Advertisement
ಭಾರತದ ಸಾಮಾನ್ಯ ಮಟ್ಟದ ಬೌಲಿಂಗ್ ಮತ್ತು ಕಳಪೆ ಕ್ಷೇತ್ರರಕ್ಷಣೆಯ ಲಾಭವೆತ್ತಿದ ನೇಪಾಲ 48.2 ಓವರ್‌ಗಳಲ್ಲಿ 230 ರನ್ ಪೇರಿಸಿತು. ಭಾರತಕ್ಕೆ 23 ಓವರ್‌ಗಳಲ್ಲಿ 145 ರನ್ ಗುರಿ ಲಭಿಸಿತು. 20.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 147 ರನ್ ಬಾರಿಸಿತು. ಆಗ ರೋಹಿತ್ ಶರ್ಮ 74 ಮತ್ತು ಶುಭಮನ್ ಗಿಲ್ 67 ರನ್ ಬಾರಿಸಿ ಅಜೇಯರಾಗಿದ್ದರು.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತು. ಬಹುಶಃ ಪಾಕಿಸ್ಥಾನ ವಿರುದ್ಧ ಬೌಲಿಂಗ್ ಅವಕಾಶ ಸಿಗದ ಕಾರಣ ರೋಹಿತ್ ಶರ್ಮ ಈ ನಿರ್ಧಾರ ತೆಗೆದುಕೊಂಡರೆಂಬುದು ಸ್ಪಷ್ಟ. ಆದರೆ ಇದೇ ನೇಪಾಲ ತಂಡ ಪಾಕಿಸ್ಥಾನ ವಿರುದ್ಧ 104ಕ್ಕೆ ಆಲೌಟ್ ಆಗಿತ್ತು. ಭಾರತದ ವಿರುದ್ಧ ಚೇತೋಹಾರಿ ಬ್ಯಾಟಿಂಗ್ ಪ್ರದರ್ಶಿ ಸಿತು. ಇದು ಭಾರತ-ನೇಪಾಲ ನಡುವಿನ ಮೊದಲ ಅಂತಾರಾಷ್ಟ್ರೀಯ ಪಂದ್ಯ ಎಂಬುದು ಉಲ್ಲೇಖನೀಯ.
Related Articles
Advertisement
ಭುರ್ತೆಲ್ 25 ಎಸೆತಗಳಿಂದ 38 ರನ್ ಬಾರಿಸಿದರು. ಆಸಿಫ್ ಶೇಖ್ 30ನೇ ಓವರ್ ತನಕ ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ನಿಭಾಯಿಸಿ ನಿಂತರು. 97 ಎಸೆತ ಎದುರಿಸಿ 58 ರನ್ ಹೊಡೆದರು.
ನೇಪಾಲದ ಬ್ಯಾಟಿಂಗ್ ಸರದಿಗೆ ಬಿಸಿ ಮುಟ್ಟಿಸಿದವರು ರವೀಂದ್ರ ಜಡೇಜ. ಅವರು 16ನೇ ಹಾಗೂ 21ನೇ ಓವರ್ ನಡುವೆ 3 ವಿಕೆಟ್ ಉಡಾಯಿಸಿದರು. ನಾಯಕ ರೋಹಿತ್ ಪೌದೆಲ್ (5), ಕುಶಲ್ ಮಲ್ಲ (2) ಮತ್ತು ಭೀಮ್ ಶಾರ್ಕಿ (7) ವಿಕೆಟ್‌ಗಳು ಜಡೇಜ ಪಾಲಾದವು. ಆದರೆ ಮತ್ತೋರ್ವ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಯಾವುದೇ ಯಶಸ್ಸು ಕಾಣಲಿಲ್ಲ.
144ಕ್ಕೆ 6 ವಿಕೆಟ್ ಕಳೆದುಕೊಂಡ ನೇಪಾಲ ಇನ್ನೂರರೊಳಗೆ ಆಲೌಟ್ ಆಗುವ ಸ್ಥಿತಿ ತಲುಪಿತು. ಆದರೆ ಕೆಳ ಸರದಿಯ ಆಟಗಾರರಾದ ಸೋಮ್‌ಪಾಲ್ ಕಾಮಿ (48), ದೀಪೇಂದ್ರ ಸಿಂಗ್ ಐರಿ (29) ಮತ್ತು ಗುಲ್ಶನ್ ಝಾ (23) ಸೇರಿಕೊಂಡು ಇನ್ನಿಂಗ್ಸ್ ಬೆಳೆಸಿದರು. ಜಡೇಜ ಮತ್ತು ಸಿರಾಜ್ ತಲಾ 3 ವಿಕೆಟ್ ಉರುಳಿಸಿದರು. ಶಮಿ, ಪಾಂಡ್ಯ ಮತ್ತು ಠಾಕೂರ್ ಒಂದೊಂದು ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ನೇಪಾಲ-48.2 ಓವರ್‌ಗಳಲ್ಲಿ 230 (ಆಸಿಫ್ ಶೇಖ್ 58, ಸೋಮ್‌ಪಾಲ್ ಕಾಮಿ 48, ಕುಶಲ್ ಬುರ್ತೆಲ್ 38, ದೀಪೇಂದ್ರ ಸಿಂಗ್ 29, ಗುಲ್ಶನ್ ಝಾ 23, ರವೀಂದ್ರ ಜಡೇಜ 40ಕ್ಕೆ 3, ಮೊಹಮ್ಮದ್ ಸಿರಾಜ್ 61ಕ್ಕೆ 3). ಭಾರತ 20.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 147 (ರೋಹಿತ್ ಶರ್ಮ ಔಟಾಗದೆ 74, ಶುಭಮನ್ ಗಿಲ್ ಔಟಾಗದೆ 67).