Advertisement

ಕಾರು-ಸೈಕಲ್ ಡಿಕ್ಕಿ…10 ಕಿ.ಮೀ ಡೆಡ್ ಬಾಡಿ ಹೊತ್ತೊಯ್ದ ಚಾಲಕನ ಬಂಧನ

08:42 PM Feb 19, 2021 | Team Udayavani |

ಪಂಜಾಬ್ : ಅಪಘಾತಕ್ಕೀಡಾಗಿದ್ದ ಸೈಕಲ್ ಸವಾರನ ಮೃತದೇಹ ಕಾರಿನ ಟಾಪ್ ಮೇಲೆ ಹೊತ್ತು10 ಕಿ.ಮೀ ದೂರು ಪ್ರಯಾಣಿಸಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ಬಂಧಿತ ಕಾರು ಚಾಲಕನನ್ನು ನಿರ್ಮಲ್ ಸಿಂಗ್ ಎಂದು ಗುರುತಿಸಲಾಗಿದೆ.

Advertisement

ಇಂದು (ಫೆ.19) ಅತೀ ವೇಗದಿಂದ ಬಂದ ಕಾರು ಸೈಕಲ್ ಸವಾರನಿಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಅಪಘಾತಕ್ಕೀಡಾದವನ ದೇಹ ಕಾರ್ ಮೇಲೆ ಹಾರಿ ಬಿದ್ದಿತ್ತು. ಇದನ್ನು ಗಮನಸಿದ್ದರೂ ಕೂಡ ಕಾರು ನಿಲ್ಲಿಸದ ನಿರ್ಮಲ್ ಸಿಂಗ್, ಸುಮಾರು 10 ಕಿ.ಮೀ ವರೆಗೆ ಕಾರು ಚಲಾಯಿಸಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಮೃತ ದೇಹ ಬೀಸಾಕಿ ಪರಾರಿಯಾಗಿದ್ದ.

ಘಟನೆಯ ವಿಡಿಯೋ ಅಪಘಾತ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next