Advertisement
ನೆರವಾಗಬೇಕು: ಕೊಡಗು, ಕರಾವಳಿ ಪ್ರದೇಶಗಳಲ್ಲಿ ಜನರು ವಾಸದ ಮನೆ ಜತೆಗೆ ಜೀವನೋಪಾಯಕ್ಕೆ ಇದ್ದ ತೋಟ, ತುಡಿಕೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅನೇಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅವರಿಗೆ ನೆರವಾಗುವುದು ಕನ್ನಡ ತಾಯಿಗೆ ಸೇವೆ ಸಲ್ಲಿಸಿದಂತೆ, ಈ ಹೊತ್ತಿನಲ್ಲಿ ಕಸಾಪ ಸಮ್ಮೇಳನಗಳನ್ನು ನಡೆಸುವುದು ಸರ್ವತಾ ಸಾಧುವಲ್ಲ, ಅವರಿಗೆ ನೆರವಾಗುವುದು ಸಮ್ಮೇಳನಕ್ಕಿಂತ ಮಿಗಿಲಾದುದ್ದು ಎಂದು ತಿಳಿಸಿದರು.
ಗೌರವಯುತ ಜವಾಬ್ದಾರಿಯನ್ನು ಅಧಿಕಾರವೆಂದು ತಿಳಿದು 3 ವರ್ಷಕ್ಕೆ ಇದ್ದ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿಯನ್ನೇ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸಹಕಾರಿ ಸಂಘಗಳ ನೋಂದಣಿ ಸಂಸ್ಥೆ ಪರಿಷತ್ತಿನ ಅಧ್ಯಕ್ಷರ ಅವಧಿ ಹೆಚ್ಚಿಸಬೇಕೆಂಬ ಪ್ರಸ್ತಾವನೆಯನ್ನು ಏಕಾಏಕಿ ತಿರಸ್ಕರಿಸಿ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಆದೇಶಕ್ಕೆ ಬೆಲೆಕೊಡದೆ ಪರಿಷತ್ತಿನ ರಾಜ್ಯಾಧ್ಯಕ್ಷರು ಹೈಕೋರ್ಟ್ಗೆ ಮೇಲ್ಮನವಿಸಲ್ಲಿಸಲು ಚಿಂತನೆ ನಡೆಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಸ್ವಾರ್ಥಕ್ಕಾಗಿ ಪರಿಷತ್ತನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅಧ್ಯಕ್ಷರ ಈ ಧೋರಣೆ ಖಂಡನೀಯ ಎಂದು ಹೇಳಿದರು. ಮೂರು ಲಕ್ಷದ ಹನ್ನೆರಡು ಸಾವಿರ ಕಸಾಪ ಸದಸ್ಯರನ್ನು ಮತ್ತು ಆರು ಕೋಟಿ ಕನ್ನಡಿಗರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಮಾಡಿರುವುದು ಸರಿಯಲ್ಲ. ಇಷ್ಟಕ್ಕೂ ಡಾ.ಮನುಬಳಿಗಾರ್ ಅವರನ್ನು ಕಸಾಪ ಸದಸ್ಯರು ಆಯ್ಕೆ ಮಾಡಿರುವುದು 3 ವರ್ಷದ ಅವಧಿಗೆ ಮಾತ್ರ. ಅಧ್ಯಕ್ಷರ ಅವಧಿ ಮಾರ್ಚ್ 2019ಕ್ಕೆ ಕೊನೆಗೊಳ್ಳುವುದರಿಂದ ಪರಿಷತ್ತಿನ ನಿಯಮಾನುಸಾರ 3 ತಿಂಗಳು ಮುಂಚಿತವಾಗಿ ಡಿಸೆಂಬರ್ 2018ಕ್ಕೆ ಆಡಳಿತಾಧಿಕಾರಿ ನೇಮಿಸಿ ಕಸಾಪ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಮಾರ್ಚ್ 2019ಕ್ಕೆ ಚುನಾವಣೆ ನಡೆಸಿ ರಾಜ್ಯ ಮತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.