Advertisement

Bantwal ಸ್ಕೂಟರ್‌ ಢಿಕ್ಕಿ: ಪಾದಚಾರಿ ಗಾಯ

12:17 AM Jun 15, 2024 | Team Udayavani |

ಬಂಟ್ವಾಳ: ರಾ.ಹೆ.75ರ ಕಲ್ಲಡ್ಕ ಸರಕಾರಿ ಶಾಲೆ ಬಳಿ ಸ್ಕೂಟರ್‌ ಢಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಪಾದಚಾರಿ ಗಾಯಗೊಂಡ ಘಟನೆ ಜೂ. 13ರಂದು ನಡೆದಿದೆ.

Advertisement

ಗೋಳ್ತಮಜಲು ಗ್ರಾಮ ನಿವಾಸಿ ಉಪೇಂದ್ರ ಗಾಯಗೊಂಡು ಕಲ್ಲಡ್ಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಅವರು ಕೆಲಸದ ನಿಮಿತ್ತ ಕಲ್ಲಡ್ಕ ಸರಕಾರಿ ಶಾಲೆ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಕಲ್ಲಡ್ಕ ಜಂಕ್ಷನ್‌ ಕಡೆಯಿಂದ ಆಗಮಿಸಿದ ಸ್ಕೂಟರ್‌ ಢಿಕ್ಕಿ ಹೊಡೆದಿದೆ.

ಸವಾರ ಅಸ್ಪಕ್‌ ಅಹಮ್ಮದ್‌ ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷÂತನದಿಂದ ಸವಾರಿ ಮಾಡಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಕ್ಕೋ ಕೊಯ್ಯುವ ವೇಳೆ ಆಯತಪ್ಪಿ ಬಿದ್ದ ಮಹಿಳೆ ಸಾವು
ಗುತ್ತಿಗಾರು: ಕೊಕ್ಕೊ ಕೊಯ್ಯುವ ವೇಳೆ ಆಯ ತಪ್ಪಿ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ನೆಲ್ಲೂರು ಕೇಮ್ರಾಜೆ ಗ್ರಾಮದ ತುಂಬೆತ್ತಡ್ಕದಲ್ಲಿ ಸಂಭವಿಸಿದೆ. ಇಲ್ಲಿನ ತುಂಬೆತ್ತಡ್ಕ ಐತ್ತಪ್ಪ ನಾಯ್ಕ ಅವರ ಪತ್ನಿ ಸರಸ್ವತಿ (59) ಮೃತ ಮಹಿಳೆ.

ಸರಸ್ವತಿಯವರು ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೂರು ವಾರದ ಹಿಂದೆ ಕೆಲಸಕ್ಕೆ ಹೋಗಿದ್ದ ವೇಳೆ ಕೊಕ್ಕೋ ಕೊಯ್ಯುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದಿದ್ದರು. ಪರಿಣಾಮ ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ, ಪುತ್ರ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ವೇಣುಗೋಪಾಲ ತುಂಬೆತ್ತಡ್ಕ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next