Advertisement

ಪೊಲೀಸರೆಂದು ವಂಚಿಸುತ್ತಿದ್ದವರ ಸೆರೆ

04:34 PM May 06, 2018 | Team Udayavani |

ತಿಪಟೂರು: ಪೊಲೀಸರು, ಲೋಕಾಯುಕ್ತರು, ಅಬಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಉದ್ಯಮಿಗಳನ್ನು ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿದ್ದ ತಾಲೂಕಿನ ಯುವಕರ ತಂಡವನ್ನು ಗ್ರಾಮಾಂತರ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

Advertisement

ತಾಲೂಕಿನ ಹುಚ್ಚನಹಟ್ಟಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಘಟನೆ ನಡೆದಿದೆ. ಸುಳ್ಳು ಹೇಳಿಕೊಂಡು ಬಂದಿದ್ದ ಯುವಕರಾದ ನಗರದ ಗಾಂಧಿನಗರದ ವಾಸಿ ಪುನೀತ್‌, ನವೀದ್‌, ನವೀನ್‌, ಹಿಪ್ಪೆತೋಪು ವಾಸಿ ಮಂಜುನಾಥ್‌ ಎಂಬುವವರ ತಂಡ ಗ್ರಾಮಕ್ಕೆ ಭೇಟಿ ನೀಡಿ, ನಾವು ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದು ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

ಅಲ್ಲದೆ ನಮಗೆ ಹಣ ನೀಡಿದರೆ ನಿಮ್ಮ ಮೇಲೆ ಕೇಸ್‌ ದಾಖಲಿಸುವುದಿಲ್ಲ ಎಂಬ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಕೃಷ್ಣರಾಜು ಯುವಕರ ತಂಡವನ್ನು ಪರಿಶೀಲಿಸಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಆರೋಪಿಗಳು ತಾಲೂಕಿನ ಹಲವಾರು ಕಡೆಗಳಲ್ಲಿ ನಕಲಿ ದಾಳಿ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next