಲ್ಲಿ ಉದ್ಯೋಗಾವಕಾಶ

01:33 PM Aug 25, 2019 | Suhan S |

ರಾಮನಗರ: ಗಾರ್ಮೆಂಟ್ಸ್‌ ಉದ್ಯಮದಲ್ಲಿ ಉದ್ಯೋಗವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಮಹಿಳೆಯರು ಹೊಲಿಗೆ ತರಬೇತಿ ಪಡೆದು ಆರ್ಥಿಕವಾಗಿ ಸ್ವಾವಲಂಭಿಗಳಾಗಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್‌ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಬಿಡದಿಯ ಜನಮುಖೀ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಸೀವಿಂಗ್‌ ಮಷೀನ್‌ ಆಪರೇಟರ್‌ (ಎಸ್‌ಎಂಒ) ತರಬೇತಿ ಪಡೆದ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಸ್ತುತ ಗಾರ್ಮೆಂಟ್ಸ್‌ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ. ಆದರೂ ಮತ್ತಷ್ಟು ಉದ್ಯೋಗಾವಕಾಶಗಳು ಈ ಕ್ಷೇತ್ರದಲ್ಲಿ ಲಭ್ಯವಿದೆ. ಹೊಲಿಗೆ ತರಬೇತಿ ಪಡೆಯುವ ಮಹಿಳೆಯರು ಗಾರ್ಮೆಂಟ್ಸ್‌ನಲ್ಲಿ ಉದ್ಯೋಗ ಪಡೆಯಬಹುದು ಅಥವಾ ಸ್ವಯಂ ಉದ್ಯೋಗಿಗಳಾಗಲು ಅವಕಾಶ ಇದೆ ಎಂದರು.

ಉದ್ಯೋಗಕ್ಕೆ ಅಭ್ಯರ್ಥಿಗಳ ನೇಮಕ: ಜನಮುಖೀ ಕೌಶಲಾಭಿವೃದ್ಧಿ ಕೇಂದ್ರದಲ್ಲಿ 45 ದಿನಗಳ ಕಾಲಾವಧಿಯ ಎಸ್‌.ಎಂ.ಒ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಪ್ರಸಿದ್ಧ ಗಾರ್ಮೆಂಟ್ಸ್‌ ಕಂಪನಿಗಳಾದ ಅರವಿಂದ್‌ ಮತ್ತು ಮಧುರಾ ಮುಂತಾದ ಗಾರ್ಮೆಂಟ್ಸ್‌ಗಳಲ್ಲಿ ಉದ್ಯೋಗವಕಾಶ ಒದಗಿಸಿಕೊಡಲಾಗುವುದು. ಈಗಾಗಲೇ ಕೆಲ ಅಭ್ಯರ್ಥಿಗಳು ಉದ್ಯೋಗಗಳಿಗೆ ನೇಮಕಗೊಂಡಿದ್ದಾರೆ. ಸೀವಿಂಗ್‌ ಮಷೀನ್‌ ಆಪರೇಟರ್‌ ತರಬೇತಿಯನ್ನು ಕಡಿಮೆ ವಿದ್ಯಾರ್ಹ ತೆ ಹೊಂದಿದವರೂ ಸಹ ಪಡೆಯಬಹುದು ಎಂದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮ: ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಸದಸ್ಯ ಕುಮಾರ್‌ ಮಾತನಾಡಿ, ಜನಮುಖೀ ಕೌಶಲಾಭಿವೃದ್ಧಿ ಕೇಂದ್ರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿದೆ. ತರಬೇತಿ ಪಡೆದ ಅರ್ಹ ಫ‌ಲಾನುಭಗಳಿಗೆ ಪುರಸಭೆ ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಉಚಿತ ಹೊಲಿಗೆ ಯಂತ್ರ ನೀಡಲು ಪ್ರಯತ್ನಿಸುತ್ತೇವೆ ಎಂದರು. ಜನಮುಖೀ ಟ್ರಸ್ಟ್‌ ಕಾರ್ಯದರ್ಶಿ ಕುಂಬಾಪುರ ಬಾಬು, ತರಬೇತುದಾರರಾದ ನಳಿನಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next