Advertisement

ಸ್ತ್ರೀ ಮೀಸಲು: ಅಭ್ಯರ್ಥಿ ಆಯ್ಕೆ ಸವಾಲು!

03:22 PM May 13, 2021 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿಇಲ್ಲಿಯವರೆಗೆ ಮಹಿಳೆಯರಿಗಿದ್ದ ಶೇಕಡಾ33 ಮೀಸಲಾತಿಯನ್ನು ಸರಕಾರ ಶೇ.50ಕ್ಕೆಹೆಚ್ಚಿಸಿದ್ದು, ಮುಂಬರುವ ಹುಬ್ಬಳ್ಳಿ-ಧಾರವಾಡಮಹಾನಗರ ಪಾಲಿಕೆ ಚುನಾವಣೆಯಲ್ಲಿ 82 ಸದಸ್ಯರಲ್ಲಿ ಸುಮಾರು 40 ಜನ ಮಹಿಳಾ ಸದಸ್ಯರುಇರಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಆಡಳಿತದಇತಿಹಾಸ ನೋಡಿದರೆ ಸಭೆಗಳಲ್ಲಿ ಮಾತನಾಡುವ, ಸಮಸ್ಯೆ-ವಿಷಯಗಳ ಮೇಲೆ ಬೆಳಕು ಚೆಲ್ಲುವನಿಟ್ಟಿನಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿರುವುದುಕೆಲವೇ ಕೆಲವರು ಎನ್ನುವಂತಿದ್ದು, ಅರ್ಥಪೂರ್ಣಚರ್ಚೆಗೆ ಧ್ವನಿಯಾಗುವ ಮಹಿಳೆಯರಿಗೆ ಟಿಕೆಟ್‌ನೀಡುವ ಗುರುತರ ಜವಾಬ್ದಾರಿ ರಾಜಕೀಯಪಕ್ಷಗಳ ಮೇಲಿದೆ.

Advertisement

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಆಯ್ಕೆಯಾದಪುರುಷ ಸದಸ್ಯರೆಲ್ಲರೂ ಚರ್ಚೆಯಲ್ಲಿ ಸಕ್ರಿಯವಾಗಿಭಾಗವಹಿಸುತ್ತಾರೆ ಎಂದೇನು ಅಲ್ಲ. ಆದರೆ,ಮಹಿಳಾ ಸದಸ್ಯರಿಗೆ ಹೋಲಿಸಿದರೆ ಪುರುಷರಪಾಲ್ಗೊಳ್ಳುವಿಕೆ ಹೆಚ್ಚಿನ ಪ್ರಮಾಣದ್ದಾಗಿರುತ್ತದೆ ಅಷ್ಟೆ.ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌ವರೆಗೆ, ಪಟ್ಟಣ ಪಂಚಾಯತ್‌ನಿಂದ ಮಹಾನಗರಪಾಲಿಕೆಯವರೆಗೆ ಸ್ಥಳೀಯ ಸರಕಾರದಲ್ಲಿಮಹಿಳಾ ಸದಸ್ಯರ ಸಂಖ್ಯೆ ಗಣನೀಯವಾಗಿದ್ದರೂ,ಅದರಲ್ಲಿ ಮಾತನಾಡುವವರ ಸಂಖ್ಯೆಗಿಂತ ಸಭೆಗೆಆಗಮಿಸಿದ್ದೇವೆಂದು ಹಾಜರಾತಿ ತೋರಿಸುವವರ ಸಂಖ್ಯೆಯೇ ಅಧಿ ಕ ಎನ್ನುವಂತಿರುತ್ತದೆ.

ಮಹಿಳೆಯರು ಹೆಚ್ಚು ಹೆಚ್ಚು ಅಧಿ ಕಾರಕ್ಕೆ ಬಂದಷ್ಟುಭ್ರಷ್ಟಾಚಾರ ನಿಲ್ಲತ್ತದೆ, ಗುಂಪುಗಾರಿಕೆ ತಗ್ಗುತ್ತದೆ,ಸಭೆಯಲ್ಲಿ ಹಾಜರಿರುವ ಬದ್ಧತೆ ಹೆಚ್ಚುತ್ತದೆ ಎಂಬಆಶಯ ಮಹಿಳಾ ಮೀಸಲಾತಿಯದ್ದಾಗಿದೆ. ಇದಕ್ಕೆಇನ್ನಷ್ಟು ಬಲ ಕೊಡುವ ಕೆಲಸಗಳು ಆಗಬೇಕಾಗಿದೆ.ವರವಾದ ಮೀಸಲಾತಿ: ರಾಜಕೀಯ ಅ ಧಿಕಾರ,ಆಡಳಿತ ಎಂಬುದು ಕೇವಲ ಪುರುಷರಗುತ್ತಿಗೆ ಎನ್ನುವಂತಹ ಕಾಲವೊಂದಿತ್ತು.ಮಹಿಳೆಯರು ಏನಿದ್ದರೂ ಅಡುಗೆ ಮನೆಗೆಸೀಮಿತ ಎಂಬ ಮನೋಭಾವ ಇತ್ತು.ರಾಜಕೀಯವಾಗಿ ಮಹಿಳೆಯರಿಗೂ ಅವಕಾಶದೊರೆಯಬೇಕೆಂಬ ಉದ್ದೇಶದಿಂದ ರಾಮಕೃಷ್ಣಹೆಗಡೆ ನೇತೃತ್ವದ ಜನತಾ ಪರಿವಾರ ಸರಕಾರಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅವಕಾಶನೀಡುವ ಮೀಸಲು ಕ್ರಮಕ್ಕೆ ಮುಂದಾಗಿತ್ತು.

ಮುಂದೆ ಇದು ಸಂವಿಧಾನದ 73-74ನೇಕಾಯ್ದೆ ತಿದ್ದುಪಡಿಯೊಂದಿಗೆ ರಾಷ್ಟ್ರಮಟ್ಟದಲ್ಲೇಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಕ್ರಾಂತಿಕಾರಕ ಹೆಜ್ಜೆಯಾಯಿತು.ರಾಜಕೀಯವಾಗಿ ಮಹಿಳೆಯರಿಗೆ ಶೇ.33ಸ್ಥಳೀಯ ಸಂಸ್ಥೆಗಳಲ್ಲಿ ಅವಕಾಶ ನೀಡಲಾಯಿತು.ಇದರಿಂದ ಅದೆಷ್ಟೋ ಮಹಿಳೆಯರು ರಾಜಕೀಯಮುಖ್ಯವಾಹಿನಿಗೆ ಬರುವಂತಾಯಿತು. ಗ್ರಾಮ,ತಾಲೂಕು, ಜಿಲ್ಲಾ ಪಂಚಾಯತ್‌ ಅಧ್ಯಕ್ಷ,ಸದಸ್ಯರಾಗಿ, ನಗರ ಸ್ಥಳೀಯ ಸಂಸ್ಥೆಗಳಲ್ಲೂ ಮಹಿಳಾಧ್ವನಿ ಮೊಳಗುವಂತಾಯಿತು. ವಿಧಾನಸಭೆ,ಲೋಕಸಭೆಯಲ್ಲೂ ಮಹಿಳೆಯರಿಗೆ ಶೇ.33ಮೀಸಲು ಬೇಡಿಕೆ ಇಂದಿಗೂ ಮುಂದುವರಿದಿದೆ.ಇದರ ನಡುವೆ ಸರಕಾರ ಸ್ಥಳೀಯ ಸಂಸ್ಥೆಗಳಲ್ಲಿಶೇ.50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆಮೀಸಲಿರಿಸಿದೆ.ಮಹಿಳೆಯರು ಉತ್ತಮವಾಗಿ ಆಡಳಿತನಿರ್ವಹಣೆ ಮಾಡಿದ್ದಕ್ಕೆ ಅನೇಕ ಉದಾಹರಣೆಗಳಿವೆ.

ಜತೆಗೆ ಮಹಿಳೆ ಹೆಸರಿಗೆ ಮಾತ್ರ ಪ್ರತಿನಿ ಧಿ ಇಡೀಆಡಳಿತ ನಿರ್ವಹಣೆ ಮಹಿಳೆಯ ಪತಿ, ಪುತ್ರ,ಸಹೋದರ ಹೀಗೆ ಯಾರೊಬ್ಬರು ಪುರಷರೇನಿರ್ವಹಣೆ ಮಾಡುತ್ತಾರೆ ಎಂಬ ಆಪಾದನೆಗಳುಕೇಳಿ ಬರುತ್ತಿವೆ. ಮಹಾನಗರ ಪಾಲಿಕೆಯಲ್ಲೂಮಹಿಳೆಯರಿಗೆ ಶೇ.33 ಇದ್ದ ಮೀಸಲನ್ನು ಸರಕಾರಶೇ.50ಕ್ಕೆ ಹೆಚ್ಚಿಸಿರುವುದು ಮಹಿಳೆಯರಿಗೆ ಸಂತಸಹೆಚ್ಚುವಂತೆ ಮಾಡಿದೆ.40 ಮಹಿಳಾ ಸದಸ್ಯರ ಪ್ರವೇಶ: ಹುಬ್ಬಳ್ಳಿ-ಧಾರವಾಡಮಹಾನಗರ ಪಾಲಿಕೆಯಲ್ಲಿ ಈ ಹಿಂದೆ 67ವಾರ್ಡ್‌ಗಳು ಇದ್ದವು. ಈ ಹಿಂದಿನ ಆಡಳಿತಮಂಡಳಿಯಲ್ಲಿ 67 ಸದಸ್ಯರಲ್ಲಿ ಸುಮಾರು 25ಮಹಿಳಾ ಸದಸ್ಯರಿದ್ದರು. ಇದೀಗ ವಾರ್ಡ್‌ ಪುನರ್‌ವಿಂಗಡಣೆಯೊಂದಿಗೆ ಅವಳಿನಗರದಲ್ಲಿ 82 ವಾಡ್‌ìಗಳನ್ನಾಗಿ ಮಾಡಲಾಗಿದ್ದು, ಮುಂಬರುವ ಪಾಲಿಕೆಚುನಾವಣೆಯಲ್ಲಿ 40 ಸ್ಥಾನಗಳನ್ನು ಮಹಿಳೆಯರಿಗೆಮೀಸಲಿಡಲಾಗಿದೆ. ಅಲ್ಲಿಗೆ ವಾರ್ಡ್‌ ಪುನರ್‌ವಿಂಗಡಣೆಯಿಂದ 15 ಹೊಸ ವಾರ್ಡ್‌ಗಳುಅಸ್ತಿತ್ವಕ್ಕೆ ಬಂದಿದ್ದು, ಹು.ಧಾ.ಮಹಾನಗರ ಪಾಲಿಕೆಹಿಂದಿನ ಆಡಳಿತ ಮಂಡಳಿಯಲ್ಲಿ ಮಹಿಳಾಸದಸ್ಯರಿಗೆ ಹೋಲಿಸಿದರೆ, ಮುಂಬರುವ ಆಡಳಿತಮಂಡಳಿಯಲ್ಲಿ 15 ಮಹಿಳಾ ಸದಸ್ಯರ ಸಂಖ್ಯೆಹೆಚ್ಚಾಲಿದೆ.

Advertisement

ಪಾಲಿಕೆ ಒಟ್ಟು ಸದಸ್ಯರಲ್ಲಿ ಅರ್ಧದಷ್ಟುಮಹಿಳಾ ಸದಸ್ಯರು ಇರಲಿದ್ದಾರೆ.ವಾರ್ಡ್‌ಗಳ ಪುನರ್‌ ವಿಂಗಡಣೆಯಿಂದಹೊಸ ವಾರ್ಡ್‌ಗಳ ರಚನೆಯೊಂದಿಗೆ ಅನೇಕವಾರ್ಡ್‌ಗಳ ಮೀಸಲಾತಿಯಲ್ಲಿ ಬದಲಾವಣೆಆಗಿದೆ. ಈ ಬಾರಿಯ ವಾರ್ಡ್‌ ಮೀಸಲಾತಿಯಲ್ಲಿಒಂದು ಮತ್ತು ಎರಡನೇ ವಾರ್ಡ್‌ ಮಹಿಳೆಯರಿಗೆಮೀಸಲಿದ್ದರೆ, ಕೊನೆಯ 11 ವಾರ್ಡ್‌ಗಳುಸತತವಾಗಿ ಮಹಿಳೆಯರಿಗೆ ಮೀಸಲಿರಿಸಲಾಗಿದೆ.ಮಹಿಳಾ ಸದಸ್ಯರಿಗೆ ಟಿಕೆಟ್‌ ನೀಡುವಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕೇವಲಜಾತಿ, ಹಣಕ್ಕೆ ಒತ್ತು ನೀಡದೆ, ಕನಿಷ್ಠ ಸಭೆಯಲ್ಲಿಧ್ವನಿ ಎತ್ತುವ, ನಿಯಮಗಳನ್ನು ತಿಳಿದುಕೊಳ್ಳುವ,ವಿಷಯಗಳ ಮೇಲೆ ಬೆಳಕು ಚೆಲ್ಲುವವರಿಗೆಅವಕಾಶ ನೀಡಬೇಕಾಗಿದೆ. ಹಿಂದಿನ ಆಡಳಿತಮಂಡಳಿಗಳ ಸದನ ಕಲಾಪಗಳನ್ನು ನೋಡಿದರೆ,ಬಹುತೇಕ ಮಹಿಳೆಯರು ಮಾತನಾಡಿದ್ದೆ ಕಡಿಮೆ,ಕೆಲವರಂತೂ ಸಭೆಗೆ ಬಂದಿದ್ದು, ಸಹಿ ಮಾಡಿದ್ದುಬಿಟ್ಟರೆ ಬೇರೇನೂ ಮಾತನಾಡಿಲ್ಲ ಎನ್ನಬಹುದಾಗಿದೆ.ಇದು ಅನೇಕ ಪುರುಷ ಸದಸ್ಯರಿಗೂ ಅನ್ವಯಿಸುತ್ತದೆಎಂಬುದನ್ನು ಬೇರೆ ಹೇಳಬೇಕಿಲ್ಲ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next