ಮಲ್ಪೆ: ಅಂಬಲಪಾಡಿ ಯೂತ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ 40ನೇ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಅಂಬಲಪಾಡಿ ಲಯನ್ಸ್ ಕ್ಲಬ್ ಸಹಯೋಗ ಮತ್ತು ಅಂಬಲಪಾಡಿ ದೇವಸ್ಥಾನದ ಸಹಕಾರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಫರ್ಧೆಯು ಆ. 20 ರಂದು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಅವರು ಮಾತನಾಡಿ ಸಮಾಜವನ್ನು ಕಟ್ಟುವ ಉದೇªಶದಿಂದ ಮಾಡಲಾದ ಗಣೇಶೋತ್ಸವ ಆಚರಣೆ ಇಂದು ಕೆಲವೊಂದು ರಾಜಕೀಯ, ಸಾಮಾಜಿಕ ಕಾರಣಗಳಿಂದಾಗಿ ಶಾಂತಿ ಸಭೆ ನಡೆಸುವಲ್ಲಿಯವರೆಗೆ ಬಂದಿದೆ. ನಮ್ಮ ಜನ, ನಮ್ಮ ಹಬ್ಬ, ನಮ್ಮ ಊರು ಎಂಬ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು. ನಾವೆಲ್ಲರು ಮನುಷ್ಯ ಮನುಷ್ಯನನ್ನು ಅರ್ಥ ಮಾಡಿಕೊಂಡು ಪೀÅತಿ ಸಾಮರಸ್ಯದಿಂದ ಭಾಗವಹಿಸಿದರೆ ಮಾತ್ರ ಆ ಹಬ್ಬದ ಆಚರಣೆಗೆ ಅರ್ಥ ಇರುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉದ್ಯಮಿ ಅಮೃತ್ ಶೆಣೈ ಅವರು ನಮ್ಮ ಸ್ವಾರ್ಥಕ್ಕಾಗಿ ಮುಂದಿನ ತಲೆಮಾರಿನ ಉಳಿವಿನ ಕಾಳಜಿ ಇಲ್ಲದೆ ಪ್ರಕೃತಿಯನ್ನು ನಾಶ ಮಾಡುತ್ತಾ ಬರುತ್ತಿದೇªವೆ. ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಇಂತಹ ಔಷಧೀಯ ಗುಣಗಳುಳ್ಳ ಗಿಡಗಳನ್ನು ವಿತರಿಸುವ ಕೆಲಸವಾದರೆ ಪ್ರಕೃತಿ ಸಂರಕ್ಷಣೆಯ ಜತೆಗೆ ಆರೋಗ್ಯ ರಕ್ಷಣೆಯೂ ಮಾಡಿದಂತಾಗುತ್ತದೆ ಎಂದರು.
ಅಂಬಲಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ಅಮೀನ್, ಕಾರ್ಯದರ್ಶಿ ಪ್ರಶಾಂತ್ ಭಂಡಾರಿ, ಲಯನ್ಸ್ ಮುಖಂಡರಾದ ಸತೀಶ್ ಶೆಟ್ಟಿ, ಜಗನ್ನಾಥ್ ಕಡೆಕಾರ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಕೃಷ್ಣ, ಯೂತ್ ಸ್ಫೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ ಗೌರವಾಧ್ಯಕ್ಷ ಶಶಿಕಾಂತ್ ಶೆಣೈ, ಅಧ್ಯಕ್ಷ ಸುನೀಲ್ ಕುಮಾರ್ ಕಪ್ಪೆಟ್ಟು ಉಪಸ್ಥಿತರಿದ್ದರು.
1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಪತಿ ಚಿತ್ರ, 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣೇಶೋತ್ಸವದ ಚಿತ್ರ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬಾಲಗಂಗಾಧರ ತಿಲಕ್ ಅವರ ಚಿತ್ರವನ್ನು ಬಿಡಿಸುವ ಸ್ಪರ್ಧೆ ನಡೆಯಿತು. ಡಾ| ಮೋಹನ್‌ದಾಸ್ ಕಾರ್ಯಕ್ರಮ ನಿರೂಪಿಸಿ ದರು. ಜಗದೀಶ್ ಆಚಾರ್ ವಂದಿಸಿದರು.
ಸ್ಮರಣಿಕೆ ಬದಲು ಲಕ್ಷ್ಮಣ ಫಲ ಗಿಡ
ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಸ್ಮರಣಿಕೆ ನೀಡುವ ಬದಲು ಕ್ಯಾನ್ಸರ್ ಕಾಯಿಲೆಗೆ ರಾಮಬಾಣವೆಂದು ಸಂಶೊಧನೆಯಲ್ಲಿ ದೃಢಪಟ್ಟ ಸುಮಾರು 300 ಲಕ್ಷ್ಮಣ ಫಲದ ಗಿಡಗಳನ್ನು ವಿತರಿಸಲಾಯಿತು. ಲಕ್ಷ್ಮಣ ಫಲದ ಹಣ್ಣನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಪಡೆಯಬಹುದು. ಕ್ಯಾನ್ಸರ್ ರೋಗಿಗಳು ಇದನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಇನ್ನು ಹೆಚ್ಚು ದಿನ ಕಾಲ ಬದುಕಬಹುದಾಗಿದೆ ಎನ್ನಲಾಗಿದೆ.