Advertisement
ಸಂತಸದ ವಿಷಯ: ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಜಿಲ್ಲೆ ಆಗಿರುವ ತುಮಕೂರಿನಲ್ಲಿ ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ತುಮಕೂರು ಜಿಲ್ಲಾಸ್ಪತ್ರೆಲ್ಲಿಯೇ ಹೆಚ್ಚು ಹೆರಿಗೆಯಾಗುತ್ತಿದೆ. ಕೊರೊನಾ ವೇಳೆ ಸೋಂಕಿತ ಗರ್ಭಿಣಿಯರಿಗೂ ಹೆರಿಗಯಾೆ ಗಿದ್ದು ಸೋಂಕಿನಿಂದ ಬಳಲಿದ್ದಗರ್ಭಿಣಿಯರು ಹೆರಿಗೆ ಮಾಡಿದ ಮೇಲೆ ಮಕ್ಕಳು ಆರೋಗ್ಯವಾಗಿ ಇರುವುದು ಸಂತಸದ ವಿಷಯ.
Related Articles
Advertisement
ಜಿಲ್ಲಾಸ್ಪತ್ರೆಯಲ್ಲಿ400 ಹಾಸಿಗೆಗಳಿದ್ದು ಅದರಲ್ಲಿ290 ಹಾಸಿಗೆಕೋವಿಡ್‌ಗೆ ಮೀಸಲಿಡಲಾಗಿದೆ. ಅದರಲ್ಲಿ 250 ಹಾಸಿಗೆಗೆ ಆಕ್ಸಿಜನ್ ಸೌಲಭ್ಯವಿದೆ.21 ಐಸಿಯು ಇದೆ.7 ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಐಸಿಯು ಇದೆ. ಆಸ್ಪತ್ರೆಯಲ್ಲಿ ಸೋಂಕಿತರು ಬಂದು ಗುಣಮುಖರಾದ ತಕ್ಷಣ ಮತ್ತೂಬ್ಬರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈಗ ಆಸ್ಪತ್ರೆಯಲ್ಲಿ ಆಕ್ಸಿಜನ್‌ಕೊರತೆ ಇಲ್ಲ. ಈವರೆಗೂ ಚಿಕಿತ್ಸೆ ಪಡೆಯುವ ಮಕ್ಕಳಿಗೆ ಸೋಂಕಿತರಿಂದ ಯಾವುದೇ ತೊಂದರೆ ಇಲ್ಲ. ಬೇರೆ ಯೂನಿಟ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುರೇಶ್ ಬಾಬು ತಿಳಿಸಿದರು.
ಜಿಲ್ಲಾಡಳಿತ ಕೂಡಲೇ ಗಮನಹರಿಸಲು ಮನವಿ :
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ನೂರಾರು ಮಂದಿ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಸ್ಪತ್ರೆಗೆ ಬರುತ್ತಲೇ ಇದ್ದಾರೆ. ಸಾಲುಗಟ್ಟಿ ನಿಂತು ಗಂಟಲು ದ್ರವ ಪರೀಕ್ಷೆಗೆ ಒಳಗಾಗುತ್ತಿ¨ªಾರೆ. ಸೋಂಕು ಇರುವವರೂ ಬರುತ್ತಿದ್ದಾರೆ. ಇಲ್ಲಿಯೇ ಸಿಬ್ಬಂದಿ ಬಂದು, ಹೋಗಬೇಕು. ಇಡೀ ಆಸ್ಪತ್ರೆಯ ಎಲ್ಲಾಕಡೆ ಸೋಂಕಿತರು ಓಡಾಡುತ್ತಲೇ ಇರುತ್ತಾರೆ. ಇವರಲ್ಲಿ ಯಾರಿಗಾದರೂ ಸಿಬ್ಬಂದಿಗೆ ಸೋಂಕು ತಗಲಿ ಅದು ನವಜಾತ ಶಿಶುಗಳಿಗೆ ಹರಡಿದರೆ ಆ ಮಕ್ಕಳ ಸ್ಥಿತಿ ಏನು. ಮುಂದೆ3ನೇ ಅಲೆ ಮಕ್ಕಳಲ್ಲಿಯೇ ಹೆಚ್ಚುಕಂಡು ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವುದು ಅಗತ್ಯ
ಕಳೆದ ಬಾರಿ ಚಿಕಿತ್ಸಾ ಘಟಕಸ್ಥಳಾಂತರ ಮಾಡಲಾಗಿತ್ತು : ಕಳೆದ ವರ್ಷ ಇಡೀ ಜಿಲ್ಲಾಸ್ಪತ್ರೆಯನ್ನುಕೋವಿಡ್ ಕೇಂದ್ರ ಮಾಡಿ ಜಿಲ್ಲಾ ಆಸ್ಪತ್ರೆಯ ಇತರೆ ವಿಭಾಗ ತಾಯಿ ಮತ್ತು ಮಗು ಚಿಕಿತ್ಸಾ ಘಟಕವನ್ನು ಶ್ರೀದೇವಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈ ಬಾರಿ ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ನವಜಾತ ಶಿಶು, ಬಾಣಂತಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯವಸ್ಥೆ ಆತಂಕ ಸೃಷ್ಟಿಸಿದೆ.
ಜಿಲ್ಲಾಡಳಿತದಿಂದ ನೆರವು :
ತುಮಕೂರು ಜಿಲ್ಲಾಸ್ಪತ್ರೆಗೆ ಎಲ್ಲಾಕಡೆಯಿಂದ ಇತರೆ ರೋಗಿಗಳು ಬರುತ್ತಾರೆ. ಅವರಿಗೂ ಚಿಕಿತ್ಸೆ ನೀಡುತ್ತೇವೆ. ಏಪ್ರಿಲ್‌ನಲ್ಲಿ15 ಜನ ಗರ್ಭಿಣಿಯರಿಗೆ ಕೋವಿಡ್‌ಪಾಸಿಟಿವ್ ಬಂದಿತ್ತು. ಅದರಲ್ಲಿ8 ಸಿಜೇರಿಯನ್,7 ಗರ್ಭಿಣಿಯರಿಗೆ ನಾರ್ಮಲ್ ಹೆರಿಗೆ ಆಗಿದೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ, ಈಗ ನಮ್ಮಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಿದೆ ಎಂದು ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ವೀಣಾ ತಿಳಿಸಿದರು.
– ಚಿ.ನಿ.ಪುರುಷೋತ್ತಮ್