Advertisement
ಭಾರತೀಯ ಸೇನೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಮೂರು ದಿನ ಪೂರ್ಣಗೊಂಡಿದೆ. ನಗರಕ್ಕೆ ನಿತ್ಯ 3000-4000 ಅಭ್ಯರ್ಥಿಗಳು ಆಗಮಿಸುತ್ತಿದ್ದಾರೆ. ಇವರು ಆರ್ಥಿಕ ಸಮಸ್ಯೆಯಿಂದಾಗಿ ಎಲ್ಲೆಂದರಲ್ಲಿ ಆಶ್ರಯ ಪಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Related Articles
Advertisement
ಮಲಗಲು ವ್ಯವಸ್ಥೆ ಇಲ್ಲ
ಪರೀಕ್ಷೆಗೆ ಮುಂಜಾನೆಯೇ ಹಾಜರಾಗಬೇಕು. ಆದ್ದರಿಂದ ಮಾ. 19ರ ಬೆಳಗ್ಗೆ ಬೇಗನೆ ಉಡುಪಿಗೆ ಬಂದಿದ್ದೇನೆ. ಊಟ- ಕುಡಿಯಲು ನೀರಿನ ವ್ಯವಸ್ಥೆ ಇದೆ. ಆದರೆ ವಸತಿ ವ್ಯವಸ್ಥೆ ಇಲ್ಲ. 2019ರಲ್ಲಿ ಗದಗದಲ್ಲಿ ನಡೆದ ರ್ಯಾಲಿಯಲ್ಲಿ ಅಲ್ಲಿನ ದೇವಸ್ಥಾನದ ಛತ್ರಗಳಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಇಲ್ಲಿ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಪಾರ್ಕ್ ನಲ್ಲೇ ಮಲಗಬೇಕೆಂದಿದ್ದೇನೆ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು. ರ್ಯಾಲಿಗೆ ಬಂದ ಯುವಕರು ಶಾಲೆಯೊಂದರ ಹೆಂಚಿನ ಮಹಡಿ ಮೂಲಕ ತೆರಳಿ ಶಾಲೆಯ ಆರ್‌ಸಿಸಿ ಮೇಲ್ಛಾವಣಿಯಲ್ಲಿ ಆಶ್ರಯ ಪಡೆದುಕೊಂಡರು. ಈ ಸಂದರ್ಭ ಶಾಲೆಯ ಕೆಲವು ಹೆಂಚುಗಳು ತುಂಡಾಗಿವೆ ಎಂದು ತಿಳಿದುಬಂದಿದೆ.
ವ್ಯವಸ್ಥೆ ಮಾಡಿದೆ
ಭೂ ಸೇನೆ ಸಂಘಟಿಸಿದ ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಡಳಿತ ಸಹಕಾರ ನೀಡಿದೆ. ಅಭ್ಯರ್ಥಿಗಳಿಗೆ 6 ಕಡೆಗಳಲ್ಲಿ ಉಳಿಯುವ ವ್ಯವಸ್ಥೆ ಮಾಡಿದೆ. ಯಾವುದೇ ಜಿಲ್ಲೆಯಲ್ಲಿ ಈವರೆಗೆ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಿಲ್ಲ. ಅದನ್ನು ನಮ್ಮಲ್ಲಿ ಮಾಡಿದ್ದೇವೆ. ಆದರೆ ಕೆಲವರು ಮಧ್ಯ ರಾತ್ರಿ ಬಂದು ಎÇÉೆಂದರಲ್ಲಿ ಮಲಗಿ ಬೆಳಗ್ಗೆ 4 ಗಂಟೆಗೆ ಕ್ರೀಡಾಂಗಣಕ್ಕೆ ಹೋಗುತ್ತಿದ್ದಾರೆ. ಜಿಲ್ಲಾಡಳಿತ ಊಟ ತಿಂಡಿ ಕುಡಿಯುವ ನೀರು ಮತ್ತು ಉಳಿಯುವ ವ್ಯವಸ್ಥೆಯನ್ನು ಸರಕಾರದ ಒಂದು ರೂಪಾಯಿ ಖರ್ಚಿಲ್ಲದೆ ದಾನಿಗಳ ಸಹಕಾರದಿಂದ ಮಾಡಿದೆ.
-ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ