Advertisement

ಟಾಸ್‌ ರದ್ದು: ತೀವ್ರಗೊಂಡ ಪರ -ವಿರೋಧ

06:00 AM May 19, 2018 | |

ಮುಂಬಯಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಾಸ್‌ ಬೇಕೆ, ಬೇಡವೇ ಎಂಬ ಚರ್ಚೆ ಮೇ 28, 29ರಂದು ಮುಂಬಯಿಯಲ್ಲಿ ನಡೆಯಲಿದೆ. ಟಾಸ್‌ ಹಾರಿಸಿ ಪಂದ್ಯವನ್ನು ಶುರು ಮಾಡುವ ಪರಂಪರೆ ಸಾಕು ಎನ್ನುವ ನಿಲುವಿಗೆ ಹಲವು ಮಾಜಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ.  ಭಾರತದ ಖ್ಯಾತ ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ, ಈ ಯೋಚನೆಯಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ದಿಲೀಪ್‌ ವೆಂಗ್‌ಸರ್ಕಾರ್‌, ಪಾಕಿಸ್ಥಾನದ ಮಾಜಿ ನಾಯಕ ಆಸಿಫ್ ಇಕ್ಬಾಲ್‌ ಕೂಡ ವಿರೋಧಿಸಿದ್ದಾರೆ. ಆದರೆ ವಿಂಡೀಸ್‌ ಮಾಜಿ ವೇಗಿ ಮೈಕಲ್‌ ಹೋಲ್ಡಿಂಗ್‌, ಆಸ್ಟ್ರೇಲಿಯದ ಮಾಜಿ ನಾಯಕರಾದ ರಿಕಿ ಪಾಂಟಿಂಗ್‌, ಸ್ಟೀವ್‌ ವೋ ಟಾಸ್‌ ರದ್ದು ಮಾಡುವ ಪರವಾಗಿದ್ದಾರೆ. 

Advertisement

ಆತಿಥೇಯ ತಂಡಗಳು ಪಿಚ್‌ ಪರಿಸ್ಥಿತಿಯ ಉಪಯೋಗ ಪಡೆಯುತ್ತವೆ ಎಂಬ ಭಾವನೆಯಿದ್ದರೆ ಪಿಚ್‌ ಸಿದ್ಧಪಡಿಸಲು ತಟಸ್ಥ ಕ್ಯುರೇಟರ್‌ ನೇಮಿಸಿ. ಅದಕ್ಕೆ ಟಾಸ್‌ ರದ್ದು ಮಾಡುವ ಯೋಚನೆಯೇಕೆ ಎಂದು ವೆಂಗ್‌ಸರ್ಕಾರ್‌ ಪ್ರಶ್ನಿಸಿದ್ದಾರೆ. ಟಾಸ್‌ ಹಾರಿಸುವ ಬದಲು ಪ್ರವಾಸಿ ತಂಡದ ನಾಯಕನಿಗೆ ಬೌಲಿಂಗ್‌ ಅಥವಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಬೇಕು ಎಂದು ವಾದ ಶುರುವಾಗಿದೆ. ಇದನ್ನು ಕೌಂಟಿಯಲ್ಲಿ ಜಾರಿ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next