Advertisement

ಮತಬೇಟೆಗೆ ಅಭ್ಯರ್ಥಿಗಳ ರೋಡ್‌ ಶೋ

01:31 PM May 11, 2018 | |

ಮಾನ್ವಿ: ಬಹಿರಂಗ ಪ್ರಚಾರಕ್ಕೆ ಗುರುವಾರ ಕೊನೆ ದಿನವಾದ ಹಿನ್ನೆಲೆಯಲ್ಲಿ ನಗರದಲ್ಲಿ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ
ಸೇರಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಅಬ್ಬರದ ರೋಡ್‌ ಶೋ ನಡೆಸಿ ಮತಯಾಚಿಸಿದರು.

Advertisement

ಜೆಡಿಎಸ್‌: ಜೆಡಿಎಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಜೆಡಿಎಸ್‌ ಕಾರ್ಯಾಲಯದಿಂದ ತೆರೆದ ವಾಹನದಲ್ಲಿ
ರೋಡ್‌ ಶೋ ಪ್ರಾರಂಭಿಸಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಪಟ್ಟಣದ ಬಸವ ವೃತ್ತದ ಮೂಲಕ ಬಸ್‌ ನಿಲ್ದಾಣ, ಸೀಮೆಂಟ್‌ ರೋಡ್‌, ಕೋನಾಪುರಪೇಟೆವರೆಗೆ ರೋಡ್‌ ಶೋ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಹಿರಿಯ ಮುಖಂಡ ಪಾಂಡುರಂಗ ನಾಯಕ, ಯುವ ಘಟಕಾಧ್ಯಕ್ಷ ಪಿ.ರವಿಕುಮಾರ ವಕೀಲ, ನಗರ ಘಟಕಾಧ್ಯಕ್ಷ ಖಲೀಲ್‌ ಖುರೇಷಿ, ಗೋಪಾಲ ನಾಯಕ ಹರವಿ ಸೇರಿ ಅನೇಕರಿದ್ದರು.

ಬಿಜೆಪಿ: ಮಾನ್ವಿ ಎಸ್ಟಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ. ಶರಣಪ್ಪ ನಾಯಕ ಕೆ. ಗುಡದಿನ್ನಿ ಅವರು ಬಿಜೆಪಿ ತಾಲೂಕ ಘಟಕದ ಕಾರ್ಯಕರ್ತರೊಂದಿಗೆ ಪಟ್ಟಣದಾದ್ಯಂತ ರೋಡ್‌ ಶೋ ನಡೆಸಿ ಮತಯಾಚಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ತಾಲೂಕು ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌, ಗಂಗಾಂಧರ ನಾಯಕ, ಜಿಪಂ ಮಾಜಿ ಅಧ್ಯಕ್ಷ ದೊಡ್ಡಬಸಪ್ಪ ಭೋಗಾವತಿ, ವಿ.ಜನಾರ್ದನ,
ನಗರ ಘಟಕಾಧ್ಯಕ್ಷ ಬಸನಗೌಡ ಚೀಕಲಪರ್ವಿ, ಯುವ ಘಟಕಾಧ್ಯಕ್ಷ ವೀರೇಶ ನಾಯಕ, ಈರಣ್ಣ ನಾಯಕ ಕರೆಗುಡ್ಡ
ಸೇರಿ ಅನೇಕರಿದ್ದರು.

ಕಾಂಗ್ರೆಸ್‌: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಎಂಎಲ್‌ಸಿ ಎನ್‌.ಎಸ್‌.ಬೋಸರಾಜ ಜಂಟಿಯಾಗಿ ನಗರದಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದರು. ಪಟ್ಟಣದ ವಾಲ್ಮೀಕಿ ವೃತ್ತದಿಂದ ಬಸವ ವೃತ್ತ, ಬಸ್‌ ನಿಲ್ದಾಣ, ಟಿಪ್ಪು ಸುಲ್ತಾನ್‌ ಸರ್ಕಲ್‌ ಮೂಲಕ ಕಾಂಗ್ರೆಸ್‌ ಕಾರ್ಯಾಲಯದವರೆಗೆ ಮೆರವಣಿಗೆ ನಡೆಸಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶಸ್ವಾಮಿ ರೌಡೂರು, ಅಬ್ದುಲ್‌ ಗಫೂರಸಾಬ್‌, ಪಿಕಾರ್ಡ್‌ ಬ್ಯಾಂಕ್‌
ಅಧ್ಯಕ್ಷ ಅಬೀಬ್‌ ಖಾದ್ರಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ಕೆ.ಅಮರೇಶಪ್ಪ. ಎಪಿಎಂಸಿ ನಿರ್ದೇಶಕ ಬೀರಪ್ಪ
ಕಡೆದಿನ್ನಿ, ಲಕ್ಷಮೀನಾರಾಯಣ ಯಾದವ, ಖಾಲಿದ್‌ ಖಾದ್ರಿ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next