ಸುಳ್ಯ: ಎಸ್ಸೆಸ್ಸೆಫ್ ಸುಳ್ಯ ಡಿವಿಶನ್ ಅಧೀನದ ಕ್ಯಾಂಪಸ್ ವಿಂಗ್ ವತಿಯಿಂದ ಕ್ಯಾಂಪಸ್ ಕೊಲೋಕಿಯಂ ಹಾಗೂ ಓರ್ಬಿಟ್ ವೃತ್ತಿ ಜೀವನ ಮಾರ್ಗದರ್ಶನ ಕಾರ್ಯಾಗಾರ ಸುಳ್ಯ ಸುನ್ನೀ ಸೆಂಟರ್‌ನಲ್ಲಿ ನಡೆಯಿತು.
ಎಸ್.ವೈ.ಎಸ್. ಪುತ್ತೂರು ಝೋನಲ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ. ಇಬ್ರಾಹಿಂ ಮಂಡೆಕೋಲು ಕ್ಯಾಂಪಸ್ ಕೊಲೋಕಿಯಂ ತರಗತಿ ನಡೆಸಿದರು. ಓರ್ಬಿಟ್ ವೃತ್ತಿ ಜೀವನ ಮಾರ್ಗದರ್ಶನದ ತರಬೇತಿಯನ್ನು ಮುಹಮ್ಮದ್ ಅಲಿ ಜೌಹರ್ ಕಲ್ಲಿಕೋಟೆ ಅವರು ನಡೆಸಿಕೊಟ್ಟರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು. ಎಸ್ಸೆಸ್ಸೆಫ್ ವತಿಯಿಂದ ನಡೆದ ಎಸೆಸೆಲ್ಸಿ ಕಾನ್ಫಿಡೆನ್ಸ್ ಟೆಸ್ಟ್ 2019 ಮತ್ತು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಮುಹಮ್ಮದ್ ಮಝೀಫ್ ಸಮಹಾದಿ ಅವರಿಗೆ ಸಮ್ಮಾನ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ನಫ ಪೈಂಬೆಚ್ಚಾಲು ಅವರಿಗೆ ನೀಡುವ ಕೊಡುಗೆಯನ್ನು ಸುಳ್ಯ ಸೆಕ್ಟರ್‌ಗೆ ಹಸ್ತಾಂತರಿಸಲಾಯಿತು.
ಸುಳ್ಯ ಡಿವಿಶನ್ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಖೀ, ಕೆಸಿಎಫ್ ಅಬುಧಾಬಿ ಕಾರ್ಯದರ್ಶಿ ಎ.ಬಿ. ಹಸೈನಾರ್ ಅಮಾನಿ, ಸುಳ್ಯ ಡಿವಿಷನ್ ಸದಸ್ಯ ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡ್, ಸ್ವಬಾಹ್ ಹಿಮಮಿ ಬೀಜಕೊಚ್ಚಿ ಉಪಸ್ಥಿತರಿದ್ದರು.
ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಕಲ್ಲುಗುಂಡಿ ಸ್ವಾಗತಿಸಿ, ನಿಂತಿಕಲ್ಲು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಎಣ್ಮೂರು ವಂದಿಸಿದರು.
ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹುರಿ ನೆಕ್ಕಿಲ ಕಾರ್ಯಕ್ರಮ ನಿರೂಪಿಸಿದರು.