Advertisement
ಕೇಪ್ ಡ್ರೆಸ್… ಇದೇನಪ್ಪ ಹೊಸ ಫ್ಯಾಶನ್ ಅಂತ ಆಶ್ಚರ್ಯವಾಗಬಹುದು. ಆದರೆ ಸದ್ಯ ಜವಳಿ ಅಂಗಡಿಗಳಿಗೆ ತೆರಳಿ ನೋಡಿದರೆ ಅಂಗಡಿ ಹೊರಗೆ ನಿಲ್ಲಿಸಿರುವ ಗೊಂಬೆಗಳಲ್ಲೆಲ್ಲ ಕೇಪ್ ಡ್ರೆಸ್‌ನದ್ದೇ ಚಮಾತ್ಕಾರ. ನೋಡಿದಾಗಲೇ ಕೊಳ್ಳುವ ಮನಸ್ಸಾಗುವ ಈ ಡ್ರೆಸ್ ಸದ್ಯ ಹುಡುಗಿಯರ ಅಚ್ಚುಮೆಚ್ಚು.
ಫ್ಯಾಶನ್ ಪ್ರಿಯ ಹುಡುಗಿಯರ ಹುಚ್ಚೆಬ್ಬಿಸಿದ ಗೌನ್ ಡ್ರೆಸ್‌ಗಳು ಈಗ ಹಳೆಯದಾದವು. ಗೌನ್ ಮಾದರಿಯಲ್ಲೇ ಸ್ವಲ್ಪ ವಿಭಿನ್ನವಾಗಿ ಬಂದಿರುವ ಕೇಪ್ ಡ್ರೆಸ್‌ಗಳೇ ಈಗಿನ ಫೇವರಿಟ್. ಇದು ನೋಡಲು ಗೌನ್‌ನಂತೆಯೇ ಇರುತ್ತದೆ. ಆದರೆ ಬಟ್ಟೆಯ ಮೇಲಿನ ಅಂದರೆ ಬ್ಲೌಸ್ ನೆಕ್‌ನಿಂದ ಕೆಳಗಿನ ಅರ್ಧ ಭಾಗದವರೆಗೆ ಬಟ್ಟೆಯ ಹೊದಿಕೆ ಇರುತ್ತದೆ. ಇದನ್ನೇ ಕೇಪ್ ಎನ್ನಲಾಗುತ್ತದೆ. ಈ ಹೊದಿಕೆಯು ವಿವಿಧ ಡಿಸೈನ್ ಗಳನ್ನು ಹೊಂದಿರುವುದರಿಂದ ನೋಡಲು ಆಕರ್ಷಕವಾಗಿ ಕಾಣುತ್ತದೆ. ಧರಿಸಿದವರ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಗೌನ್‌ನ ಬಣ್ಣದಲ್ಲಿ ಸ್ವಲ್ಪ ಕಡು ಬಣ್ಣ ಅಥವಾ ಗೌನ್‌ನ ವಿರುದ್ಧ ಬಣ್ಣದಲ್ಲಿ ಡಿಸೈನ್ ಇರುವುದರಿಂದ ಹೆಚ್ಚು ಆಕರ್ಷಣೆ ಈ ಡ್ರೆಸ್‌ಗಿದೆ. ಇದ ರಲ್ಲೂ ಹಿಂದೆ ಹೆಚ್ಚು ಉದ್ದ, ಕೈಗಳ ಬಳಿ ಮಿಡಿಯಮ್ ಉದ್ದದ ಕೇಪ್ ದಿರಿಸುಗಳೂ ಇವೆ. ಬಟ್ಟೆಯ ಡಿಸೈನ್ ಸುಂದರವಾಗಿದ್ದರೆ ಅತ್ಯಂತ ತೆಳುವಾದ ಕೇಪ್ ಅತ್ಯಂತ ತೆಳುವಾಗಿದ್ದರೆ ಸುಂದರವಾಗಿ ಕಾಣುತ್ತದೆ. ಪ್ರತ್ಯೇಕ ಕೇಪ್ ಇದ್ದರೆ ಚೆನ್ನ
ಗೌನ್‌ಗೆ ಮಾತ್ರವಲ್ಲ ಸೀರೆ ಬ್ಲೌಸ್‌ಗೆ ಕೇಪ್ ಧರಿಸಬಹುದು. ಸೀರೆ ಬ್ಲೌಸ್‌ನಲ್ಲಿ ಇರುವ ಹೊದಿಕೆಯಲ್ಲಿಯೂ ವೆರೈಟಿಗಳಿವೆ. ಹೆಚ್ಚಾಗಿ ಇದು ತೆಳುವಾಗಿದ್ದು, ಸೀರೆಗೆ ವಿಶೇಷ ಲುಕ್ ನೀಡುತ್ತದೆ. ದಿರಿಸಿನಲ್ಲಿರುವ ಕೆಲವು ಹೊದಿಕೆ ಅಥವಾ ಕೇಪ್‌ಗ್ಳು ಡ್ರೆಸ್‌ಗೆ ಅಟ್ಯಾಚ್ಡ್ ಆಗಿದ್ದರೆ, ಇನ್ನು ಕೆಲವು ಪ್ರತ್ಯೇಕವಾಗಿರುತ್ತದೆ. ಪ್ರತ್ಯೇಕ ಕೇಪ್ ಇರುವ ಗೌನ್ ಖರೀದಿಸಿದರೆ ಬೇಕಾದಲ್ಲಿ ಮಾತ್ರ ಧರಿಸಬಹುದು. ಕೇಪ್ ಬೇಡವೆಂದಾದಲ್ಲಿ ಕೇವಲ ಗೌನ್‌ನ್ನು ಮಾತ್ರ ಧರಿಸಬ ಹುದು. ಅಲ್ಲದೆ ಕೇಪ್ ಪ್ರತ್ಯೇಕವಾಗಿದ್ದರೆ ಒಂದೇ ಗೌನ್‌ಗೆ ಹೊಂದಿಕೆಯಾಗುವ ಬೇರೆ ಬೇರೆ ಕೇಪ್ ಗಳನ್ನು ಕೂಡ ಧರಿಸಲು ಸಾಧ್ಯವಾಗುತ್ತದೆ.
Related Articles
ಕ್ಯಾನೆ ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸೋನಂ ಕಪೂರ್, ಲೋರಿಯಲ್ ಫೆಮಿನಾ ವುಮೆನ್ಸ್ ಅವಾರ್ಡ್ ಸಮಾರಂಭದಲ್ಲಿ ಮಯೂರ್ ಗಿರೋತ್ರಾ ಮಾತ್ರವಲ್ಲದೆ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಕರೀನಾ ಕಪೂರ್, ಕರಿಷ್ಮಾ ಕಪೂರ್, ಪ್ರಿಯಾಂಕ ಚೋಪ್ರಾ, ಮೌನಿ ರಾಯ್, ದೀಪಿಕಾ ಪಡು ಕೋಣೆ, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹ ಮೊದಲಾದವರು ಕೇಪ್ ಡ್ರೆಸ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು.
Advertisement
ಉದ್ದ ಹುಡುಗಿಯರಿಗೆ ಸೂಪರ್ ಲುಕ್ ಕೇಪ್ ಡ್ರೆಸ್‌ನ್ನು ಯಾರು ಬೇಕಾದರೂ ಧರಿಸಬಹುದು. ಆದರೆ ಉದ್ದನೆ ಮತ್ತು ತೆಳ್ಳಗಿನ ಹುಡುಗಿಯರಿಗೆ ಇದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಡ್ರೆಸ್ ಉದ್ದವಿರುವುದರಿಂದ ಬಳುಕುವ ಶರೀರಕ್ಕೆ ಹೆಚ್ಚು ಸೂಕ್ತ. ರೆಡಿಮೇಡ್ ಡ್ರೆಸ್ ವಿವಿಧ ವೆರೈಟಿಗಳಲ್ಲಿದ್ದರೆ, ಪ್ರತ್ಯೇ ಕ ವಾಗಿ ಕೇಪ್ ಡ್ರೆಸ್ ಹೊಲಿದುಕೊಡುವ ವ್ಯವಸ್ಥೆಯೂ ಕೆಲವೆಡೆ ಇದೆ.
ಧನ್ಯಾ ಬಾಳೆಕಜೆ