ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ದುಂಡಾವರ್ತಿ ನಡೆಸಿದ ಫರ್ಜಿ ಕೆಫೆ ಪಾಲಿಕೆಯ ಉದ್ದಿಮೆ ಪರವಾನಗಿ ನಿಯಮಗಳನ್ನು ಉಲ್ಲಂ ಸಿದೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳ ಪರಿಶೀಲಿಸಿ ಪರವಾನಗಿ ರದ್ದುಪಡಿಸಲು ಚಿಂತನೆ ನಡೆಸಿದೆ.
ರೂಫ್ ಟಾಪ್‌ನಲ್ಲಿ ಯಾವುದೇ ರೀತಿಯ ಉದ್ದಿಮೆ ನಡೆಸುವುದು ನಿಯಮ ಬಾಹಿರ. ಆದರೆ, ಫರ್ಜಿ ಕೆಫೆ ಯುಬಿ ಸಿಟಿಯ 2ನೇ ಮಹಡಿಯಲ್ಲಿ ಹೋಟೆಲ್ ನಡೆಸುವುದಾಗಿ ಅನುಮತಿ ಪಡೆದು, 2ನೇ ಮಹಡಿಯ ಚಾವಣಿಯಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಿ ರೂಫ್ಟಾಪ್ ಹೋಟೆಲ್ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬ ದೂರುಗಳು ಮೊದಲಿನಿಂದಲೂ ಕೇಳಿಬರುತ್ತಿವೆ.
ನಲಪಾಡ್ ದುಂಡಾವರ್ತನೆಯ ನಂತರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ಉದ್ದಿಮೆ ಪರವಾನಗಿ ದಾಖಲೆಗಳನ್ನು ಪರಿಶೀಲಿಸಿದಾಗ ರೂಫ್ಟಾಪ್ ಹೋಟೆಲ್ ನಡೆಸುತ್ತಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲು ತೀರ್ಮಾನಿಸಿರುವ ಅಧಿಕಾರಿಗಳು ಆರೋಪ ಸಾಬೀತಾದರೆ ಪಾಲಿಕೆಯಿಂದ ನೀಡಿರುವ ಉದ್ದಿಮೆ ಪರವಾನಗಿ ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಫರ್ಜಿ ಕೆಫೆ ಪಡೆದಿರುವ ಉದ್ದಿಮೆ ಪರವಾನಗಿ ಫೆ.28ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೆಫೆಯ ಮಾಲೀಕರು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಷ್ಟರೊಳಗೆ ಸ್ಥಳ ಪರಿಶೀಲಿಸಿದ ಕ್ರಮಕೈಗೊಳ್ಳು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಹಿಂದೆಯೂ ನಿಯಮ ಉಲ್ಲಂಘನೆ: ಕಳೆದ ವರ್ಷ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದಾಗ ಫರ್ಜಿ ಕೆಫೆಯಲ್ಲಿ ಕುಡಿಯುವ ನೀರಿನ ಬಾಟಲ್‌ಗಳನ್ನು ನಿಯಮ ಮೀರಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದುದು ಕಂಡು ಬಂದಿತ್ತು. ಜತೆಗೆ ಆಹಾರ ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಫರ್ಜಿ ಕೆಫೆಗೆ 2 ಲಕ್ಷ ದಂಡ ವಿಧಿಸಿದ್ದರು.
ಯುಬಿ ಸಿಟಿಯಲ್ಲಿರುವ ಫರ್ಜಿ ಕೆಫೆ ಪಾಲಿಕೆಯ ಉದ್ದಿಮೆ ಪರವಾನಗಿ ಉಲ್ಲಂ ಸಿ ರೂಫ್ಟಾಪ್‌ನಲ್ಲಿ ಹೋಟೆಲ್ ನಡೆಸುತ್ತಿದ್ದು, ಕೂಡಲೇ ಹೋಟೆಲ್‌ನ ಉದ್ದಿಮೆ ಪರವಾನಗಿ ರದ್ದುಗೊಳಿಸಬೇಕು.
-ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷ ನಾಯಕ