Advertisement

ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

05:04 PM Jan 22, 2020 | keerthan |

ಚಿತ್ರದುರ್ಗ: ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಕೆರೆ ಬಳಿ ಮಂಗಳವಾರ ನಡೆದಿದೆ.

Advertisement

ಹೊಳಲ್ಕೆರೆ ತಾಲೂಕು ನೇರಳಕಟ್ಟೆ ಗ್ರಾಮದ ಉಮೇಶ (32), ಗುಂಡೇರಿ ಗ್ರಾಮದ ಶ್ರೀನಿವಾಸ (30) ಅಪಘಾತದಲ್ಲಿ ಮೃತಪಟ್ಟವರು.

ಚಿತ್ರದುರ್ಗದಿಂದ ಶಿವಮೊಗ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ದುಮ್ಮಿ ಕೆರೆ ಏರಿ ಬಳಿ ಕಾರು ಬೈಕ್ ಅಪಘಾತ ಸಂಭವಿಸಿದೆ. ಗಾಯಾಳು ವ್ಯಕ್ತಿ ಹೊಳಲ್ಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next