ಹೈದರಾಬಾದ್ : ಇಲ್ಲಿನ ಹೋಂಡಾ ಜಾಜ್ ಕಾರು ಕಳೆದ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ 127 ಬಾರಿ ಓವರ್‌ಸ್ಪೀಡಿಂಗ್ ನಡೆಸಿದ ಕಾರಣಕ್ಕೆ ಮಾಲಕನಿಗೆ 1.82 ಲಕ್ಷ ರೂ. ದಂಡವನ್ನು ಹೇರಲಾಗಿದೆ.
ಟಿಎಸ್09ಇಆರ್2957 ನೋಂದಾವಣೆ ನಂಬರ್ ಹೊಂದಿರುವ ಈ ಕಾರು 2017ರ ಎಪ್ರಿಲ್ 4ರಿಂದ 2018ರ ಮಾರ್ಚ್ 10ರ ನಡುವಿನ ಅವಧಿಯಲ್ಲಿ 127 ಬಾರಿ ಓವರ್‌ಸ್ಪೀಡಿಂಗ್ ಮಾಡಿರುವುದಕ್ಕಾಗಿ 1.82 ಲಕ್ಷ ರೂ. ದಂಡ ಹೇರಿರುವುದು ತೆಲಂಗಾಣ ರಾಜ್ಯದ ಇ-ಚಲನ್ ಪೋರ್ಟಲ್‌ನಲ್ಲಿ ಕಂಡು ಬಂದಿದೆ.
ತೆಲಂಗಾಣ ಪೊಲೀಸರು ಸಾಮಾನ್ಯವಾಗಿ ಓವರ್ ಸ್ಪೀಡಿಂಗ್ ಅಪರಾಧಕ್ಕೆ 1,400 ರೂ. + ಯೂಸರ್ ಚಾರ್ಜ್ 35 ರೂ. ಎಂದು ಒಟ್ಟು 1,435 ರೂ.ಗಳನ್ನು ದಂಡವಾಗಿ ಹೇರುತ್ತಾರೆ.
ನಗರದ ಹೊರ ರಿಂಗ್ ರೋಡ್ ನಲ್ಲಿ ಸಾಮಾನ್ಯವಾಗಿ ಓವರ್ ಸ್ಪೀಡಿಂಗ್ ಕಂಡು ಬರುತ್ತದೆ. ಹಾಲಿ ಪ್ರಕರಣದಲ್ಲಿ 1.82 ಲಕ್ಷ ರೂ. ದಂಡ ಹೇರಲ್ಪಟ್ಟ ಕಾರು ಔಟರ್ ರಿಂಗ್ ರೋಡ್‌ನಲ್ಲಿ ಶರವೇಗದಲ್ಲಿ ಸಾಗಿದ ಅಪರಾಧವನ್ನು ಎಸಗಿರುವುದು ದಾಖಲಾಗಿದೆ.
ಈ ಓವರ್ ಸ್ಪೀಡಿಂಗ್ ಅಪರಾಧ ಎಸಗಿರುವ (127 ಬಾರಿ) ಕಾರು ಲೆಸ್ಸೀ ಮಿಲಾನ್ ಲ್ಯಾಬೋರೇಟರೀಸ್ ಲಿಮಿಟೆಡ್‌ಗೆ ಸೇರಿದ ಕಾರೆಂದು ದಾಖಲೆಗಳ ಮೂಲಕ ಗೊತ್ತಾಗಿದೆ. ಈ ಕಾರು ಗರಿಷ್ಠ ಓವರ್ ಸ್ಪೀಡಿಂಗ್ ಅಪರಾಧ ಎಸಗಿರುವುದು ಕಳೆದ ವರ್ಷ ಜುಲೈ ತಿಂಗಳಲ್ಲಿ .