ಮಂಡ್ಯ: ಮಳವಳ್ಳಿ-ಕೊಳ್ಳೇಗಾಲ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ 209 ಹೆಡ್ ವರ್ಡ್ಸ್ ಬಳಿ ಕಾರು ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ (ಜ.14) ಮಧ್ಯಾಹ್ನ ನಡೆದಿದೆ.
ಬೆಂಗಳೂರಿನ ಟಿ.ಕೆ.ಪ್ರಕಾಶ್ ಪುತ್ರ ಅರ್ಜುನ್(26) ಮೃತ ಬಾಲಕ. ಬೆಂಗಳೂರಿನಿದ 5 ಮಂದಿ ಸ್ನೇಹಿತರ ಜತೆ ಭರಚುಕ್ಕಿ ನೋಡಲು ಕಾರಿನಲ್ಲಿ ಹೋಗುತ್ತಿದ್ದಾಗ ಕೊಳ್ಳೇಗಾಲದ ಕಡೆಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅರ್ಜುನ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ನಾಲ್ಕು ಮಂದಿ ಗಾಯಗೊಂಡಿದ್ದು ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 70ರ ಅಜ್ಜಿಗೆ ಪೊಂಗಲ್ ಗಿಫ್ಟ್ ಕೊಡಿಸಿದ ಅವಳಿ ಸಹೋದರರು! ಬಾಲಕರ ಕಾರ್ಯಕ್ಕೆ ಶ್ಲಾಘನೆ
ಅರ್ಜುನನ ಶವವನ್ನು ಬೆಳಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.
Related Articles
ಘಟನೆ ಸ್ಥಳಕ್ಕೆ ಸಿಪಿಐ ಧನರಾಜ್, ಪಿಎಸ್‌ಐ ಕೆ.ಎಂ.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: BSY ಭ್ರಷ್ಟಾಚಾರದ CD ಮಾತ್ರವಲ್ಲ; ಸಭ್ಯರು ನೋಡಲಾಗದ ಸಿ.ಡಿ ಕೂಡ ಇವೆ!: ಯತ್ನಾಳ್ ಹೊಸ ಬಾಂಬ್