Advertisement
ಮೊದಲ ಬಾರಿ ಉಪ ಚುನಾವಣೆ ನಡೆದಿದ್ದು 2000ರಲ್ಲಿ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪಾಸಗೌಡ ಅಪ್ಪಗೌಡ ಪಾಟೀಲ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ 2000ರಲ್ಲಿ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ರಾಜು ಕಾಗೆ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿದ್ದರು. ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ 2ನೇ ಬಾರಿಗೆ ಕಾಗವಾಡದ ಮತದಾರರು ಉಪಚುನಾವಣೆ ಎದುರಿಸುವಂತಾಗಿದೆ.
Related Articles
Advertisement
1962ರಿಂದ 1978ರವರೆಗೆ ಕಾಗವಾಡ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 1983ರಲ್ಲಿ ವಿ.ಎಲ್. ಪಾಟೀಲ ಜನತಾಪಕ್ಷ ದಿಂದ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಧಿಪತ್ಯಕ್ಕೆ ಅಂತ್ಯ ಹಾಡಿದರು. 1983ರಿಂದ 2000ರ ಉಪಚುನಾವಣೆಯ ವರೆಗೆ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜನತಾದಳದ ಮಧ್ಯೆ ಹೊಯ್ದಾಡಿತು. 2004ರ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ರಾಜು ಕಾಗೆ 3 ಸಾವಿರ ಮತಗಳ ಅಂತರ ದಿಂದ ಕಾಂಗ್ರೆಸ್‌ನ ಕಿರಣ ಪಾಟೀಲ ವಿರುದ್ಧ ಜಯಗಳಿಸುವ ಮೂಲಕ ಇದು ಬಿಜೆಪಿ ಭದ್ರಕೋಟೆಯಾಗುವಂತೆ ಮಾಡಿದರು.
18 ತಿಂಗಳ ಬಳಿಕ ಮತ್ತೆ ಕುಸ್ತಿ: 2018ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಮೂಲಕ ಮತ್ತೆ ಈ ಕ್ಷೇತ್ರ ಕಾಂಗ್ರೆಸ್ ಪಾಲಾದರೂ ಅದು ಬಹಳ ಕಾಲ ಉಳಿಯಲಿಲ್ಲ. ಬದಲಾದ ರಾಜಕೀಯದ ಚದುರಂಗ ದಾಟದಲ್ಲಿ ಕಾಂಗ್ರೆಸ್ ಶಾಸಕರೇ ಬಿಜೆಪಿ ಮನೆ ಸೇರಿದರು. ಅದರ ಫಲವಾ ಗಿಯೇ ಈಗ ಉಪ ಚುನಾವಣೆ ನಡೆಯುತ್ತಿದೆ. 18 ತಿಂಗಳ ಹಿಂದೆ ಪರ ಸ್ಪರ ಎದುರಾಳಿಗಳಾಗಿದ್ದ ಶ್ರೀಮಂತ ಪಾಟೀಲ ಹಾಗೂ ರಾಜು ಕಾಗೆ ಈಗ ಮತ್ತೆ ಎದುರಾಳಿಯಾಗಿದ್ದಾರೆ. ಅದರೆ ಅವರ ಚಿಹ್ನೆ ಹಾಗೂ ಪಕ್ಷಗಳು ಬದ ಲಾಗಿವೆ. ಮತದಾರರು ಚಿಹ್ನೆ ನೋಡಿಯೋ ಅಥವಾ ಅಭ್ಯರ್ಥಿ ಯನ್ನು ನೋಡಿ ಮತಹಾಕುವರೇ ಎಂಬ ಕುತೂಹಲ ಕ್ಷೇತ್ರದಲ್ಲಿದೆ.
* ಕೇಶವ ಆದಿ