ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ.
ಮೃತರನ್ನು ಗೀತಾ (32 ವ), ಶಾರದಾ (60 ವ) ಮತ್ತು ಬಾಲಕಿ ಧೃತಿ (05 ವ) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಗೇಶ (65 ವ), ದಯಾನಂದ (66 ವ), ಸುಧೀಂದ್ರ (35 ವ) ಎಂಬವರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಅವಿವಾಹಿತೆಯಾಗಿ ಉಳಿದಿದ್ದೇಕೆ? ಲತಾ- ರಾಜ್‌ಸಿಂಗ್ ದುಂಗಾರ್ಪುರ್ “ಪ್ರೇಮ್’ ಕಹಾನಿ
ಒಂದೇ ಕುಟುಂಬದ ಸದಸ್ಯರು ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಜೋಡಿ ಶ್ರೀರಂಗಾಪುರ ಬಳಿ ರಸ್ತೆ ಬದಿಯ ಮರಕ್ಕೆ ಕಾರು ಢಿಕ್ಕಿಯಾಗಿದೆ. ತಡರಾತ್ರಿ ವೇಳೆ ಈ ಅಪಘಾತ ನಡೆದಿದ್ದು, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:ಪಬ್ ನಲ್ಲಿ ಕನ್ನಡ ಹಾಡು ಹಾಕಿ ಎಂದಿದಕ್ಕೆ ಮಹಿಳೆ ಮೇಲೆ ಡಿ.ಜೆ.ಯಿಂದ ಹಲ್ಲೆ