Advertisement

ಮಿತಿಮೀರಿದ ಇಂಗಾಲ ವಿಶ್ವಸಂಸ್ಥೆ ತೀವ್ರ ಕಳವಳ

06:20 AM Oct 31, 2017 | Team Udayavani |

ವಿಶ್ವಸಂಸ್ಥೆ:  ಭೂಮಿಯ ವಾತಾವರಣದಲ್ಲಿ ಜೀವ ಸಂಕುಲಕ್ಕೆ ಮಾರಕವಾದ ಇಂಗಾಲದ ಡೈ ಆಕ್ಸೆ„ಡ್‌ನ‌ (CO2) ಮಟ್ಟ  ಕಳೆದ ವರ್ಷದಲ್ಲಿ ಹಿಂದೆಂದೂ ಕಾಣದಷ್ಟು ಗಣನೀಯ ಏರಿಕೆ ಕಂಡಿರುವುದಾಗಿ ವಿಶ್ವಸಂಸ್ಥೆ ಹೇಳಿದೆ. 

Advertisement

2016ರ ಒಂದೇ ವರ್ಷದಲ್ಲಿ ಬಿಡುಗಡೆಯಾದ ಇಂಗಾಲದ ಡೈ ಆಕ್ಸೆ„ಡ್‌, ವಾಯು ಮಾಲಿನ್ಯ ಮಟ್ಟವನ್ನು ಕಳೆದ 30 ವರ್ಷಗಳಲ್ಲಿ ಕಾಣದಷ್ಟು ಅಪಾಯಕಾರಿ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. 

2016ರ ಅಂತ್ಯಕ್ಕೆ ಭೂಮಿಯ ಇಂಗಾಲದ ಡೈ ಆಕ್ಸೆ„ಡ್‌ ಪ್ರಮಾಣ 403.3 ಪಿಪಿಎಂ (ಪಾರ್ಟ್‌ ಪರ್‌ ಮಿಲಿಯನ್‌) ಆಗಿದ್ದು, ಇದು 2015ರ ಅಂತ್ಯಕ್ಕೆ ದಾಖಲಾಗಿದ್ದ ಪ್ರಮಾಣಕ್ಕಿಂತ (400.00) 3.3 ಪಿಪಿಎಂ ಹೆಚ್ಚಾಗಿದೆ. 2015ಕ್ಕೂ ಹಿಂದಿನ ಒಂದು ದಶಕದಲ್ಲಿ ವಾತಾವರಣಕ್ಕೆ ಸೇರ್ಪಡೆಯಾದ ಇಂಗಾಲದ (2.08) ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಸೇರ್ಪಡೆ ಕೇವಲ 2016ರಲ್ಲೇ ಆಗಿರುವುದು ಕಳವಳ ತಂದಿದೆ. 

ಅಗಾಧ ಜನಸಂಖ್ಯೆ, ಹೆಚ್ಚಿದ ಕೃಷಿ ಚಟುವಟಿಕೆ, ಕೈಗಾರಿಕೀಕರಣ, ಅರಣ್ಯ ನಾಶವೇ ಈ ಮಾಲಿನ್ಯಕ್ಕೆ ಕಾರಣ ಎನ್ನಲಾಗಿದೆ. ಹೆಚ್ಚಾಗಿ ರುವ ಇಂಗಾಲದ ಪ್ರಮಾಣದಿಂದ ಭೂಮಿ ಉಷ್ಣಾಂಶ 2ರಿಂದ 3 ಡಿಗ್ರಿ ಹೆಚ್ಚಾಗಿದ್ದು ಸಾಗರದ ನೀರಿನ ಮಟ್ಟ 10ರಿಂದ 20 ಮೀ. ಹೆಚ್ಚಾಗಿರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
 

Advertisement

Udayavani is now on Telegram. Click here to join our channel and stay updated with the latest news.

Next