Advertisement

ಹನಿವೆಲ್‌ನಿಂದ ಕ್ರಿಟಿಕಲ್‌ ಕೇರ್‌ ಸೆಂಟರ್‌

05:00 PM Jun 13, 2021 | Team Udayavani |

ಬೆಂಗಳೂರು: ನಗರದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಹನಿವೆಲ್‌ನಂತಹ ಕಂಪನಿಗಳು ಮುಂದಾಗುತ್ತಿರುವುದು ಹೃದಯಸ್ಪರ್ಶಿಯಾಗಿದೆಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

Advertisement

ಹನಿವೆಲ್‌ ಕಂಪನಿಯು, ಕೊರೊನಾಸೋಂಕಿತರ ಚಿಕಿತ್ಸೆಗಾಗಿ ಬೌರಿಂಗ್‌ಆಸ್ಪತ್ರೆಯಲ್ಲಿ ಕ್ರಿಟಿಕಲ್‌ ಕೇರ್‌ ಸೆಂಟರ್‌ಸ್ಥಾಪಿಸಿ ಸರ್ಕಾರಕ್ಕೆ ಹಸ್ತಾಂತರಿಸಿದೆ. ಜತೆಗೆ,ರಾಜ್ಯಾದ್ಯಂತ ವಿತರಿಸಲು 200 ಆಮ್ಲಜನಕಸಾಂದ್ರಕಗಳು, ಮಾಸ್ಕ್ಗಳು ಮತ್ತು ಪಿಪಿಇಕಿಟ್‌ಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ.

ಆಮೂಲಕ ಕೊರೊನಾ ಸಂದರ್ಭದಲ್ಲಿನಾಗರಿಕರಿಗೆ ಸೇವೆ ಒದಗಿಸುತ್ತಿದೆ ಎಂದುಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಕೋವಿಡ್‌ ಸಮನ್ವಯ ಸಮಿತಿಯ ಪಿಆರ್‌ ಹಾಗೂ ಪ್ರಧಾನಕಾರ್ಯದರ್ಶಿ ಉಮಾಮಹಾದೇವನ್‌ ಮಾತನಾಡಿ,ಕೊರೊನಾ ಸೋಂಕಿತರಿಗೆತುರ್ತು ಚಿಕಿತ್ಸೆ ನೀಡಲು ತೀವ್ರನಿಗಾ ಘಟಕದ (ಐಸಿಯು)ಚಿಕಿತ್ಸಾ ಕೇಂದ್ರವನ್ನು ನಗರದಲ್ಲಿ ಸ್ಥಾಪಿಸಿರುವುದಕ್ಕೆ ಹನಿವೆಲ್‌ಗೆ ಕೃತಜ್ಞತೆ ಸಲ್ಲಿಸುತ್ತೇವೆ.ಕೊರೊನಾ ಎದುರಿಸಲು ಆರೋಗ್ಯ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಇದು ಸಹಕಾರಿಯಾಗಲಿದೆ ಎಂದುಹೇಳಿದ್ದಾರೆ.

ಹನಿವೆಲ್‌ ಇಂಡಿಯಾದ ಅಧ್ಯಕ್ಷ ಡಾ. ಅಕ್ಷಯ್‌ ಬೆಳ್ಳಾರೆ ಮಾತನಾಡಿ,ಕೊರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ದೇಶಕ್ಕೆಸಹಾಯ ಮಾಡಲು ಹನಿವೆಲ್‌ಬದ್ಧವಾಗಿದೆ. ಕೊರೊನಾ ಆರಂಭವಾದಾಗಿನಿಂದ 21 ಕೋಟಿರೂ. ದೇಣಿಗೆ ನೀಡಲಾಗಿದೆ.ಕೋವಿಡ್‌ ಆರೈಕೆ ಕೇಂದ್ರಗಳು,ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿಆರೋಗ್ಯ ಮೂಲ ಸೌಕರ್ಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಮತ್ತುಸ್ಥಳೀಯ ಸಂಸ್ಥೆಗಳ ಜೊತೆ ಪಾಲುದಾರಿಕೆಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next