Advertisement
ದುಬೈಯ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಮಂಗಳವಾರ ಕಾರು ರೇಸಿಂಗ್ ತರಬೇತಿ ನಡೆಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿದೇ ಅವರು ಪಾರಾಗಿದ್ದಾರೆ. ಮುಂಬರುವ ರೇಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವುದಕ್ಕಾಗಿ ಅವರು ದುಬೈನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಅವರ ಕಾರು ಪಕ್ಕದಲ್ಲಿದ್ದ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಆದರೆ ನಟನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಟ ಅಜಿತ್ ಕುಮಾರ್ ಹಲವಾರು ವರ್ಷಗಳಿಂದ ಕಾರು ರೇಸಿಂಗ್ ಬಗ್ಗೆ ಆಸಕ್ತಿ ಹೊಂದಿದ್ದರು. ಇತ್ತೀಚೆಗೆ ಫಾರ್ಮುಲಾ ಬಿಎಂಡಬ್ಲ್ಯು ಏಷ್ಯಾ, ಬ್ರಿಟಿಷ್ ಫಾರ್ಮುಲಾ 3, ಹಾಗೂ ಎಫ್ಐಎ ಎಫ್ 2 ಚಾಂಪಿಯನ್ಶಿಪ್ ಹಾಗೂ ಮೋಟಾರು ಸ್ಪೋರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅಜಿತ್ ಕುಮಾರ್ ತನ್ನದೇ ಆದ ರೇಸಿಂಗ್ ತಂಡವನ್ನು ಹೊಂದಿದ್ದು, ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. 2025ರಲ್ಲಿ ಕೂಡ ಯುರೋಪ್ನ ಪ್ರತಿಷ್ಠಿತ ರೇಸಿಂಗ್ ಸ್ಪರ್ಧೆಗಳಲ್ಲಿ ಈ ತಂಡ ಭಾಗಿಯಾಗಲು ಅಗತ್ಯ ಸಿದ್ಧತೆಗಳ ಕೈಗೊಂಡಿತ್ತು. ಅಜಿತ್ ಕುಮಾರ್ 90ರ ದಶಕದಲ್ಲೇ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ಶಿಪ್ನಲ್ಲಿ ಪ್ರಥಮವಾಗಿ ಭಾಗವಹಿಸಿದ್ದರು.
Related Articles
Advertisement
ಈ ರೇಸಿಂಗ್ ಹವ್ಯಾಸದ ಪಯಣದಲ್ಲಿ ನಟ ಅಜಿತ್ ಕುಮಾರ್ ಈ ಮೊದಲು ಹಲವು ಬಾರಿ ಗಾಯಾಳು ಆಗಿ ಸಮಸ್ಯೆ ಅನುಭವಿಸಿ ರೇಸಿಂಗ್ ಸ್ಪರ್ಧೆಗಳಿಂದ ಸುಮಾರು 15 ವರ್ಷ ಕಾಲ ಹಿಂದೆ ಸರಿದಿದ್ದರು. ಇದೀಗ ಮತ್ತೆ ರೇಸಿಂಗ್ ಸ್ಪರ್ಧೆಗೆ ಮರಳಿದ್ದರು.