ವಾಷಿಂಗ್ಟನ್: ಅತ್ಯಂತ ಅಪಾಯಕಾರಿ ಮಾಹಿತಿಯೊಂದನ್ನು ಅಮೆರಿಕದ ಎನ್‌ಒಎಎ (ನ್ಯಾಷನಲ್ ಓಸಿಯಾನಿಕ್ ಆ್ಯಂಡ್ ಅಟ್ಮಾಸ್ಪೇರಿಕ್ ಅಡ್ಮಿನಿಸ್ಟ್ರೇಶನ್) ಸಂಸ್ಥೆ ನೀಡಿದೆ.
ಕೈಗಾರೀಕರಣದ ಮುಂಚಿನ ಅವಧಿಗೆ ಹೋಲಿಸಿದರೆ, ಪ್ರಸ್ತುತ ಜಗತ್ತಿನಲ್ಲಿ ಇಂಗಾಲದ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ. ಇಂಗಾಲದ ಪ್ರಮಾಣ ಹೆಚ್ಚಾದರೆ ಬಿಸಿ ಹೆಚ್ಚುತ್ತದೆ, ಹಾಗಾಗಿಯೇ ಗಾಳಿ ಕಲುಷಿತವಾಗುತ್ತದೆ. ಹಲವು ರೋಗಗಳಿಗೆ ಇದೇ ಮುನ್ನುಡಿ ಬರೆಯುತ್ತದೆ!
ಈ ವರ್ಷ ಮೇನಲ್ಲಿ ವಾತಾವರಣದಲ್ಲಿನ ಇಂಗಾಲದ ಪ್ರಮಾಣ 419.13 ಪಿಪಿಎಂ (ಪಾರ್ಟ್ಸ್ ಪರ ಮಿಲಿಯನ್: ಇಂಗಾಲದ ಪ್ರಮಾಣವನ್ನು ಅಳೆಯುವ ಒಂದು ಸೂತ್ರ). 2020ರ ಮೇಗೆ ಹೋಲಿಸಿದರೆ 1.82 ಪಿಪಿಎಂ ಅಷ್ಟು ಹೆಚ್ಚಾಗಿದೆ. ಕೈಗಾರಿಕಾಪೂರ್ವ ಅವಧಿಯಲ್ಲಿ ಇಂಗಾಲದ ಪ್ರಮಾಣ 280 ಪಿಪಿಎಂ ಇತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಇದನ್ನೂ ಓದಿ :ವೈಷ್ಣೋದೇವಿ ದೇಗುಲದಲ್ಲಿ ಬೆಂಕಿ ಅನಾಹುತ : ದೇಗುಲದ ಕ್ಯಾಷ್ ಕೌಂಟರ್‌ಗೆ ಹಾನಿ
ಸಾರಿಗೆಗಾಗಿ ಕಲ್ಲಿದ್ದಲು, ತೈಲ, ಜೈವಿಕ ಅನಿಲವನ್ನು ಗರಿಷ್ಠಪ್ರಮಾಣದಲ್ಲಿ ಬಳಸುತ್ತಿರುವುದು, ವಿದ್ಯುತ್ ಉತ್ಪಾದನಾ ಸ್ಥಾವರದಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಉತ್ಪಾದನೆಯಾಗುತ್ತಿರುವುದು ಈ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಅಲ್ಲದೇ ಪ್ರತಿ ಮೇ ನಂತರ ಗಿಡಗಳು ಚಿಗುರುವ, ಹೂಬಿಡುವ, ಬೆಳೆಯುವ ಪ್ರಮಾಣ ಹೆಚ್ಚಾಗುತ್ತದೆ. ಆಗ ಮತ್ತೆ ಇಂಗಾಲ ನಿಯಂತ್ರಣಕ್ಕೆ ಬರುತ್ತದೆ ಎಂದೂ ಹೇಳಲಾಗಿದೆ.