Advertisement

ಬಾದಾಮಿ, ಇಳಕಲ್‌ನಲ್ಲಿ  24 ಲಕ್ಷ ವಶ 

04:57 PM May 12, 2018 | |

ಬಾಗಲಕೋಟೆ: ಜಿಲ್ಲೆಯ ಇಳಕಲ್‌ ನಗರ ಹಾಗೂ ಬಾದಾಮಿ ಪಟ್ಟಣದಲ್ಲಿ ಚುನಾವಣಾಧಿಕಾರಿಗಳು ಪ್ರತ್ಯೇಕ ದಾಳಿ ನಡೆಸಿದ್ದು 23.62 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಹಾಗೂ ಹುನಗುಂದ ಚುನಾವಣಾಧಿಕಾರಿಗಳು ಇಳಕಲ್‌ ನಗರದ ಸಂದೀಪ ಮಜಿ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದು, ಅವರ ಮನೆಯಲ್ಲಿ ಉದ್ಯಮಿ ಕಮಲ್‌ಲಾಲ್‌ ವರ್ಮಾ ಎಂಬುವವರಿಗೆ ಸೇರಿದ್ದು ಎನ್ನಲಾದ 20 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಇಳಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಾದಾಮಿಯಲ್ಲಿ 3.62 ಲಕ್ಷ ವಶ: ಬಾದಾಮಿ ನಗರ ಹಾಗೂ ಹೊಸೂರ ಗ್ರಾಮದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾದ 3.62 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯೊಬ್ಬರ ದೂರಿನ ಮೇರೆಗೆ ಎಸ್ಪಿ ಸಿ. ವಂಶಿಕೃಷ್ಣ ಅವರು ಬಾದಾಮಿ ಪಟ್ಟಣದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೇಲೆ ದಾಳಿ ನಡೆಸಿ 1,62,830 ರೂ. ನಗದು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಬಾದಾಮಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿ ಸುಮಾರು 2.96 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ. ಈ ಎರಡೂ ಪ್ರಕರಣಗಳು ಬಾದಾಮಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

 2.25 ಲಕ್ಷ ರೂ. ವಶ
ಬನಹಟ್ಟಿ: ಮತದಾರರಿಗೆ ಹಂಚಲು ಸ್ಕೂಟಿಯಲ್ಲಿ ಸಾಗಿಸುತ್ತಿದ್ದ 2.25 ಲಕ್ಷ ರೂ. ನಗರದ ಬಸ್‌ ನಿಲ್ದಾಣದ ಬಳಿ ಗುರುವಾರ ರಾತ್ರಿ ವಶಪಡಿಸಿಕೊಳ್ಳಲಾಗಿದೆ. ತಡರಾತ್ರಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಸ್ಕೂಟಿಯೊಂದರಲ್ಲಿ 2.25 ಲಕ್ಷ ರೂ. ಮತದಾರರಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಸಂಶಯದಿಂದ ವಶಕ್ಕೆ ಪಡೆದ ಪೊಲೀಸರು ಹಾಗೂ ಎಫ್‌ ಎಸ್‌ಟಿ ತಂಡದಿಂದ ಸೂಕ್ತ ದಾಖಲೆಯಿಲ್ಲದ ಕಾರಣ ಬೈಕ್‌ ಸವಾರ ಸುರೇಶ ಮೋಪಗಾರ(31) ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಎಸ್‌.ಎಂ. ಅವಜಿ ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next