Advertisement

Maharashtra Elections; ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಇಬ್ಬರು ಎಂಎಲ್ ಎ ಗಳಿಗೆ ಕೊಕ್

06:16 PM Oct 26, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಶನಿವಾರ(ಅ26) 22 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.

Advertisement

ಪಟ್ಟಿಯಲ್ಲಿ ಆರು ಹಾಲಿ ಶಾಸಕರಿಗೆ ಮತ್ತೆ ಅವಕಾಶ ನೀಡಲಾಗಿದೆ. ಶಿವಸೇನೆ(ಶಿಂಧೆ) ಮತ್ತು ಎನ್‌ಸಿಪಿ(ಅಜಿತ್ ಪವಾರ್) ಜತೆಗೆ ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿರುವ ಬಿಜೆಪಿ ಇದುವರೆಗೆ 121 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಅಕೋಟ್, ನಾಸಿಕ್ ಸೆಂಟ್ರಲ್, ಪೆನ್, ಖಡಕ್ವಾಸಲಾ, ಪುಣೆ ಕಂಟೋನ್ಮೆಂಟ್ ಮತ್ತು ಉಲ್ಲಾಸನಗರದ ಶಾಸಕರನ್ನು ಉಳಿಸಿಕೊಂಡು ವಾಶಿಮ್ ಮತ್ತು ಗಡ್ಚಿರೋಲಿಯ ಹಾಲಿ ಶಾಸಕರನ್ನು ಬದಲಾಯಿಸಿದೆ. ಎರಡನೇ ಪಟ್ಟಿಯಲ್ಲಿ ವಿಧಾನ ಪರಿಷತ್ ನ ಇಬ್ಬರು ಸದಸ್ಯರಿಗೆ ಟಿಕೆಟ್ ನೀಡಲಾಗಿದ್ದು ಜಾಟ್‌ನಿಂದ ಗೋಪಿಚಂದ್ ಪಡಲ್ಕರ್ ಮತ್ತು ಲಾತೂರ್ ಗ್ರಾಮಾಂತರದಿಂದ ರಮೇಶ್ ಕರಾಡ್ ಅವರು ಕಾಂಗ್ರೆಸ್‌ನ ಧೀರಜ್ ದೇಶಮುಖ್ ಅವರನ್ನು ಎದುರಿಸಲಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next