Advertisement

ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ರದ್ದು ?

02:55 AM Jan 08, 2022 | Team Udayavani |

ಉಡುಪಿ: ಪಡಿತರ ವ್ಯವಸ್ಥೆಯಲ್ಲಿ ನೀಡುವ ಆಹಾರ ಸಾಮಗ್ರಿಗಳ ನಿರ್ದಿಷ್ಟ ಮಾಹಿತಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳಲು ರಾಜ್ಯ ಸರಕಾರ ಒಂದೂವರೆ ವರ್ಷಕ್ಕೂ ಹಿಂದೆಯೇ ಇ-ಕೆವೈಸಿ ಮಾಡಿಸುವ ಪ್ರಕ್ರಿಯೆ ಆರಂಭಿಸಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.03 ಲಕ್ಷಕ್ಕೂ ಅಧಿಕ ಪಡಿತರ ಚೀಟಿದಾರರು ಮಾಡಿಕೊಂಡಿಲ್ಲ.

Advertisement

ಬಿಪಿಎಲ್‌, ಅಂತ್ಯೋದಯ ಪಡಿತರಚೀಟಿಯ ಕುಟುಂಬದ ಸದಸ್ಯರು ಆದ್ಯತೆ ಮೇಲೆ ನ್ಯಾಯಬೆಲೆ ಅಂಗಡಿಯಲ್ಲಿ
ಬೆರಳಚ್ಚು ನೀಡಿ, ಇ-ಕೆವೈಸಿ ಮಾಡಿಸಿಕೊಳ್ಳಲು 2021ರ ಡಿಸೆಂಬರ್‌ ಅಂತ್ಯದ ವರೆಗೂ ಅವಕಾಶ ನೀಡಲಾಗಿತ್ತು. ಈಗ ಅಂತಿಮವಾಗಿ ಜ. 10ರ ವರೆಗೆ ಅವಕಾಶ ನೀಡಿದ್ದು ಆಗಲೂ ಮಾಡಿಸಿಕೊಳ್ಳದೇ ಇದ್ದರೆ ಪಡಿತರ ಚೀಟಿ ರದ್ದಾಗಲಿದೆ.

ದ.ಕ. ಜಿಲ್ಲೆಯಲ್ಲಿ 2,71,134 ಪಡಿತರ ಚೀಟಿಗಳಿದ್ದು, 11,00,722 ಸದಸ್ಯರಿದ್ದಾರೆ. ಇದರಲ್ಲಿ ಕ್ರಮವಾಗಿ 2.19 ಲಕ್ಷ ಕಾರ್ಡ್‌ಗಳು, 10,07,892 ಸದಸ್ಯರು ಇ-ಕೆವೈಸಿ ಪೂರ್ಣಗೊಳಿಸಿಕೊಂಡಿದ್ದಾರೆ. 92,832 ಸದಸ್ಯರು ಹಾಗೂ 51,162 ಕಾರ್ಡ್‌ಗಳು ಇ-ಕೆವೈಸಿಗೆ ಬಾಕಿಯಿವೆ. ಉಡುಪಿ ಜಿಲ್ಲೆಯಲ್ಲಿ 1,89,993 ಪಡಿತರ ಚೀಟಿಗಳಿದ್ದು, 7,94,856 ಸದಸ್ಯ ರಿದ್ದಾರೆ. ಇದರಲ್ಲಿ ಕ್ರಮವಾಗಿ 1.37 ಲಕ್ಷ ಕಾರ್ಡ್‌ಗಳು, 6.94 ಲಕ್ಷ ಸದಸ್ಯರ ಇ-ಕೆವೈಸಿ ಪೂರ್ಣಗೊಂಡಿದೆ. ಒಂದು ಲಕ್ಷ ಸದಸ್ಯರು ಹಾಗೂ 52,240 ಕಾರ್ಡ್‌ಗಳು ಇ-ಕೆವೈಸಿ ಇನ್ನೂ ಮಾಡಿಸಿಕೊಂಡಿಲ್ಲ.

ಈ ತಿಂಗಳಿಂದಲೇ ರದ್ದು?
ಕಾರ್ಡ್‌ನಲ್ಲಿರುವ ಸದಸ್ಯರು ಕುಟುಂಬದ ಜತೆ ಇಲ್ಲದೇ ಇದ್ದರೂ ಅವರ ಹೆಸರಿನಲ್ಲಿ ಪಡಿತರ ಪಡೆಯಲಾಗುತ್ತಿತ್ತು. ಇದರಿಂದ ಸರಕಾರಕ್ಕೂ ಹೆಚ್ಚುವರಿ ಹೊರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ ಮತ್ತು ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿದೆ. ಇನ್ನೂ ಮಾಡಿಸದಿರುವವರಿಗೆ ಪಡಿತರ ರದ್ದಾಗುವ ಸಾಧ್ಯತೆಯಿದೆ.

ಸರ್ವರ್‌ ಸಮಸ್ಯೆಯಾಗಿತ್ತು
ಇ-ಕೆವೈಸಿ ಮಾಡಿಸಲು ಆರಂಭಿಸಿದ ದಿನಗಳಲ್ಲಿ ಸ್ವಲ್ಪಮಟ್ಟಿನ ಸರ್ವರ್‌ ಸಮಸ್ಯೆ ಎದುರಾಗಿತ್ತು. ಈಗ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯಿಲ್ಲ. ಸರ್ವರ್‌ ಸಮಸ್ಯೆಯ ದೂರು ಬಂದ ಕೂಡಲೇ ಸರಿಪಡಿಸುತ್ತಿದ್ದೇವೆ. ಸದ್ಯ ಇ-ಕೆವೈಸಿ ಮಾಡಿಸದೆ ಇರುವುದು ಸರ್ವರ್‌ ಸಮಸ್ಯೆಯಿಂದಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

Advertisement

ಇ-ಕೆವೈಸಿಗೆ ಜ. 10ರ ತನಕ ಅವಕಾಶ ನೀಡಲಾಗಿದೆ. ಸರಕಾರ ಸೂಚನೆ ನೀಡಿದರೆ ಬಾಕಿ ಇರುವವರ ಕಾರ್ಡ್‌ ರದ್ದಾಗುವ ಸಾಧ್ಯತೆ ಇರುತ್ತದೆ. ದ.ಕ. ಜಿಲ್ಲೆಯಲ್ಲಿ ಶೇ. 81.13ರಷ್ಟು ಕಾರ್ಡ್‌ ಹಾಗೂ ಶೇ.91.57ರಷ್ಟು ಸದಸ್ಯರು ಇ-ಕೆವೈಸಿ ಮಾಡಿಸಿಕೊಂಡಿ ದ್ದಾರೆ.
– ಮೊಹಮ್ಮದ್‌ ಇಸಾಕ್‌ ಮತ್ತು
ಕೆ.ಪಿ. ಮಧುಸೂದನ್‌
ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವ ಹಾರ ಇಲಾಖೆ, ಉಡುಪಿ, ದ.ಕ. ಜಿಲ್ಲೆ

- ರಾಜು ಖಾರ್ವಿ ಕೊಡೇರಿ

 

Advertisement

Udayavani is now on Telegram. Click here to join our channel and stay updated with the latest news.

Next