ಹೊಸಪೇಟೆ: ದಕ್ಷಿಣ ಭಾರತದ ಕಾಶಿ ಹಂಪಿಗೆ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಪ್ರವೇಶ ನಿಷೇಧಿ ಸಿ ವಿಜಯನಗರ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ ಹಿನೆಲೆಯಲ್ಲಿ ಶುಕ್ರವಾರ ಹಂಪಿಯತ್ತ ಭಕ್ತರು ಸುಳಿಯಲಿಲ್ಲ. ಇದರಿಂದ ಹಂಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮರೆಯಾಗಿತ್ತು.
ಹಂಪಿ ಶ್ರೀವಿರೂಪಾಕ್ಷೇಶ್ವರ ದೇಗುಲದ ಗರ್ಭಗುಡಿಯಲ್ಲಿ ಅರ್ಚಕರು ಮಾತ್ರ ಪೂಜೆ ಮಾಡಿದ್ದು, ಭಕ್ತರ ಪ್ರವೇಶ ಸಂಪೂರ್ಣ ನಿಷೇಧಿ ಸಲಾಗಿತ್ತು. ಮಕರ ಸಂಕ್ರಾಂತಿಗೆ ಹಂಪಿಯಲ್ಲಿ ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ ಜ.13ರ ಬೆಳಗ್ಗೆ 6 ಗಂಟೆಯಿಂದ 17ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿ ಕಾರಿ ಅನಿರುದ್ಧ ಶ್ರವಣ್ ಆದೇಶ ಹೊರಡಿಸಿದ್ದರು. ಹಾಗಾಗಿ ಹಂಪಿ ಪ್ರವೇಶ ನಿರ್ಬಂಧಿ ಸಲಾಗಿತ್ತು. ಪ್ರತಿ ವರ್ಷ ಹಂಪಿಯಲ್ಲಿ ಮಕರ ಸಂಕ್ರಾಂತಿ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ಶ್ರೀವಿರೂಪಾಕ್ಷೇಶ್ವರ ದೇಗುಲಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದರು.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿ ಸಿರುವುದರಿಂದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಭಕ್ತರು ಈ ವರ್ಷ ಹಂಪಿಗೆ ಆಗಮಿಸಿಲ್ಲ. ಹಾಗಾಗಿ ಹಂಪಿಯಲ್ಲಿ ಸಂಕ್ರಮದ ಕಳೆ ಮರೆಯಾಗಿತ್ತು. ಪ್ರತಿ ವರ್ಷ ಹಂಪಿಗೆ ಪ್ರವಾಸಿಗರು ಹಾಗೂ ಭಕ್ತರು ಸೇರಿ ಸಂಕ್ರಮ ಹೊತ್ತಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದರು. ಇದನ್ನು ತಡೆಯಲು ವಿಜಯನಗರ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿದೆ. ಇದರ ಜತೆಗೆ ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಜ.17ರ ಬೆಳಗ್ಗೆ 6 ಗಂಟೆವರೆಗೆ ಹಂಪಿಯಲ್ಲಿ ನಿಷೇಧಾಜ್ಞೆ ಹೊರಡಿಸಿದೆ.
ಡ್ಯಾಂ ಪ್ರವೇಶ ನಿಷೇಧ!: ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೂ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿ ಕಾರಿ ಅನಿರುದ್ಧ ಶ್ರವಣ್ ಅವರು ನಿರ್ಬಂಧ ವಿಧಿ ಸಿದ್ದರು. ಹಾಗಾಗಿ ತುಂಗಭದ್ರಾ ಜಲಾಶಯದತ್ತವೂ ಜನ ಶುಕ್ರವಾರ ಸುಳಿಯಲಿಲ್ಲ. ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ವೇಳೆಯಲ್ಲಿ 5 ಸಾವಿರದಿಂದ 10 ಸಾವಿರ ಜನ ಬರುತ್ತಿದ್ದರು.
ಆದರೆ, ನಿಷೇಧಾಜ್ಞೆ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಮತ್ತು ಉದ್ಯಾನಕ್ಕೆ ಜನರ ಪ್ರವೇಶವನ್ನು ತುಂಗಭದ್ರಾ ಮಂಡಳಿ ನಿಷೇಧಿ ಸಿತ್ತು. ನಿಷೇಧಾಜ್ಞೆ ಮಧ್ಯೆ ಹಂಪಿ ವೀಕ್ಷಣೆ!; ಹೊಸಪೇಟೆ: ಹಂಪಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ಖಾಸಗಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ನಿಷೇಧಾಜ್ಞೆ ಮಧ್ಯೆ ಹಂಪಿ ಸ್ಮಾರಕಗಳನ್ನು ಗುರುವಾರ ವೀಕ್ಷಣೆ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ವಿಜಯನಗರ ಜಿಲ್ಲಾಡಳಿತ ನಿಷೇಧ ವಿಧಿ ಸಿದೆ. ಹೀಗಿದ್ದರೂ ವಿಜಯ ವಿಠuಲ ದೇವಾಲಯಕ್ಕೆ ತೆರಳಿ ಕಲ್ಲಿನ ತೇರು ಸೇರಿದಂತೆ ನಾನಾ ಸ್ಮಾರಕಗಳನ್ನು ಗಂಗಾವತಿಯ ಖಾಸಗಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ವೀಕ್ಷಿಸಿದ್ದಾರೆ.