Advertisement

ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದವರ ಸೆರೆ

12:57 AM Jun 30, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಮೀಟರ್‌ ಬಡ್ಡಿ ಹಾಗೂ ಅಧಿಕ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಪತ್ತೆ ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸೂಚನೆ ಮೇರೆಗೆ ಉತ್ತರ ವಿಭಾಗದ ಮಲ್ಲೇಶ್ವರ, ಯಶವಂತಪುರ ಮತ್ತು ಜೆ.ಸಿ.ನಗರ ಉಪವಿಭಾಗದ 10 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹತ್ತು ದಂಧೆಕೋರರ ಮನೆಗಳ ಮೇಲೆ ದಾಳಿ ನಡೆಸಿ 13,16 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳ 145 ಖಾಲಿ ಚೆಕ್‌ಗಳು,

ಐದು ಸ್ಟಾಂಪ್‌ ಪತ್ರಗಳು, ಮೂರು ಆಸ್ತಿ ಪತ್ರಗಳು, ಆರು ಬಾಂಡ್‌ ಪೇಪರ್‌ಗಳು, ಎರಡು ಜಿಪಿಎ ಪತ್ರಗಳು, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಅಡಮಾನ ಪತ್ರಗಳು ಮತ್ತು ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ತು ಮಂದಿಯ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ.

ವೆಂಕಟೇಶ್‌ (31), ನಾಗರಾಜ್‌ (63), ಕೆ.ಎಂ.ಜಗದೀಶ್‌ (32), ಕುಮಾರ್‌ (35), ಪಿ.ಬಿ.ರಾಮಕೃಷ್ಣ (48), ಸುಜಾತಾ (46) ಬಂಧಿತರು. ಹಾಗೇ ಇತರೆ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿದ್ದು, ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಸುಬ್ರಹ್ಮಣ್ಯನಗರದ ವೆಂಕಟೇಶ್‌ (31) ಬಳಿ 15,600 ರೂ. ನಗದು, ಸಾಲ ಪಡೆದುಕೊಂಡವರ ವಿವರದ ಎರಡು ನೋಟ್‌ ಪುಸ್ತಕಗಳು, ಮಹಾಲಕ್ಷಿಲೇಔಟ್‌ನ ಕುರುಬರಹಳ್ಳಿಯ ನಾಗರಾಜ್‌ ಬಳಿ ವಿವಿಧ ಬ್ಯಾಂಕ್‌ಗಳ 19 ಖಾಲಿ ಚೆಕ್‌ಗಳು, ಎರಡು ಖಾಲಿ ಬಾಂಡ್‌ಗಳು, ನಂದಿನಿ ಲೇಔಟ್‌ನ ಕೆ.ಎಂ.ಜಗದೀಶ್‌ ಬಳಿ ಮೂರು ಖಾಲಿ ಚೆಕ್‌ಗಳು,

Advertisement

ನಾಲ್ಕು ಖಾಲಿ ಬಾಂಡ್‌ ಪೇಪರ್‌ಗಳು, ರಾಜಗೋಪಾಲನಗರದ ಕುಮಾರ್‌ ಎಂಬಾತನ ಮನೆ ಮತ್ತು ಕಚೇರಿಯಲ್ಲಿ ನಾಲ್ಕು ಖಾಲಿ ಚೆಕ್‌ಗಳು, ಎರಡು ಶುದ್ಧ ಕ್ರಯ ಪತ್ರ, ಎರಡು ನೋಟ್‌ ಪುಸ್ತಕಗಳು,ಮೂರು ದ್ವಿಚಕ್ರ ವಾಹನಗಳು, ಆರ್‌ಎಂಸಿ ಯಾರ್ಡ್‌ನ ನಂದಿನಿ ಲೇಔಟ್‌ನ ಪಿ.ಬಿ.ರಾಮಕೃಷ್ಣ ಬಳಿ ಎರಡು ಖಾಲಿ ಸ್ಟಾಂಪ್‌ ಪೇಪರ್‌ಗಳು, ಹರೀಶ್‌ ಎಂಬುವರ ಹೆಸರಿನಲ್ಲಿರುವ ಎರಡು ಖಾಲಿ ಚೆಕ್‌ಗಳು,

ತ್ಯಾಗರಾಜ್‌ ಎಂಬುವರ ಹೆಸರಿನಲ್ಲಿರುವ ಒಂದು ಖಾಲಿ ಈ ಸ್ಟಾಂಪ್‌ ಪೇಪರ್‌, ಅಸಲು ಜಿಪಿಎ ಪತ್ರ, ಏಳು ವಿವಿಧ ಜನರ ಹೆಸರಿನಲ್ಲಿರುವ ಖಾಲಿ ಚೆಕ್‌ಗಳು, ತಾತ್ಕಾಲಿಕ ಹಕ್ಕು ಪತ್ರದ ಅಸಲು, ಒಂದು ಖಾಲಿ ಈ ಸ್ಟಾಂಪ್‌ ಪೇಪರ್‌, ಮೂಲ ಜಿಪಿಎ ಪತ್ರ, ನಿವೇಶನದ ಶುದ್ಧ ಕ್ರಯ ಪತ್ರದ ಅಸಲು, ಐದು ನೋಟ್‌ ಪುಸ್ತಕಗಳ ಸಿಕ್ಕಿವೆ.

ಸೋಲದೇವನಹಳ್ಳಿಯ ಹೆಸರುಘಟ್ಟದ ದಿಲೀಪ್‌ ಬಳಿ ಜನಾರ್ಧನ ಹೆಸರಿನ ಒಂದು ಖಾಲಿ ಚೆಕ್‌, ನಾಲ್ಕು ಮತ್ತು ದ್ವಿಚಕ್ರ ವಾಹನಗಳ ನಾಲ್ಕು ಅಡಮಾನ ಪತ್ರಗಳು, ಬಾಗಲಗುಂಟೆ ಟಿ.ದಾಸರಹಳ್ಳಿಯ ಸುಜಾತಾ ಎಂಬವರ ಮನೆಯಲ್ಲಿ 18 ಖಾಲಿ ಚೆಕ್‌ಗಳು, 19 ಬಾಂಡ್‌ ಪೇಪರ್‌ಗಳು ಮತ್ತು ಇತರೆ ದಾಖಲೆಗಳು,

ಜಾಲಹಳ್ಳಿಯ ಜಮುನಾ ಮತ್ತು ಪೀಣ್ಯದ ಇಂದಿರಾನಗರದಲ್ಲಿ ವೆಂಕಟೇಶ್‌ ಅಲಿಯಾಸ್‌ ಆಸಿಡ್‌ ವೆಂಕೇಟಶ್‌ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರ್‌.ಟಿ.ನಗರದ ಎಸ್‌. ಜಯರಾಮ್‌ ಅಲಿಯಾಸ್‌ ರಾಮಣ್ಣ ಎಂಬವರ ಮನೆಯಲ್ಲಿ ದಾಳಿ ನಡೆಸಿ 90 ಖಾಲಿ ಚೆಕ್‌ಗಳು, 25 ಖಾಲಿ ಬೇಡಿಕೆ ಪತ್ರ, ಪ್ರಾಮಿಸರಿ ನೋಟ್‌ ಮತ್ತು ಕನ್‌ಸಿಡರೇಷನ್‌ ರೆಸಿಪ್ಟ್ಗಳು, ಟಾಟಾ ಸಫಾರಿ ವಾಹನದ ದಾಖಲೆ ಪತ್ರ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next