Advertisement

ಎನ್‌ಪಿಎಸ್‌ ರದ್ದು ಮಾಡಿ

03:16 PM Jan 19, 2018 | Team Udayavani |

ರಾಯಚೂರು: ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಹಾಗೂ ಆರನೇ ವೇತನ ಆಯೋಗ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿಬ್ಬಂದಿ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

Advertisement

ಕೇಂದ್ರ ಸರ್ಕಾರ 2004ರಲ್ಲಿ ಅವೈಜ್ಞಾನಿಕವಾದ ಎನ್‌ಪಿಎಸ್‌ ಯೋಜನೆ ಜಾರಿಗೊಳಿಸಿತ್ತು. ದೇಶದ ಪಶ್ಚಿಮ ಬಂಗಾಳ, ತ್ರಿಪುರ ಹೊರತುಪಡಿಸಿ ಎಲ್ಲ ರಾಜ್ಯಗಳು ನೂತನ ಯೋಜನೆ ಅಳವಡಿಸಿಕೊಂಡಿವೆ. ಆದರೆ, ನೂತನ ಪಿಂಚಣಿ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಾಜ್ಯದ 1.8 ಲಕ್ಷ ಸರ್ಕಾರಿ ನೌಕರರು ಅತಂತ್ರಕ್ಕೆ ಸಿಲುಕುವಂತಾಗಿದೆ ಎಂದು ದೂರಿದರು. 

ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ನೌಕರರ ಇಳಿವಯಸ್ಸಿನಲ್ಲಿ ಸಾಕಷ್ಟು ಸಮಸ್ಯೆಗೆ ಸಿಲುಕುವ ಸಾಧ್ಯತೆಗಳಿವೆ. ಹಳೇ ವ್ಯವಸ್ಥೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದವರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಸಿಗುತ್ತಿತ್ತು. ಹೊಸ ಪದ್ಧತಿಯಲ್ಲಿ ಟ್ರಸ್ಟ್‌ ವ್ಯವಸ್ಥಾಪಕರು ನಿಶ್ಚಿತ ಪಿಂಚಣಿ ನೀಡುವುದಿಲ್ಲ. ಅಲ್ಲದೇ, ಅನಿಶ್ಚಿತ ಪಿಂಚಣಿ ವ್ಯವಸ್ಥೆಯಲ್ಲಿ ಶೇ.10ರಷ್ಟು ವೇತನ ಕಡಿತಗೊಳಿಸಲಾಗುತ್ತಿದೆ. ಕಾಲಕಾಲಕ್ಕೆ ಪಿಂಚಣಿ ಹೆಚ್ಚಿಸುವುದಿಲ್ಲ. ಬಾಂಡ್‌ ರೂಪದ ಭದ್ರತೆಯೂ, ಭರವಸೆಯೂ ಇಲ್ಲ ಎಂದು ದೂರಿದರು.

ಏಳನೇ ವೇತನ ಆಯೋಗವು ಎನ್‌ ಪಿಎಸ್‌ ಯೋಜನೆ ನೌಕರರಿಗೆ ಭದ್ರತೆ ಇಲ್ಲದ ಯೋಜನೆ ಎಂದು ಉಲ್ಲೇಖೀಸಿದೆ. ಎನ್‌ಪಿಎಸ್‌ ಯೋಜನೆಯನ್ನು ರದ್ದುಪಡಿಸುವ, ಕೈಬಿಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆದರೆ, ಸರ್ಕಾರ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ರದ್ದುಗೊಳಿಸಲು ಆಗ್ರಹಿಸಿ ಹಂತಹಂತವಾಗಿ ಹೋರಾಟ
ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರ ಭಾಗವಾಗಿ ಇಂದು ಮೊದಲ ಹಂತದ ಹೋರಾಟ ಆರಂಭಿಸಿದ್ದು, ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮೆಹಬೂಬ್‌ ಪಾಷಾ ಎಂ. ಪ್ರಧಾನ ಕಾರ್ಯದರ್ಶಿ ಶೇಖ್‌ ಅಸರಾರ್‌, ರಾಜ್ಯ ಜಂಟಿ ಕಾರ್ಯದರ್ಶಿ ಎನ್‌. ಮಲ್ಲಿಕಾರ್ಜುನ, ಖಜಾಂಚಿ ಲಕ್ಷ್ಮಪ್ಪ, ಸದಸ್ಯರಾದ ವೀರೇಶ, ವೀರಭದ್ರಪ್ಪ, ಸೈಯ್ಯದ್‌ ಸಿರಾಜ್‌ ಹುಸೇನ್‌, ಶ್ರೀಧರ ಕುಲಕರ್ಣಿ, ರಝಾಕ್‌ ಉಸ್ತಾದ್‌ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

ಎನ್‌ಪಿಎಸ್‌ ಕೈಬಿಡಲು ನೌಕರರ ಧರಣಿ
 ಮಾನ್ವಿ: ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ಕೂಡಲೇ ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಮರು
ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಗುರುವಾರ
ನೌಕರ ಭವನದ ಮುಂದೆ ಸಾಂಕೇತಿಕ ಧರಣಿ ನಡೆಸಿದರು.  ಕೇಂದ್ರ ಸರ್ಕಾರ 2004ರಲ್ಲಿ ಜಾರಿಗೊಳಿಸಿದ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ಅವೈಜ್ಞಾನಿಕ ಹಾಗೂ ಅಭದ್ರತೆಯಿಂದ ಕೂಡಿದೆ. ಈ ಯೋಜನೆಯನ್ನು 2006ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ. ಆದರೆ 2006ರಿಂದ ನೇಮಕಗೊಂಡ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯದಲ್ಲಿ ಹಲವು ನ್ಯೂನತೆಗಳು ಉಂಟಾಗಿದ್ದು, ಟ್ರಸ್ಟ್‌ ಮ್ಯಾನೇಜಮಂಟ್‌ ನಿರ್ವಹಣೆಯಿಂದಾಗಿ ಆರ್ಥಿಕ
ಕಾರ್ಯನಿರ್ವಹಣೆಯಲ್ಲಿ ಯಾವುದೆ ಬದ್ದತೆಗಳಿಲ್ಲ. ಇದು ಅನಿಶ್ಚಿತ ಪಿಂಚಣಿ ಯೋಜನೆಯಾಗಿದ್ದು, ರಾಜ್ಯದಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1.80 ಲಕ್ಷ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿ ಸಾಮಾಜಿಕ ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ ಅಮರೇಶ ಬಿರಾದಾರ್‌ಗೆ ಮನವಿ ಸಲ್ಲಿಸಿದರು.
 
ನೌಕರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕುರ್ಡಿ, ಆರೀಫ್‌ ಮೀಯಾ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ, ಮೂಕಪ್ಪ ಕಟ್ಟಿಮನಿ, ಶ್ರೀಶೈಲಗೌಡ, ಹಂಪಣ್ಣ ಚಂಡೂರು, ತಿಮ್ಮಣ್ಣ ಬಲ್ಲಟಗಿ, ಸುರೇಶ ಕುರ್ಡಿ, ಶಿವುಕುಮಾರ ರಾಮದುರ್ಗ, ಭೀಮಣ್ಣ ಉದಾºಳ, ಹಂಪನಗೌಡ, ಈರಣ್ಣ ನಾಯಕ, ನರಸಿಂಹ ಸಿ.ಎಂ., ಮಂಜುನಾಥ, ಖಾದರ್‌, ವೆಂಕಟೇಶ, ಶಿವರೆಡ್ಡಿ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next