ನಗರ : ಕಪ್ಪೆ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೊಂದಿರುವ ಮಾಹಿತಿ ಇತ್ತೀಚೆಗೆ ಲಭಿಸಿದೆ. ಇದರ ಬಗ್ಗೆ ಹೆಚ್ಚಿನ ಸಂಶೊಧನೆಗಳು ನಡೆಯುತ್ತಿವೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ವಿನೀತ್ ಕುಮಾರ್ ಹೇಳಿದರು.
ನೆಹರೂನಗರ ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಆಯೋಜಿಸಿದ ಉಪ ನ್ಯಾಸದಲ್ಲಿ ಅವರು ಮಾತನಾಡಿದರು.
ಕಪ್ಪೆಗಳ ಇತಿಹಾಸ ವೈವಿಧ್ಯತೆಯಿಂದ ಕೂಡಿದೆ. ಆದರೆ ಇಂದು ಅವುಗಳ ಸಂತತಿ ಅಳಿವಿನ ಅಂಚಿನಲ್ಲಿದೆ. ಅವು ಗಳಿಗೆ ಪೂರಕವಾದ ವಾತಾವರಣ ನಿರ್ಮಿಸುವುದರಿಂದ ಅವುಗಳ ಸಂತತಿ ಯನ್ನು ಹೆಚ್ಚಿಸಲು ಸಾಧ್ಯ. ಒಂದು ವರ್ಗದ ಜೀವಿಗಳ ನಾಶವೆಂದರೆ, ಅದು ಇನ್ನೊಂದು ಜೀವಿಯ ಸಂತತಿ ನಾಶಕ್ಕೆ ಮುನ್ನುಡಿ. ಇದರಿಂದ ಸಂಪೂರ್ಣ ಆಹಾರ ಸಂಕೋಲೆಯೇ ಕಳಚಿ ಬೀಳುತ್ತದೆ ಎಂದರು.
ಕಪ್ಪೆಗಳು ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ಪರಿಮಿತವಾಗಿವೆ. ಪ್ರತಿಯೊಂದಕ್ಕೂ ಅದ ರದೇ ಆದ ಗುರುತು ನಡವಳಿಕೆಗಳು ಇವೆ. ಕೆಲವು ಕಡೆಗಳಲ್ಲಿ ಅವು ಆಹಾರದ ಪ್ರಮುಖ ಅಂಶವೂ ಆಗಿದೆ ಎಂದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ| ವಿಘ್ನೇಶ್ವರ ವರ್ಮುಡಿ ಮಾತನಾಡಿ, ಹಿಂದಿ ನಂತೆ ಕಪ್ಪೆಗಳು ಇಂದು ಕಾಣ ಸಿಗುವುದಿಲ್ಲ. ಅವುಗಳ ಸಂಖ್ಯೆ ನಶಿಸಲು ಕಾರಣ ನಾವು ಈ ಹಿಂದೆ ಅಳವಡಿಸಿಕೊಂಡ ಹಸಿರು ಕ್ರಾಂತಿಯ ಪರಿಣಾಮ. ನಮ್ಮಲ್ಲಿ ದಿನೇ ದಿನೇ ಕಡಿಮೆಯಾಗುತ್ತಿರುವ ಪರಿ ಸರದ ಬಗೆಗಿನ ಕಾಳಜಿಯಿಂದ ಸುತ್ತಲಿನ ವಾತಾವರಣ ವಿಷಯುಕ್ತವಾಗುತ್ತಿದೆ. ನಮ್ಮ ಆಸೆಗಳು ಅಪರಿಮಿತ. ಆದರೆ ಸಂಪನ್ಯೂಲ ಗಳು ಒಂದು ಮಿತಿಯಲ್ಲಿದೆ. ಅದನ್ನು ಅರಿ ಯದೇ ಮುನ್ನಡೆದರೆ, ಮುಂದೊಂದು ದಿನ ಆಹಾರ ದೊರಕದೆ ಇರುವ ಪರಿಸ್ಥಿತಿ ತಲುಪ ಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಉಪನ್ಯಾಸಕ ಸುಹಾಸ್ ಕೃಷ್ಣ ಎ.ಜಿ. ಸ್ವಾಗತಿಸಿದರು. ವಿದ್ಯಾರ್ಥಿನಿ ಮೋಕ್ಷಿತಾ ವಂದಿಸಿ, ದುರ್ಗಾಲಕ್ಷ್ಮೀ ನಿರೂಪಿಸಿದರು.