Advertisement

ಹೈದ್ರಾಬಾದ ಕರ್ನಾಟಕಕ್ಕೆ ಕ್ಯಾನ್ಸರ್‌ ಆಸ್ಪತ್ರೆ, ಧರ್ಮಶಾಲೆ ಭಾಗ್ಯ

03:22 PM May 27, 2017 | Team Udayavani |

ಕಲಬುರಗಿ: ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಮಾದರಿಯಲ್ಲಿ ಕಲಬುರಗಿಯಲ್ಲೂ ಅಂತಹದ್ದೇ ಕ್ಯಾನ್ಸರ್‌ ಆಸ್ಪತ್ರೆಯೊಂದನ್ನು ರಾಜ್ಯ ಸರಕಾರ ಕಟ್ಟುವ ಮುಖಾಂತರ ಹೈಕ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಮುಂದಾಗಿದೆ.

Advertisement

ಅಲ್ಲದೆ, ಸುಧಾಮೂರ್ತಿ ಅವರ ಇನ್ಫೋಸಿಸ್‌ ನೆರವಿನಿಂದ ಧರ್ಮಶಾಲೆ ಕಟ್ಟುವ ಮೂಲಕ ಸಂಪೂರ್ಣ ಆರೋಗ್ಯ ಭಾಗ್ಯ ಕರುಣಿಸಿದೆ. ಬೆಂಗಳೂರಿನಲ್ಲಿ 1973ರಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಆರಂಭವಾದರೆ, ಕಲಬುರಗಿಯಲ್ಲಿ 1990ರಲ್ಲಿ ಆರಂಭಿಸಲಾಯಿತು.

ಅಂದು ಕಿದ್ವಾಯಿ ನಿರ್ದೇಶಕರಾಗಿದ್ದ ಡಾ| ಕೃಷ್ಣಾ ಭಾರ್ಗವ ಎಚ್‌ಕೆಇ ಸಂಸ್ಥೆಯ ಅನುದಾನ ಮತ್ತು ಸ್ಥಳೀಯ ಉದ್ಯಮಿಗಳ ಅನುದಾನದಿಂದ ಕಿದ್ವಾಯಿಯ ಅಂಗಸಂಸ್ಥೆಯಾಗಿಯೇ ವಿಟಿಎಸ್‌ಎಂ ಫೆರಿಫೆರಲ್‌ ಕ್ಯಾನ್ಸರ್‌ ಕೇಂದ್ರವನ್ನು ಆರಂಭಿಸಿದರು. 

ಇಲ್ಲಿ ಹೊರರೋಗಿಗಳಿಗೆ ಪ್ರಪ್ರಥಮ ವಿಕಿರಣ ಚಿಕಿತ್ಸಾ ಕೇಂದ್ರ ಪ್ರಾರಂಭ ಮಾಡಲಾಯಿತು. 1997ರ ಡಿಸೆಂಬರ್‌ನಲ್ಲಿ 50 ಹಾಸಿಗೆಯುಳ್ಳ ಒಳರೋಗಿಗಳ ಸೇವೆ ಆರಂಭಿಸಲಾಯಿತು. ಆಸ್ಪತ್ರೆಗೆ ಪ್ರತಿ ರ್ಷ 500-600 ಹೊರ ರೋಗಿಗಳು 4ಸಾವಿರದಷ್ಟು ಅನುಸರಣೆ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ.

2014ರಲ್ಲಿ ಮೇಲ್ದರ್ಜೆಗೆ: ಯಾವಾಗ ಡಾ| ಶರಣಪ್ರಕಾಶ ಪಾಟೀಲರು ವೈದ್ಯಕೀಯ ಶಿಕ್ಷಣ ಸಚಿವರಾದರೋ ಆಗ ನಿರಂತರ ಪ್ರಯತ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಫೆರಿಫೆರಲ್‌ ಕ್ಯಾನ್ಸರ್‌ ಕೇಂದ್ರವನ್ನು ಎರಡು ಹಂತದಲ್ಲಿ ಮೇಲ್ದರ್ಜೆಗೆ ಏರಿಸಲಾಯಿತು. ಇದಕ್ಕೆ ಸರಕಾರದ ತಾಂತ್ರಿಕ ಅನುಮೋದನೆಯೂ ದೊರೆಯಿತು.

Advertisement

ಸಿಬ್ಬಂದಿ ನೇಮಕಾತಿಗೂ ಅನುಮತಿ ಸಿಕ್ಕಿತು. ಈಗ ಮೇಲ್ದರ್ಜೆಗೇರಿಸಿ ಆಂಕಾಲಾಜಿಸ್ಟ್‌, ಕಿಮೋಥೆರμ ಚಿಕಿತ್ಸೆಹಾಗೂ ಸರ್ಜಿಕಲ್‌ ಆಂಕಾಲಾಜಿಸ್ಟ್‌ ನೇಮಕ ಮಾಡಿ ಶಸ್ತ್ರ ಚಿಕಿತ್ಸಾ ಘಟಕವನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಅತ್ಯಂತ ಆಧುನಿಕ ವ್ಯವಸ್ಥೆಯಾಗಿದೆ. ಇದಾದ ಬಳಿಕ 120 ರೋಗಿಗಳು ಬೆಂಗಳೂರನ್ನು ಹೊರತು ಪಡಿಸಿ ಚಿಕಿತ್ಸೆಯನ್ನು ಕಲಬುರಗಿಯಲ್ಲಿ ಪಡೆಯಲು ಸಾಧ್ಯವಾಗಿದೆ. 

ಧರ್ಮಶಾಲೆ ಭಾಗ್ಯ: ಈ ಮೊದಲು ಬೆಂಗಳೂರಿಗೆ ಹೋಗುವ ಹೈಕ ಭಾಗದ ಜನರು ಊಟಕ್ಕಾಗಿ ಭಾರಿ ಸಂಕಷ್ಟ ಎದುರಿಸುತ್ತಿದ್ದರು. ಅದನ್ನು ಅರ್ಥ ಮಾಡಿಕೊಂಡಿದ್ದ ಇನ್ಫೋಸಿಸ್‌ ಬೆಂಗಳೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಧರ್ಮಶಾಲೆ ಆರಂಭಿಸಿ, ಅಲ್ಲಿ ಉತ್ತರ ಕರ್ನಾಟಕದ ಊಟ ದೊರೆಯುವ ವ್ಯವಸ್ಥೆ ಮಾಡಲು ಹೊರಟಿದ್ದಾರೆ. ಅದೇ ಮಾದರಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲೂ ಅಂತಹದೇ ಧರ್ಮಶಾಲೆಯನ್ನು ನಿರ್ಮಾಣ ಮಾಡಲು ಸುಧಾಮೂರ್ತಿ ಒಪ್ಪಿಗೆ ಸೂಚಿಸಿದ್ದಾರೆ. 

* ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next