ಪಣಜಿ: ಕೋವಿಡ್ 19 ಸಾಂಕ್ರಾಮಿಕ ಸೋಂಕಿನ ನಂತರ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಶನಿವಾರ (ಫೆ.18) ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಸೇನೆಯ ಚಿಹ್ನೆ ಕದ್ದೊಯ್ದ ಕಳ್ಳರಿಗೆ ಪಾಠ ಕಲಿಸುತ್ತೇವೆ: ಶಿಂಧೆ ವಿರುದ್ಧ ಉದ್ಧವ್ ಕಿಡಿ
ಪತಂಜಲಿ ಯೋಗ ಸಮಿತಿ ಶನಿವಾರ ಗೋವಾದ ಮೀರಾಮಾರ್ ಬೀಚ್ ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಯೋಗ ಶಿಬಿರಕ್ಕೆ ಚಾಲನೆ ನೀಡಿ ರಾಮ್ ದೇವ್ ಮಾತನಾಡಿದರು.
ದೇಶದಲ್ಲಿ ಕೋವಿಡ್ 19 ಸೋಂಕಿನ ನಂತರ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಜನರು ತಮ್ಮ ಕಣ್ಣಿನ ದೃಷ್ಟಿ, ಶ್ರವಣಶಕ್ತಿಯನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದರು. ಭಾರತ ಸ್ವಾಸ್ಧ್ಯದ ಜಾಗತಿಕ ಕೇಂದ್ರವಾಗಬೇಕು ಎಂಬು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಅದೇ ರೀತಿ ಗೋವಾ ಕೂಡಾ ಸ್ವಾಸ್ಥ್ಯದ ಕೇಂದ್ರವಾಗಬೇಕು ಎಂಬುದು ನನ್ನ ಕನಸಾಗಿದೆ ಎಂದು ರಾಮ್ ದೇವ್ ಹೇಳಿದರು.
ಪ್ರವಾಸಿಗರು ಕೇವಲ ಸ್ಥಳ ವೀಕ್ಷಣೆಗಾಗಿ ಮಾತ್ರ ಗೋವಾಕ್ಕೆ ಭೇಟಿ ನೀಡುವುದಲ್ಲ. ಜೊತೆಗೆ ಗೋವಾದಲ್ಲಿ ಜನರಿಗೆ ರಕ್ತದೊತ್ತಡದ ಚಿಕಿತ್ಸೆ, ಮಧುಮೇಹ, ಥೈರಾಯ್ಡ್, ಕ್ಯಾನ್ಸರ್ ಹಾಗೂ ಇತರ ಕಾಯಿಲೆಗಳಿಗೆ ಚಿಕಿತ್ಸೆ ದೊರಕಬೇಕು. ಈ ನಿಟ್ಟಿನಲ್ಲಿ ಗೋವಾ, ಯೋಗ, ಆಯುರ್ವೇದ, ಸನಾತನ ಮತ್ತು ಆಧ್ಯಾತ್ಮಿಕತೆಯ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕಾಗಿದೆ ಎಂದು ತಿಳಿಸಿದ್ದಾರೆ.