Advertisement

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

10:51 PM May 23, 2024 | Team Udayavani |

ಬೆಂಗಳೂರು: ಹೀನ ಕೃತ್ಯವೆಸಗಿ ದೇಶ ಬಿಟ್ಟು ಹೋಗಲು ಪ್ರಜ್ವಲ್‌ ರೇವಣ್ಣ ಬಳಸಿಕೊಂಡಿರುವ ರಾಜತಾಂತ್ರಿಕ ಪಾಸ್‌ಪೋರ್ಟನ್ನು ರದ್ದುಪಡಿಸಬೇಕೆಂದು ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೂಮ್ಮೆ ಮನವಿ ಮಾಡಿದ್ದಾರೆ.

Advertisement

ಈ ಕುರಿತು ಪ್ರಧಾನಿಗೆ 2ನೇ ಬಾರಿಗೆ ಪತ್ರ ಬರೆದಿರುವ ಸಿಎಂ, ಪ್ರಜ್ವಲ್‌  ಎಸಗಿರುವ ಗಂಭೀರ ಸರಣಿ ಪ್ರಕರಣದ ಕುರಿತು ಮತ್ತೂಮ್ಮೆ ತಮ್ಮ ಗಮನ ಸೆಳೆಯಲು ಈ ಪತ್ರ ಬರೆಯುತ್ತಿದ್ದೇನೆ. ಈ ಘಟನೆಯು ಕರ್ನಾಟಕದ ಜನರ ಮನಸ್ಸಿಗೆ ಆಘಾತ ಉಂಟು ಮಾಡಿರುವುದಷ್ಟೇ ಅಲ್ಲದೆ, ದೇಶಾದ್ಯಂತ ಆತಂಕಕ್ಕೂ ಕಾರಣವಾಗಿದೆ ಎಂದಿದ್ದಾರೆ.

ತನಿಖೆಯಿಂದ ತಪ್ಪಿಸಿಕೊಳ್ಳಲು ಹಕ್ಕಿನ ದುರುಪಯೋಗ:

ಪ್ರಜ್ವಲ್‌  ಹಾಸನ ಲೋಕಸಭಾ ಕ್ಷೇತ್ರದ ಸಂಸರಾಗಿದ್ದು, ಪ್ರಸ್ತುತ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ. ಮಾಜಿ ಪ್ರಧಾನಿಗಳ  ಮೊಮ್ಮಗನಾದ ಈತ ತನ್ನ ಹೀನ ಕೃತ್ಯ ಸುದ್ದಿಯಾಗುತ್ತಿದ್ದಂತೆ ಹಾಗೂ ಎಫ್ಐಆರ್‌ ದಾಖಲಾಗುವ ಕೆಲವೇ ಗಂಟೆಗಳ ಮೊದಲು ರಾಜತಾಂತ್ರಿಕ ಪಾಸ್‌ಪೋರ್ಟ್‌ (ಈ1135500) ಬಳಸಿಕೊಂಡು 2024ರ ಎ.27 ರಂದು ದೇಶ ಬಿಟ್ಟು ಜರ್ಮನಿಗೆ ಹಾರಿದ್ದಾನೆ. ದೇಶ ಬಿಟ್ಟು ಹೋಗಲು ತನ್ನ ರಾಜತಾಂತ್ರಿಕ ಹಕ್ಕನ್ನು ದುರುಪಯೋಗ ಮಾಡಿಕೊಂಡಿದ್ದು, ಅಪರಾಧ ತನಿಖಾ ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.

ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು:

Advertisement

ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಂದ್ರ ಸರಕಾರ ಅಥವಾ ಅಧೀನ ಸಂಸ್ಥೆಗಳು ಗಂಭೀರ ಕ್ರಮ ಕೈಗೊಳ್ಳಲೇಬೇಕು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. 1967ರ ಪಾಸ್‌ಪೋರ್ಟ್‌ ಕಾಯ್ದೆ ಸೆಕ್ಷನ್‌ 10(3)(ಹೆಚ್‌) ಹಾಗೂ ಸಂಬಂಧಿಸಿದ ಇತರ ಕಾನೂನುಗಳ ಅನ್ವಯ ಪ್ರಜ್ವಲ್‌ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಆತನನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next