Advertisement
1,850 ರೂ. – ಸಾವಿರ ಸಿಸಿ ಎಂಜಿನ್‌ನ ಕಾರುಗಳ ವಿಮೆ ಪ್ರೀಮಿಯಂನ ಸಂಭಾವ್ಯ ಮೊತ್ತ427 ರೂ. – ಎಪ್ಪತ್ತೈದು ಸಿಸಿ ಎಂಜಿನ್‌ನ ಬೈಕುಗಳ ವಾರ್ಷಿಕ ವಿಮಾ ಪ್ರೀಮಿ ಯಂನ ಸಂಭಾವ್ಯ ಮೊತ್ತ
ಶೇ.50 – ಮಾನ್ಯತೆ ಪಡೆದ ವಿಂಟೇಜ್ ಕಾರುಗಳ ಪ್ರೀಮಿ ಯಂ ಮೇಲೆ ನೀಡಲಾಗುವ ರಿಯಾಯಿತಿ
1000 ಸಿಸಿ ಇಂಜಿನ್‌ಗಳಿಗಿಂತ ಕಡಿಮೆ ಇರುವ ಕಾರುಗಳ ಪ್ರೀಮಿಯಂ 2,055ರೂ.ಗಳಿಂದ 1,850 ರೂ.ಗಳಿಗೆ ಹಾಗೂ 75 ಸಿಸಿ ಇಂಜಿನ್ ಬೈಕುಗಳ ಪ್ರೀಮಿಯಂ ಈಗಿರುವ 569 ರೂ.ಗಳಿಂದ 427 ರೂ.ಗಳಿಗೆ ಇಳಿಸಲು ಪ್ರಸ್ತಾಪಿಸಲಾಗಿದೆ. ವಿಂಟೇಜ್ ಆ್ಯಂಡ್ ಕ್ಲಾಸಿಕ್ ಕಾರ್ ಕ್ಲಬ್ ಮಾನ್ಯತೆ ಪಡೆದ ಹಳೆಯ ಮಾಡೆಲ್ ಕಾರುಗಳ ಪ್ರೀಮಿಯಂಗೆ ಶೇ.50 ವಿನಾಯ್ತಿ ಸಿಗಲಿದೆ. ಯಾರಿಗಿಲ್ಲ ವಿನಾಯ್ತಿ?
1000 ಸಿಸಿ ಸಾಮರ್ಥ್ಯಕ್ಕೂ ಮಿಗಿಲಾದ ಇಂಜಿನ್ ಹೊಂದಿರುವ ಕಾರುಗಳು ಹಾಗೂ 75 ಸಿ.ಸಿ.ಗೂ ಅಧಿಕ ಸಾಮರ್ಥ್ಯದ ಎಂಜಿನ್‌ನ ಬೈಕುಗಳ ಪ್ರೀಮಿಯಂನಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಈ ಕಾರು ಹಾಗೂ ಬೈಕುಗಳ ಮಾಲೀಕರು, ಈಗ ಚಾಲ್ತಿಯಲ್ಲಿರುವ ದರದಲ್ಲೇ ಪ್ರೀಮಿಯಂ ಕಟ್ಟಬೇಕಿದೆ. ಜತೆಗೆ, 12,000 ಕೆಜಿ ಭಾರ ಹೊರುವ ಸಾಮರ್ಥ್ಯ ಮೀರಿದ ಸಾರ್ವಜನಿಕ ಸಾರಿಗೆ ವಾಹನಗಳ (ತ್ರಿ ಚಕ್ರ ವಾಹನ ಹೊರತುಪಡಿಸಿ) ಪ್ರೀಮಿಯಂ ಅನ್ನೂ ಅವುಗಳ ಸಾಗಣೆ ಸಾಮರ್ಥ್ಯಕ್ಕ ನುಗುಣವಾಗಿ ಹೆಚ್ಚಿಸಲಾಗುತ್ತದೆ.