Advertisement

ದಾಂಧಲೆ ನಡೆಸುತ್ತಿದ್ದಒಂಟಿ ಸಲಗ ಸೆರೆ

02:49 PM Dec 21, 2018 | Team Udayavani |

ಸಕಲೇಶಪುರ: ಬಲಗಾಲಿಗೆ ತೀವ್ರ ಪೆಟ್ಟು ಬಿದ್ದು ದಾಂಧಲೆ ನಡೆಸುತ್ತಿದ್ದ ಒಂಟಿಸಲಗವೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಯಸಳೂರು ಹೋಬಳಿ ದೊಡ್ಡ ಕುಂದೂರು ಅರಣ್ಯದ
ಸಮೀಪ 5 ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.

Advertisement

ಮುಂಜಾನೆ 8 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಸಿಬ್ಬಂದಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಂಟಿಸಲಗವೊಂದನ್ನು ದೊಡ್ಡ ಕುಂದೂರು ಅರಣ್ಯ ಸಮೀಪ ಹುಡುಕವಲ್ಲಿ ಯಶಸ್ವಿಯಾದರು. ತಕ್ಷಣ ನಾಗರಹೊಳೆಯಿಂದ ಆಗಮಿಸಿದ್ದ ತಜ್ಞರ ತಂಡ ಒಂಟಿಸಲಗಕ್ಕೆ ಅರಿವಳಿಕೆ ನೀಡುವುದರಲ್ಲಿ ಯಶಸ್ವಿಯಾಯಿತು. 

ಅರಿವಳಿಕೆ ಮದ್ದಿನ ಪರಿಣಾಮ ಸ್ಥಳದಲ್ಲೇ ಕುಸಿದ ಕಾಡಾನೆಯನ್ನು ಅಭಿಮನ್ಯು, ಕೃಷ್ಣ, ಅಜಯ್‌, ಧನಂಜಯ, ಹರ್ಷ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ಸಕ್ರೆಬೈಲು ಆನೆಧಾಮಕ್ಕೆ ಕಳುಹಿಸಲಾಯಿತು. ಸೆರೆಹಿಡಿದ ಒಂಟಿಸಲಗದ ಬಲಗಾಲಿಗೆ ಗುಂಡೇಟು ತಗುಲಿ ಯಸಳೂರು ಭಾಗದ ತೋಟ, ಗದ್ದೆಗಳಲ್ಲಿ ದಾಂಧಲೆ ನಡೆಸುತ್ತಿತ್ತು. ಕಾರ್ಯಾಚರಣೆಯಲ್ಲಿ ಸಿಸಿಎಫ್ ಎ.ಕೆ.ಸಿಂಹ, ನಾಗರಹೊಳೆ ಅರಿವಳಿಕೆ ತಜ್ಞ ಮುಜೀಬುರ್‌ ರೆಹಮಾನ್‌, ವೈದ್ಯಾಧಿಕಾರಿ
ಗಳಾದ ವಿನಯ್‌, ಮುರಳಿ ತಾಲೂಕು ಉಪವಲಯ ಅರಣ್ಯಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಮೋಹನ್‌, ಯಸಳೂರು ವಲಯ ಅರಣ್ಯಾಧಿಕಾರಿ ಅಭಿಷೇಕ್‌, ಅಲೂರು ಅರಣ್ಯಾಧಿಕಾರಿ ರಾಜಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next