Advertisement

Petrol, Diesel ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

05:36 PM Jun 21, 2024 | Shreeram Nayak |

ತೀರ್ಥಹಳ್ಳಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಗೃಹ ಸಚಿವ,ಶಾಸಕ ಆರಗ ಜ್ಞಾನೇಂದ್ರ ರವರ ನೇತೃತ್ವದಲ್ಲಿ ಬಿಜೆಪಿಯ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆ ತಡೆದು ಪಟ್ಟಣದ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

Advertisement

ಇದೇ ವೇಳೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ವಾಹನವನ್ನು ಹಗ್ಗದಿಂದ ನೊಗ ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.

ನಂತರ ಕೊಪ್ಪ ಸರ್ಕಲ್ ನಿಂದ ಗಾಂಧಿ ಔಕದ ವರೆಗೆ ಪಾದಯಾತ್ರೆ ಮೂಲಕ ತೆರಳಿ ತಾಲೂಕು ದಂಡಾಧಿಕಾರಿಗೆ ಜಿಲ್ಲಾಧಿಕಾರಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಹಿನಾಯವಾಗಿ ಸೋಲು ಅನುಭವಿಸಿದ ಕಾರಣ ರಾಜ್ಯದ ಜನರಿಗೆ ತೊಂದರೆ ಕೊಡಬೇಕು ಅನ್ನುವ ದೃಷ್ಠಿಯಿಂದ ಪೆಟ್ರೋಲ್ ಮೂರು ರೂಪಾಯಿ ಡೀಸೆಲ್ ಮೂರು ವರೆ ರೂಪಾಯಿ ಬೆಲೆ ಏರಿಕೆ ಮಾಡಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿ ಸೋತಿದ್ದರಿಂದ ಇಡೀ ರಾಜ್ಯದ ಜನತೆ ಬಹಳ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.ಆದರೆ ರಾಜ್ಯದಲ್ಲಿ ನಯಾಪೈಸೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಜನರು ನಿರೀಕ್ಷೆ ಹುಸಿಯಾಗಿದೆ.

Advertisement

ಕಾಂಗ್ರೆಸ್‌ನವರು ಕೊಟ್ಟಿರುವ ಐದು ಗ್ಯಾರಂಟಿಗಳ ಜೊತೆ ಆರನೆಯ ಗ್ಯಾರಂಟಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸುತ್ತೇವೆ ಎಂದಿದ್ದರು. ಆದರೆ ಈಗ ಅಂಗನವಾಡಿ ಕಾರ್ಯಕರ್ತೆಯರು ಸುರಿಯುವ ಮಳೆಯಲ್ಲಿಯೇ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿದೆ. ಅಂದು ಚುನಾವಣೆ ಸಂದರ್ಭದಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡಿ ಚುನಾವಣೆ ಗೆದ್ದ ಬಳಿಕ ಇಂದು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಕುಳಿತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತು ಕೂಡ ಆಡಿಸಲಿಲ್ಲ. ಅಕ್ಕಿ ಕೊಡುತ್ತೇವೆ ಎಂದರು ಅಕ್ಕಿ ಕೊಟ್ಟಿಲ್ಲ, ಕರೆಂಟ್ ಫ್ರೀ ಎಂದರು ಕರೆಂಟ್ ಬಿಲ್ ಹೆಚ್ಚಿಸಿದರು ನುಡಿದಂತೆ ನಡೆದಿದ್ದೇವೆ ಎಂದು ಪತ್ರಿಕೆಯಲ್ಲಿ ಕೊಟ್ಟಿದ್ದೇ ಕೊಟ್ಟಿದ್ದು. ವಿಧಾನ ಸಭೆಯಲ್ಲಿ ಕೂಡ ಘರ್ಜನೆ ಮಾಡುತ್ತಾರೆ ನೂರು ಬಾರಿ ಸುಳ್ಳುನ್ನು ಹೇಳುವ ರೀತಿ. ಬಜೆಟ್‌ನಲ್ಲಿ ಮೂರೂವರೆ ಲಕ್ಷ ಕೋಟಿ ಮಂಡನೆ ಮಾಡಿದ್ದಾರೆ ಅದರಲ್ಲಿ ಅರವತ್ತೆರೆಡು ಸಾವಿರ ಕೋಟಿ ಗ್ಯಾರಂಟಿಗೆಂದು ಇಟ್ಟಿದ್ದಾರೆ ಮತ್ತುಳಿದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಕೊಡುತ್ತೇವೆಂದು ಹೇಳಿದ್ದಾರೆ.

ಆದರೆ ಇದುವರೆಗೂ ಯಾವ ಅಭಿವೃದ್ಧಿಗೂ ನಯಾಪೈಸೆ ಹಣ ಕೊಟ್ಟಿಲ್ಲ. ಧರ್ಮಸ್ಥಳದಲ್ಲಿ ಮಹಿಳೆಯರೇ ಇವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಒಂದು ವರ್ಷದ ಒಳಗೆ ಇವರು ಜನಪ್ರಿಯತೆಯ‌ನ್ನು ಕಳೆದು ಕೊಂಡಿದ್ದಾರೆ.
ಈಗ ತಾವು ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ನೀಡುವ ಉದ್ದೇಶದಿಂದ ಹಣ ಸಂಗ್ರಹಿಸಲು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿ ರಾಜ್ಯದ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಮಾಡುತ್ತಿದಾರೆ.

ಕೇವಲ ತೈಲ ಬೆಲೆ ಅಲ್ಲದೆ ಮನೆಗಳ ಸುಂಕ, ಸ್ಟ್ಯಾಂಪ್ ಚಾರ್ಜ್, ಬಾಂಡು ಸೇರಿದಂತೆ ಇನ್ನೂ ಅನೇಕ ದಿನಬಳಿಕೆ ವಸ್ತುಗಳ ಬೆಲೆ ಹೆಚ್ಚು ಮಾಡುವ ಮೂಲಕ ರಾಜ್ಯದ ಜನರನ್ನು ಸಂಕಷ್ಟಕ್ಕೆ ತಂದಿದೆ ಎಂದರು.

ಈ ವೇಳೆ ತಾಲೂಕಿನ ಮಂಡಲ ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವಿನ್, ಸೊಪ್ಪು ಗುಡ್ಡೆ ರಾಘವೇಂದ್ರ , ಚಂದವಳ್ಳಿ ಸೋಮಶೇಖರ್ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಕುಕ್ಕೆ ಪ್ರಶಾಂತ್,ಚಕ್ಕಡಬೈಲು ರಾಘವೇಂದ್ರ ,ಹಸಿರುಮನೆ ನಂದನ್,ಕಾಸರವಳ್ಳಿ ಶ್ರೀನಿವಾಸ್, ಮಧುರಾಜ್ ಹೆಗಡೆ ತೂದೂರು, ಅಣ್ಣಪ್ಪ ಮೇಲಿನ ಕುರುವಳ್ಳಿ,ಪೂರ್ಣೇಶ್ ಪೂಜಾರಿ, ಪ್ರಮೋದ್ ಪೂಜಾರಿ , ಸಂತೋಷ್ ಬದನೆಹಿತ್ತಲು ಗಂಗಾಧರ ತಲವಡಕ ಸೇರಿದಂತೆ ಬಿಜೆಪಿ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next