ಶಿಡ್ಲಘಟ್ಟ: ತಾಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿ ಮೃತ್ತಿಕೆ ಸಂಗ್ರಹ ಅಭಿಯಾನದ ಕೆಂಪೇಗೌಡ ರಥದ ಮೆರವಣಿಗೆಯಲ್ಲಿ ಬರುತ್ತಿದ್ದ ಕಾರಿಗೆ ಸರಕು ಸಾಗಾಣಿಕೆ ಬೊಲೆರೋ ವಾಹನ ಢಿಕ್ಕಿ ಹೊಡೆದ ಪರಿಣಾಮ ಮೂವರು ಅಧಿಕಾರಿಗಳು ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ನಡೆದಿದೆ
ಶಿಡ್ಲಘಟ್ಟ ತಾಲೂಕಿನ ಸಿಡಿಪಿಓ ನೌತಾಜ್, ಸಹಾಯಕ ಸಿಡಿಪಿಓ ಮಹೇಶ್ ಹಾಗೂ ಬಿಸಿಎಂ ಅಧಿಕಾರಿ ನಾರಾಯಣಪ್ಪ ಹಾಗೂ ಕಾರಿನ ಚಾಲಕ ಭೀಕರ ಅಪಘಾತದಲ್ಲಿ ಪಾರಾಗಿದ್ದಾರೆ.
ತಾಲೂಕಿನ ವೈಹುಸೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಮೃತ್ತಿಕೆ ಸಂಗ್ರಹ ಮಾಡಿ ಕೆಂಪೇಗೌಡ ರಥದ ಮೆರವಣಿಗೆ ದೇವರಮಳ್ಳರು ಗ್ರಾಮ ಪಂಚಾಯಿತಿಗೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ದೇವರ ಮಳ್ಳೂರು ಗ್ರಾಮ ಪಂಚಾಯಿತಿಗೆ ಬೊಮ್ಮನಹಳ್ಳಿ ಗೇಟ್ ಬಳಿ ಅಧಿಕಾರಿಗಳ ಕಾರು ತಿರುವು ಪಡೆಯುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಅತಿ ವೇಗ ಮತ್ತು ಅಜಾಗೃಕತೆಯಿಂದ ಬಂದ ಬೋಲೋರೋ ಸರಕು ಸಾಗಾಣಿಕೆ ವಾಹನ ಡಿಕ್ಕಿ ಹೊಡೆದಿದೆ ಬೋಲೋರೋ ವಾಹನ ಒಡೆದ ರಬಸಕ್ಕೆ ಕಾರು ಮುಂದೆ ಇದ್ದ ಹೈಓಲಟೇಜ್ ವಿದ್ಯುತ್ ಕಂಬ ತಪ್ಪಿ ಪಕ್ಕದಲ್ಲಿ ನಿಂತ ಕಾರಣ ಮತ್ತೊಂದು ಭಾರಿ ಪ್ರಮಾದ ತಪ್ಪಿದೆ.
ರಸ್ತೆ ಅಪಘಾತದಲ್ಲಿ ಬಿಸಿಎಂ ಇಲಾಖೆಗೆ ಹೊರಗುತ್ತಿಗೆ ಆಧಾರದ ಮೇಲೆ ಸಂಚರಿಸುತ್ತಿದ್ದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ ಬಿಸಿಎಂ ಇಲಾಖೆಯಿಂದ ಹೊರಗುತ್ತಿಗೆ ಆಧಾರದ ಮೇರೆಗೆ ನಡೆಯುತ್ತಿದ್ದ ಕಾರು ನಂಬಿ ಜೀವನ ನಡೆಸುತ್ತಿದ್ದ ಚಾಲಕನ ಬದುಕು ಅತಂತ್ರವಾಗಿದೆ ಒಟ್ಟಾರೇ ರಸ್ತೆ ದುರಂತದಲ್ಲಿ ಮೂರು ಅಧಿಕಾರಿಗಳು ಪಾರಾಗಿದ್ದಾರೆ ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.