Advertisement

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

11:45 PM May 27, 2024 | Team Udayavani |

ಪಡುಬಿದ್ರಿ: ಬಡಾ ಎರ್ಮಾಳು ಕಲ್ಯಾಣಿ ಬಾರ್‌ ಎದುರಿನ ರಿಕ್ಷಾ ನಿಲ್ದಾಣದತ್ತ ರವಿವಾರ ಸಂಜೆ ವೇಳೆ ನಡೆದು ಬರುತ್ತಿದ್ದ ಬಡಾ ಗ್ರಾಮದ ನಿವಾಸಿ ರಮೇಶ್‌ (66) ಅವರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಕಾರೊಂದು ಢಿಕ್ಕಿಯಾಗಿ ತಲೆಗೆ ತೀವ್ರ ಗಾಯಗೊಂಡವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೇ 26ರ ರಾತ್ರಿ ಸಾವನ್ನಪ್ಪಿದ್ದಾರೆ.

Advertisement

ಹೆದ್ದಾರಿಯ ತೀರಾ ಎಡಬದಿಗೆ ಚಲಾಯಿಸಿದ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗ್ರತೆಯ ಚಾಲನೆಯೇ ಈ ಘಟನೆಗೆ ಕಾರಣವಾಗಿದ್ದು, ಆತನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಸರ್ವೀಸ್‌ ರಸ್ತೆಯಿಲ್ಲ; ಹೆದ್ದಾರಿ ದೀಪಗಳೂ ಇಲ್ಲ
ಪಡುಬಿದ್ರಿಯಿಂದ ಉಚ್ಚಿಲದ ಬಸ್‌ ನಿಲ್ದಾಣದವರೆಗೂ ಅಪಘಾತ ವಲಯವಾಗಿದ್ದು, ಈಗಾಗಲೇ ಹಲವು ಪ್ರಾಣಹಾನಿಗಳು ಸಂಭವಿಸಿವೆ. ಈ ಪ್ರದೇಶದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣವೂ ಆಗಿಲ್ಲ. ಹೆದ್ದಾರಿ ದೀಪಗಳನ್ನೂ ಅಳವಡಿಸಲಾಗಿಲ್ಲವೆಂದು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಅವರು ಕೆಕೆಆರ್‌ ಟೋಲ್‌ ಕಂಪೆನಿ ವಿರುದ್ಧ “ಉದಯವಾಣಿ’ಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next