Advertisement

PM ಸದನದಲ್ಲಿ ಇರುವಂತೆ ನಿರ್ದೇಶಿಸಲು ಸಾಧ್ಯವಿಲ್ಲ: ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್

04:34 PM Aug 02, 2023 | Team Udayavani |

ಹೊಸದಿಲ್ಲಿ : ಸದನಕ್ಕೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ರಾಜ್ಯಸಭೆಯ ನಿಯಮ 267 ರ ಅಡಿಯಲ್ಲಿ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಬೇಕೆಂದು, ಈ ವಿಷಯದಲ್ಲಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

ಇದಕ್ಕೂ ಮೊದಲು, ಪಟ್ಟಿ ಮಾಡಲಾದ ಪೇಪರ್‌ಗಳನ್ನು ಮಂಡಿಸಿದ ಕೂಡಲೇ, ಮಣಿಪುರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ನಿಯಮ 267 ರ ಅಡಿಯಲ್ಲಿ 58 ನೋಟಿಸ್‌ಗಳನ್ನು ಸ್ವೀಕರಿಸಲಾಗಿದೆ. ಆದರೆ, ನೋಟಿಸ್‌ಗಳು ಕ್ರಮಬದ್ಧವಾಗಿಲ್ಲ” ಎಂದು ಧನ್ ಕರ್ ಹೇಳಿದರು.

ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರ ವಿಷಯದ ಬಗ್ಗೆ ನಿಯಮ 267 ರ ಅಡಿಯಲ್ಲಿ ಏಕೆ ಚರ್ಚೆ ನಡೆಸಬೇಕು ಮತ್ತು ಪ್ರಧಾನಿ ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಿಹೇಳುವ ಎಂಟು ಅಂಶಗಳನ್ನು ತಮ್ಮ ನೋಟಿಸ್‌ನಲ್ಲಿ ನೀಡಿದ್ದಾರೆ. ಹಿಂಸಾಚಾರದಲ್ಲಿ ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆಯನ್ನು ಅವರು ಉಲ್ಲೇಖಿಸಿದರು.

“ಪ್ರಧಾನಿಯವರ ಉಪಸ್ಥಿತಿಗಾಗಿ ನಾನು ನಿರ್ದೇಶನವನ್ನು ನೀಡಿದರೆ ಈ ಪೀಠದಿಂದ ನಾನು ನನ್ನ ಪ್ರಮಾಣವಚನವನ್ನು ಉಲ್ಲಂಘಿಸುತ್ತೇನೆ, ಎಂದು ನಾನು ಸರಿಯಾದ ಸಾಂವಿಧಾನಿಕ ಪ್ರಮೇಯ ಮತ್ತು ಪೂರ್ವನಿದರ್ಶನದ ಮೇಲೆ ಬಹಳ ದೃಢವಾಗಿ ಸೂಚಿಸಿದ್ದೇನೆ. ಎಲ್ಲರಂತೆ ಪ್ರಧಾನಿ ಬರಲು ಬಯಸಿದರೆ ಬರಬಹುದು. ಪೀಠದಿಂದ ಆ ರೀತಿಯ ನಿರ್ದೇಶನವನ್ನು ನೀಡಲಾಗುವುದಿಲ್ಲ, ಅದನ್ನು ಎಂದಿಗೂ ಹೊರಡಿಸುವುದಿಲ್ಲ”ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next