ಕನಕಪುರ: ಕೆರೆಗಳ ಮೀನು ಪಾಶುವಾರು ಹಕ್ಕನ್ನು ಪಡೆದ ಬಿಡ್‌ದಾರರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂದು ಯಲಚವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಸೂಚನೆ ನೀಡಿದರು.
ತಾಲೂಕಿನ ಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಪಂ ವ್ಯಾಪ್ತಿಯ ಕೆರೆಗಳ ಮೀನು ಪಾಶುವಾರು ಬಹಿರಂಗ ಹರಾಜು ಸಭೆಯಲ್ಲಿ ಮಾತನಾಡಿ, ಹರಾಜಿನಲ್ಲಿ ಭಾಗವಹಿಸುವವರು ಮುಂಗಡವಾಗಿ ಠೇವಣಿ ಪಾವತಿ ಮಾಡಿ ಆನಂತರ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಮೂರು ವರ್ಷಗಳ ಅವಧಿಗೆ ಹರಾಜು ಪ್ರಕ್ರಿಯೆ ನಡೆಯಲಿದ್ದು ಮೊದಲ ವರ್ಷ ಹರಾಜು ಕೂಗಿದ ಮೊತ್ತಕ್ಕೆ ಮುಂದಿನ ಎರಡು ವರ್ಷ ಶೇ.10ರಷ್ಟು ಹೆಚ್ಚಿನ ಹಣ ಪಾವತಿಸಿ ಹರಾಜಿನ ಹಕ್ಕನ್ನು ಉಳಿಸಿಕೊಳ್ಳಬಹುದು. ಕೆರೆಗಳ ಮೀನು ಪಾಶುವಾರು ಹಕ್ಕು ಪಡೆದ ಬಿಡ್‌ದಾರರು ಸರ್ಕಾರದ ನಿಯಮಗಳಡಿಯಲ್ಲಿ ಬಳಸಿಕೊಳ್ಳಬೇಕು.
ಇದನ್ನೂ ಓದಿ:- ಡಿಕೆಶಿ ಕೆಪಿಸಿಸಿ ಅಧ್ಯಕ್ಷರಿರಬಹುದು ಆದರೆ ನನ್ನ ಮಿತ್ರರೂ ಹೌದು : ಬಿ.ವೈ.ವಿಜಯೇಂದ್ರ
ಇಲ್ಲದಿದ್ದರೆ ಹರಾಜು ಹಕ್ಕನ್ನು ರದ್ದುಪಡಿಸಬೇಕಾಗುತ್ತದೆ. ಮೀನುಗಾರಿಕೆ ಮಾಡಲು ವಿಷದ ವಸ್ತುಗಳು ಡೈನಮೆಂಟ್ ಗಳನ್ನು ಬಳಸುವಂತಿಲ್ಲ. ಕೆರೆಗಳಲ್ಲಿ ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಕೆರೆಗಳ ಮೀನು ಪಾಶುವಾರು ಹರಾಜು ಪ್ರಕ್ರಿಯೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
ಯಲಚವಾಡಿ ಗ್ರಾಮದ ಊರ ಕೆರೆ, ಮಲ್ಲನಕೆರೆ, ಕಲ್ಲನಕುಪ್ಪೆ ಕೆರೆ, ಅರಳಿಮರದದೊಡ್ಡಿ ತಾರಿಕುಂಟೆಕೆರೆ, ತಲಾ 2 ಮತ್ತು ಯಲಚವಾಡಿ ಕುಂಬರನ ಕೆರೆ, ಲಿಂಗನಪುರ ವಿಭೂತಿ ಕೆರೆ, ಉಯ್ಯಲಪ್ಪನಹಳ್ಳಿ ಕೆರೆ, ಮತ್ತು ಹೊಸಕೆರೆ, ಲಿಂಗನಪುರ ವಿಭೂತಿಕೆರೆ, ಕಾಡಿನ ಹಾದಿಕೆರೆ, ದೊಡ್ಡಕೆರೆ ತಲಾ 1ಸಾವಿರ, ವಡ್ಡರಕುಪ್ಪೆ ಕೆರೆ 8600, ಕುಂಬಾರ ದೊಡ್ಡಿ ಹೊಸಕೆರೆ 10500, ಅರಳಿಮರದದೊಡ್ಡಿ ಗೋವಿನ ಕೆರೆ 4ಸಾವಿರ, ದೊಡೂxರಿನ ದೊಡ್ಡಕೆರೆ 25ಸಾವಿರ, ಕುಂಚನಹಳ್ಳಿ ಕೆರೆ 10600 ತೆರುಬೀದಿ ಗ್ರಾಮದ ಅಗಸನ ಕೆರೆ 32ಸಾವಿರಕ್ಕೆ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಯಿತು. ಗ್ರಾಪಂ ಅಧ್ಯಕ್ಷ ಲೀಲಾವತಿಯವರ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ಕರೆಯಲಾಗಿತ್ತು. ಉಪಾಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಚೌಡಯ್ಯ, ಕರವಸೂಲಿ ಗಾರ ಅರುಣಾ ಸೇರಿದಂತೆ ಗ್ರಾಪಂ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.