Advertisement

“ರಾಜ್ಯದಲ್ಲಿ ಬಂಡವಾಳಶಾಹಿ ಸರಕಾರ ಅಧಿಕಾರಕ್ಕೆ’

07:45 AM Sep 05, 2017 | Team Udayavani |

ಕಾರ್ಕಳ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಹ ಸರಕಾರಗಳು ಬಂಡವಾಳಶಾಹಿ ಸರಕಾರ. ಆದರೆ ಪ್ರಸ್ತುತ ರಾಜ್ಯ ಸರಕಾರದ ಅವಧಿಯಲ್ಲಿ  94ಸಿ ಮತ್ತು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ವಾಸ್ತವ್ಯದ ಭೂಮಿ ಪಡೆದುಕೊಳ್ಳಲು ಅವಕಾಶವಿದ್ದು, ಸಂಘಟನೆಗಳು ನಮ್ಮ ಸಮುದಾಯದ ಜನತೆಗೆ ಈ ಬಗ್ಗೆ ತಿಳಿಯಪಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್‌ ಹೇಳಿದ್ದಾರೆ.

Advertisement

ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ  ಕಾರ್ಕಳ ತಾ| ಶಾಖೆ ವತಿಯಿಂದ ತಾ.ಪಂ. ಸಭಾಭವನದಲ್ಲಿ ಮಂಗಳವಾರ ನಡೆದ ಸರಕಾರದ ವಿವಿಧ ಇಲಾಖೆಯ ಇಲಾಖಾ ಧಿಕಾರಿಗಳಿಂದ ಪ.ಜಾತಿ /ಪ.ಪಂ.ದವರಿಗೆ ಇಲಾಖಾ ವಾರು ಮಾಹಿತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಕಳದ ನೇತ್ರ ತಜ್ಞ ಡಾ| ಜಿ. ಪ್ರೇಮದಾಸ್‌ ಕಾರ್ಯಕ್ರಮ ಉದ್ಘಾಟಿಸಿದರು. ಉಪ ತಹಶೀಲ್ದಾರ್‌ ಶಿವರಾಮ್‌, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ಕಾರ್ಕಳ ಪುರಸಭೆ ಮ್ಯಾನೇಜರ್‌ ಮಂಜುನಾಥ್‌, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್‌, ಅಣ್ಣಪ್ಪ ಮಾಸ್ತರ್‌ ಮುದ್ರಾಡಿ, ಶ್ರೀಧರ ಬೆ„ಲೂರು, ತಾಲೂಕು ಶಾಖೆ ಸಂಘಟನಾ ಸಂಚಾಲಕ ಕೆ.ಸಂಜೀವ, ನ್ಯಾಯವಾದಿ ರಾಘವ, ಮಹಿಳಾ ಸಾಂತ್ವನ ಕೇಂದ್ರದ ಸುನೀತಾ ಸುಧಾಕರ್‌, ದೇವು ಹೆಬ್ರಿ, ಮುಂಡ್ಕೂರು ಪ.ಪೂ. ಕಾಲೇಜು ಉಪನ್ಯಾಸಕ ದೇವದಾಸ್‌, ಜಿ.ಪಂ.ಮಾಜಿ ಸದಸ್ಯ ಎನ್‌. ಬಿ. ಬಾಬು, ತಾ.ಪ.ಸದಸ್ಯ ಹರಿಶ್ಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಅಣ್ಣಪ್ಪ ಮಾಸ್ತರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next