Advertisement

ಹಣ್ಣಾಗಲು ಕಾರ್ಬೈಡ್‌ ಬಳಕೆ ಮಾಡಿಲ್ಲ

03:32 PM May 26, 2017 | Team Udayavani |

ಕಲಬುರಗಿ: ನಗರದಲ್ಲಿರುವ ಹಣ್ಣಿನ ಅಂಗಡಿಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆ ಕಂಡು ಬಂದಿಲ್ಲ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆಯ ಜಿಲ್ಲಾ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ನಗರದ ವಿವಿಧ ಹಣ್ಣಿನ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಈ ಅಂಶ ಕಂಡು ಬಂದಿಲ್ಲ,

Advertisement

ಆದರೆ, ವ್ಯಾಪಾರಿಗಳು ಕಾಯಿಗಳನ್ನು ಹಣ್ಣು ಮಾಡಲು ಇಥಲಿನ್‌ ಎನ್ನುವ ಪದಾರ್ಥ ಪತ್ತೆಯಾಗಿದೆ. ಇದು ಕಾಯಿಗಳನ್ನು ಹಣ್ಣು ಮಾಡಲು ಬಳಕೆ ಮಾಡಲಾಗುತ್ತಿದೆ. ಇದಕ್ಕೆ ನಿಷೇಧವಿಲ್ಲ. ಆದರೆ,  ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು ಎನ್ನುವ ಕುರಿತು ಗೊಂದಲವಿದ್ದು, ಈ ಕುರಿತು ಅಧಿಕಾರಿಗಳು ಬಳಕೆಯ ಪ್ರಮಾಣವನ್ನು ತಿಳಿ ಹೇಳಿದ್ದಾರೆ ಎಂದು ಅಂಕಿತ ಅಧಿಕಾರಿ ಆರ್‌.ಎಸ್‌. ಬಿರಾದಾರ ತಿಳಿಸಿದ್ದಾರೆ. 

ಪ್ರಾದೇಶಿಕ ಆಯುಕ್ತರ ಆದೇಶದಂತೆ ದಾಳಿ ನಡೆಸಿದ್ದಾಗಿ ತಿಳಿಸಿರುವ ಅವರು, ದಾಳಿಯ ವೇಳೆ ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್‌ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ನಗರದಲ್ಲಿರುವ ಸುಮಾರು ಎಲ್ಲ ಹಣ್ಣುಗಳ ದಾಸ್ತಾನುಗಳಿಗೆ, ಹಣ್ಣುಮಾಡುವ ಘಟಕಗಳಿಗೆ ಬೇಟಿ ನೀಡಿದ ಮಹಾನಗರ ಪಾಲಿಕೆ ಅಧಿಕಾರಿಗಳು

-ಹಾಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ ಅಂಕಿತ ಅಧಿಕಾರಿಗಳು ದಾಳಿ ನಡೆಸಿ ಆಹಾರ ಮಾದರಿಯಾಗಿ ಪಡೆದು ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಕಲಬೆರಕೆ ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಾಲಿಕೆಯ ಮುಜಾಮಿಲ್‌, ಮುನಾಫ ಪಟೇಲ್‌, ಚೇತನಕುಮಾರ, ಕುಮಾರಿ ಸುಷ್ಮಾ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next