ಹೊಸದಿಲ್ಲಿ : ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ತಂಡದಲ್ಲಿ ಇದ್ದಾರೆಂದರೆ ತಂಡ ಕೂಲ್ ಆಗಿ ಇರುತ್ತದೆ; ಆಟಗಾರರಲ್ಲಿ ಶಾಂತತೆ ಇರುತ್ತದೆ; ಒತ್ತಡ ಇರುವುದಿಲ್ಲ; ಮಾತ್ರವಲ್ಲದೆ ಅವರಿಂದ ತಂಡದ ನಾಯಕನಿಗೆ (ವಿರಾಟ್ ಕೊಹ್ಲಿಗೆ) ಉಪಯುಕ್ತ ಸಲಹೆ, ಧೈರ್ಯ, ಉತ್ಸಾಹ ಸಿಗುತ್ತದೆ ಎಂದು ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮ್ಯಾನ್ ರೋಹಿತ್ ಶರ್ಮಾ ಅವರು ಧೋನಿ ಬಗ್ಗೆ ಪೂರ್ಣ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಸರಣಿ ಆರಂಭಕ್ಕೆ ಎರಡು ದಿನಗಳು ಬಾಕಿ ಇರುವಂತೆಯೇ (ಜನವರಿ 12) ರೋಹಿತ್ ಶರ್ಮಾ ಆಡಿರುವ ಈ ಮಾತುಗಳು ಮಹತ್ವದ್ದಾಗಿವೆ.
ಆಸ್ಟ್ರೇಲಿಯದಲ್ಲಿ ಭಾರತ ಹಾಲಿ ಪ್ರವಾಸದಲ್ಲಿ ಟಿ-20 ಸರಣಿಯಲ್ಲಿ ಸಮಬಲ ಸ್ತಾಪಿಸಿ ಡ್ರಾ ಸಾಧಿಸಿದ್ದು ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದುಕೊಂಡು ಅತೀವವಾದ ಆತ್ಮವಿಶ್ವಾಸದಲ್ಲಿದೆ.
ಧೋನಿ ತಂಡದಲ್ಲಿರುವ ಬಹಳ ಮುಖ್ಯ ಧನಾತ್ಮಕ ಅಂಶವಾಗಿದೆ; ಅವರ ಉಪಸ್ಥಿತಿಯಿಂದ ತಂಡಕ್ಕೆ ಯಶಸ್ಸು ಸಾಧಿಸುವ ಹುಮ್ಮಸ್ಸು , ಧೈರ್ಯ, ವಿಶ್ವಾಸ ಪ್ರಾಪ್ತವಾಗುತ್ತದೆ ಎಂದು ಶರ್ಮಾ ಹೇಳಿದರು.
ಧೋನಿ ಒಬ್ಬ ಗ್ರೇಟ್ ಮ್ಯಾಚ್ ಫಿನಿಶರ್; ಅವರು ಅನೇಕ ಪಂದ್ಯಗಳಲ್ಲಿ ಈ ಪಾತ್ರವನ್ನು ನಿರ್ವಹಿಸಿ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟಿದ್ದಾರೆ. ಅವರ ಸಲಹೆಗಳು ತುಂಬಾ ಉಪಯಕ್ತವಾಗಿವಾಗಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದರು.
2019ರ ಮೇ ತಿಂಗಳಲ್ಲಿ ಲಂಡನ್‌ನಲ್ಲಿ ಆರಂಭಗೊಳ್ಳುವ ಐಸಿಸಿ ವಿಶ್ವಕಪ್ ಕಿಕೆಟ್ ಪಂದ್ಯಾವಳಿಯ ಬಗ್ಗೆಯೂ ಮಾತನಾಡಿದ ರೋಹಿತ್ ಶರ್ಮಾ, ಇಂದಿನ ಭಾರತೀಯ ಕ್ರಿಕೆಟ್ ತಂಡದ ಸ್ವರೂಪವೇ ವಿಶ್ವ ಕಪ್ ನಲ್ಲೂ ಉಳಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.