Advertisement

ಹುಣಸೂರು: ವರ್ಷದಿಂದ ಜನರನ್ನು ಕಾಡುತ್ತಿದ್ದ ಚಿರತೆ ಸೆರೆ

07:09 PM Apr 16, 2021 | Team Udayavani |

ಹುಣಸೂರು: ತಾಲೂಕಿನ ಹನಗೋಡಿನಲಕ್ಷ್ಮಣತೀರ್ಥ ನದಿಯಂಚಿನಲ್ಲಿವರ್ಷದಿಂದ ಕಾಡುತ್ತಿದ್ದ ಚಿರತೆಗಳ ಪೈಕಿಮರಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.ತಾಲೂಕಿನ ಹನಗೋಡು ಗ್ರಾಮದತಾಪಂ ಮಾಜಿ ಸದಸ್ಯ ಎಚ್‌.ಆರ್‌.ರಮೇಶ್‌ ಅವರಿಗೆ ಸೇರಿದ ತೋಟದಲ್ಲಿಅರಣ್ಯ ಇಲಾಖೆಯವರು ಇರಿಸಿದ್ದಬೋನಿಗೆ ಒಂದೂವರೆ ವರ್ಷದಗಂಡುಚಿರತೆ ಬುಧವಾರ ರಾತ್ರಿಸೆರೆಯಾಗಿದೆ.

Advertisement

ಈ ಬಗ್ಗೆ ಅರಣ್ಯಇಲಾಖೆಗೆ ನೀಡಿದ ಮಾಹಿತಿ ಮೇರೆಗೆಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯಡಿಆರ್‌ಎಫ್‌ಒ ಹರೀಶ್‌ ಹಾಗೂಸಿಬ್ಬಂದಿಗಳು ಬೋನಿನಲ್ಲಿಬಂಧಿಯಾಗಿದ್ದ ಚಿರತೆ ಮರಿಯನ್ನುನಾಗರಹೊಳೆ ಉದ್ಯಾನದಕಲ್ಲಳ್ಳವಲಯದಲ್ಲಿ ಬಂಧಮುಕ್ತಗೊಳಿಸಲಾಯಿತು.

ವರ್ಷದಿಂದ ಚಿರತೆಯೊಂದುಎರಡು ಮರಿಗಳೊಂದಿಗೆ ಲಕ್ಷ್ಮಣತೀರ್ಥನದಿದಂಡೆ ಸೇರಿದಂತೆ ತೋಟ ಹಾಗೂಅಕ್ಕಪಕ್ಕದ ಜಮೀನು, ಅಬ್ಬೂರು,ಬಿ.ಆರ್‌.ಕಾವಲ್‌ ಗ್ರಾಮಗಳಲ್ಲಿ ಸಾಕುಪ್ರಾಣಿಗಳನ್ನ ಬೇಟೆಯಾಡುತ್ತಿತ್ತು.ಅರಣ್ಯ ಇಲಾಖೆ ಸಹ ಹಲವಾರು ಬಾರಿಬೋನ್‌ ಇರಿಸಿದ್ದರೂ ಬಲೆಗೆ ಬಿದ್ದಿರಲಿಲ್ಲ.ಇದೀಗ ಮರಿಯೊಂದು ಮಾತ್ರ ಸಿಕ್ಕಿಬಿದ್ದಿದ್ದು.

ಉಳಿದ ಎರಡು ಚಿರತೆಗಳನ್ನುಹಿಡಿಯಲು ಮತ್ತೆ ಬೋನ್‌ಇರಿಸಬೇಕೆಂದು ಸಾರ್ವಜನಿಕರುಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next