Advertisement

ಇಬ್ಬರು ಆಟೋ ಕಳ್ಳರ ಸೆರೆ

12:55 PM Apr 02, 2022 | Team Udayavani |

ಬೀದರ: ನಗರದಲ್ಲಿ ಶುಕ್ರವಾರ ನ್ಯೂ ಟೌನ್‌ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆಟೋ ರೀಕ್ಷಾ ಕಳ್ಳರನ್ನು ವಶಕ್ಕೆ ಪಡೆದು 1.20 ಲಕ್ಷ ರೂ. ಮೌಲ್ಯದ ಎರಡು ಆಟೋಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Advertisement

ಡಿವೈಎಸ್‌ಪಿ ಕೆ.ಎಂ ಸತೀಶ ಅವರ ಮಾರ್ಗದರ್ಶನದಲ್ಲಿ ನ್ಯೂಟೌನ್‌ ಠಾಣೆಯ ಪಿಐ ಕಪಿಲ್‌ ದೇವ, ಪಿಎಸ್‌ಐ ತಸ್ಲಿಮಾ ಮತ್ತು ಸಿಬ್ಬಂದಿಗಳ ತಂಡ ಆಟೋ ಕಳ್ಳರನ್ನು ಪತ್ತೆ ಹಚ್ಚಿದೆ.

ಎರಡು ಆಟೋಗಳಲ್ಲಿ ಒಂದು ನ್ಯೂ ಟೌನ್‌ ಠಾಣೆ ಮತ್ತು ಇನ್ನೊಂದು ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಬೇಧಿಸಿರುವ ಪೊಲೀಸ್‌ ತಂಡದ ಕಾರ್ಯಕ್ಕೆ ಎಸ್‌ಪಿ ಕಿಶೋರಬಾಬು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next