ಕಲಬುರಗಿ: ಎತ್ತಿನ ಬಂಡಿ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟು, ಐದು ಜನರು ಗಾಯಗೊಂಡ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಕ್ರಾಸ್ ಸಮೀಪ ನಡೆದಿದೆ.
ಅಪಘಾತಕ್ಕೊಳಗಾದ ಕಾರು ಕಲಬುರಗಿಯಿಂದ ಚಿಂಚೋಳಿ ತಾಲೂಕಿನ ಸುಲೇಪೇಟ್ ಗೆ ಮೂವರು ಶಿಕ್ಷಕಿಯರನ್ನು ಕರೆದುಕೊಂಡು ಹೋಗುತ್ತಿತ್ತು. ಕೋಡ್ಲಿ ಗ್ರಾಮದ ರೈತ ಮನೆಯಿಂದ ಹೊಲಕ್ಕೆ ಎತ್ತಿನ ಬಂಡಿಯನ್ನು ಹೊಡೆದುಕೊಂಡು ಹೊರಟಿದ್ದ.
ಈ ವೇಳೆ ಎರಡರ ಮಧ್ಯೆ ಢಿಕ್ಕಿ ಸಂಭವಿಸಿದೆ. ಕಾರು ಗುದ್ದಿದ ರಭಸಕ್ಕೆ ಎತ್ತುಗಳ ಸಾವಿಗೀಡಾಗಿವೆ. ಎತ್ತಿನ ಬಂಡಿಯಲ್ಲಿದ್ದ ರೈತ ನಾಗಪ್ಪ ಪೂಜಾರಿ ಗಾಯಗೊಂಡಿದ್ದು, ಕೋಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾರಿನಲ್ಲಿದ್ದ ಶಿಕ್ಷಕಿಯರಾದ ನಾಜಿಯಾ ಬೇಗಂ, ಫರಿದಾ, ಫಿರ್ದೋಸ್ ಸಭಾ ಹಾಗೂ ಕಾರು ಚಾಲಕ ಮಹ್ಮದ್ ಗಯಾಜೊದ್ದೀನ್ ಸಹ ಗಾಯಗೊಂಡಿದ್ದಾರೆ. ಇವೆಲ್ಲರಿಗೆ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಭಿನ್ನಾಭಿಪ್ರಾಯ ಸ್ಪೋಟ: ರಾಹುಲ್ ಬೆನ್ನಿಗೆ ನಿಂತ ರಮ್ಯಾ ಹೇಳಿದ್ದೇನು?
ಸುಲೇಪೇಟ್ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಮೂವರು ಶಿಕ್ಷಕಿಯರು ಕಾರಿನಲ್ಲಿ ತೆರಳುತ್ತಿದ್ದರು. ಸ್ಥಳಕ್ಕೆ ರಟಕಲ್ ಠಾಣೆ ಪಿಎಸ್ಐ ಶಿವಶಂಕರ ಸುಬೇದಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.