Advertisement

Madikeri ವಿರಾಜಪೇಟೆಯಲ್ಲಿ ಗಾಂಜಾ ದಂಧೆ; ನಾಲ್ವರ ಸೆರೆ

09:25 PM Oct 28, 2023 | Team Udayavani |

ಮಡಿಕೇರಿ: ವಿರಾಜಪೇಟೆ ನಗರ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ವಿರಾಜಪೇಟೆ ನಿವಾಸಿಗಳಾದ ಮಹಮ್ಮದ್‌ ಆಲಿ ಕಲ್ಲುಬಾಣೆ (54), ಸಂದೀಪ ಜಂಗ್ಲಿ ಅರಸು ನಗರ (28), ಅಶೋಕ ಬಿಳುಗುಂದ (50) ಹಾಗೂ ಮಹೇಶ ಸುಂಕದಕಟ್ಟೆ (35) ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳ ಬಳಿಯಿಂದ 1.12 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿಯ ಹಿನ್ನೆಲೆ ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್‌. ಮೋಹನ್‌ ಕುಮಾರ್‌, ವಿರಾಜಪೇಟೆ ವೃತ್ತದ ಬಿ. ಎಸ್‌.ಶಿವರುದ್ರಪ್ಪ, ಪಿಎಸ್‌ಐಗಳಾದ ರವೀಂದ್ರ, ಗಣಪತಿ ಪಿ.ಕೆ. ಹಾಗೂ ಸಿಬಂದಿ ತನಿಖೆ ಕೈಗೊಂಡು ದಾಳಿ ನಡೆಸಿದರು.

ನೈತಿಕ ಪೊಲೀಸ್‌ ಗಿರಿಯ ಕುರಿತು
ಸುಳ್ಳು ಸುದ್ದಿ: ಪೊಲೀಸರ ಎಚ್ಚರಿಕೆ
ಮಡಿಕೇರಿ: ನಾಪೋಕ್ಲು ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್‌ ಗಿರಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.

ಕೋಮು ಸೌಹಾರ್ದತೆಗೆ ದಕ್ಕೆ ತರುವ ಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುವವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾಪೋಕ್ಲು ಪೊಲೀಸ್‌ ಠಾಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Advertisement

ವ್ಯಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ ಮೂಲಕ ನೈತಿಕ ಪೊಲೀಸ್‌ ಗಿರಿಯ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಇದನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next